ಕ್ರಿಕೆಟ್ಕಿಂಗ್ ಕೊಹ್ಲಿ ದಾಖಲೆ ಪುಡಿಗಟ್ಟಿದ ಕನ್ನಡಿಗ ರಾಹುಲ್

ಕಿಂಗ್ ಕೊಹ್ಲಿ ದಾಖಲೆ ಪುಡಿಗಟ್ಟಿದ ಕನ್ನಡಿಗ ರಾಹುಲ್

-

- Advertisment -spot_img

ಕಿಂಗ್ ಕೊಹ್ಲಿ ದಾಖಲೆ ಪುಡಿಗಟ್ಟಿದ ಕನ್ನಡಿಗ ರಾಹುಲ್

ಕನ್ನಡಿಗ ಕೆ.ಎಲ್ ರಾಹುಲ್ ಟಿ20 ಕ್ರಿಕೆಟ್’ನಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಹುಲ್ ಅಮೋಘ ಶತಕ ಬಾರಿಸಿದ್ದರು. ಈ ಶತಕದ ವೇಳೆ
ಟಿ20 ಕ್ರಿಕೆಟ್’ನಲ್ಲಿ ಅತೀ ವೇಗವಾಗಿ 8 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ ಬ್ಯಾಟರ್ ಎಂಬ ದಾಖಲೆ ಬರೆದಿದ್ದರು.

ರಾಹುಲ್ 224ನೇ ಟಿ20 ಇನ್ನಿಂಗ್ಸ್’ನಲ್ಲಿ 8 ಸಾವಿರ ರನ್’ಗಳ ಮೈಲುಗಲ್ಲು ಸ್ಥಾಪಿಸುವ ಮೂಲಕ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಹೆಸರಲ್ಲಿದ್ದ ಭಾರತೀಯ ದಾಖಲೆಯನ್ನು ಪುಡಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ 243 ಟಿ20 ಇನ್ನಿಂಗ್ಸ್’ಗಳಲ್ಲಿ 8 ಸಾವಿರ ರನ್’ಗಳ ದಾಖಲೆ ಬರೆದಿದ್ದರು.

ಟಿ20 ಕ್ರಿಕೆಟ್’ಲ್ಲಿ ಅತೀ ವೇಗವಾಗಿ 8 ಸಾವಿರ ರನ್ ಕಲೆ ಹಾಕಿರುವ ವಿಶ್ವದಾಖಲೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಅವರ ಹೆಸರಲ್ಲಿದೆ. ಕ್ರಿಸ್ ಗೇಲ್ 213 ಇನ್ನಿಂಗ್ಸ್’ಗಳಲ್ಲಿ ಈ ಸಾಧನೆ ಮಾಡಿದ್ದರೆ, 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಅಜಂ 218 ಇನ್ನಿಂಗ್ಸ್’ಗಳಲ್ಲಿ 8 ಸಾವಿರ ಟಿ20 ರನ್ ಪೂರ್ತಿಗೊಳಿಸಿದ್ದಾರೆ.

ಗುಜರಾತ್ ಟೈಟನ್ಸ್ ವಿರುದ್ಧ ಭಾನುವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅಬ್ಬರಿಸಿದ್ದ ಕೆ.ಎಲ್ ರಾಹುಲ್ 65 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ ಅಜೇಯ 112 ರನ್ ಸಿಡಿಸಿದ್ದರು. ಐದು ಐಪಿಎಲ್ ವೃತ್ತಿಜೀವನದಲ್ಲಿ ರಾಹುಲ್ ಗಳಿಸಿದ ಐದನೇ ಶತಕ. ಮೂರು ಐಪಿಎಲ್ ತಂಡಗಳ ಪರ ಶತಕ ಬಾರಿಸಿದ ಮೊದಲ ಕ್ರಿಕೆಟಿಗನೆಂದ ಹಿರಿಮೆಗೂ ರಾಹುಲ್ ಪಾತ್ರರಾಗಿದ್ದಾರೆ. 2018ರಲ್ಲಿ ಪಂಜಾಬ್ ಕಿಂಗ್ಸ್ ಪರ ಶತಕ ಬಾರಿಸಿದ್ದ ರಾಹುಲ್ 2022ರಲ್ಲಿ ಲಕ್ನೋ ಸೂಪರ್ ಜಯಂಟ್ಸ್ ಪರ ಮತ್ತು 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಶತಕ ಸಿಡಿಸಿದ್ದಾರೆ. ರಾಹುಲ್ ಬಾರಿಸಿರುವ ಒಟ್ಟು ಐದು ಐಪಿಎಲ್ ಶತಕಗಳಲ್ಲಿ ಮೂರು ಶತಕಗಳು ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧವೇ ದಾಖಲಾಗಿವೆ.

ಟಿ20 ಕ್ರಿಕೆಟ್’ಲ್ಲಿ ಅತೀ ವೇಗವಾಗಿ 8000 ರನ್
1. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 213 ಇನ್ನಿಂಗ್ಸ್
2. ಬಾಬರ್ ಅಜಮ್ (ಪಾಕಿಸ್ತಾನ): 218 ಇನ್ನಿಂಗ್ಸ್
3. ಕೆ.ಎಲ್ ರಾಹುಲ್ (ಭಾರತ): 224 ಇನ್ನಿಂಗ್ಸ್
4. ವಿರಾಟ್ ಕೊಹ್ಲಿ (ಭಾರತ): 243 ಇನ್ನಿಂಗ್ಸ್
5. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ): 244 ಇನ್ನಿಂಗ್ಸ್

ಅತೀ ವೇಗದ ಟಿ20 ರನ್ ಮೈಲುಗಲ್ಲು
5000 ರನ್: ಕೆ.ಎಲ್ ರಾಹುಲ್
6000 ರನ್: ಕೆ.ಎಲ್ ರಾಹುಲ್
7000 ರನ್: ಕೆ.ಎಲ್ ರಾಹುಲ್
8000 ರನ್: ಕೆ.ಎಲ್ ರಾಹುಲ್
9000 ರನ್: ವಿರಾಟ್ ಕೊಹ್ಲಿ
10000 ರನ್: ವಿರಾಟ್ ಕೊಹ್ಲಿ
11000 ರನ್: ವಿರಾಟ್ ಕೊಹ್ಲಿ
12000 ರನ್: ವಿರಾಟ್ ಕೊಹ್ಲಿ
13000 ರನ್: ವಿರಾಟ್ ಕೊಹ್ಲಿ

LEAVE A REPLY

Please enter your comment!
Please enter your name here

17 − twelve =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you