
“ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ನಿಟ್ಟೆಯ ವಿದ್ಯಾ ಸಂಸ್ಥೆಯ ಹರಿಕಾರ ವಿನಯ್ ಹೆಗ್ಡೆ”-ಹರಿಪ್ರಸಾದ್ ರೈ
ಕಾರ್ಕಳ- ಇಲ್ಲಿನ ನಿಟ್ಟೆ ವಿಶ್ವ ವಿದ್ಯಾಲಯದ ಅಧೀನದಲ್ಲಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಅಂತರ್ ಕಾಲೇಜು ಕ್ರೀಡಾಕೂಟವನ್ನು ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಹರಿಪ್ರಸಾದ್ ರೈ ಉದ್ಘಾಟಿಸಿದರು.





ಈ ಸಂದರ್ಭ ಮಾತನಾಡಿದ ಹರಿ ಪ್ರಸಾದ್ ರೈ”ನಿಟ್ಟೆ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ವಿಶ್ವಮಟ್ಟಕ್ಕೆ ಬೆಳೆಸಿದ ವಿನಯ್ ಹೆಗ್ಡೆಯವರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದರು.ವಿದ್ಯಾಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆದು ವಿಶ್ವದಾದ್ಯಂತ ಮತ್ತಷ್ಟು ಖ್ಯಾತಿ ಪಡೆಯಲಿ ಎಂದು ಶುಭಹಾರೈಸಿದರು.






