Home ಕ್ರಿಕೆಟ್ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ವತಿಯಿಂದ ಉದ್ಯಾವರ ಬೋಳಾರಗುಡ್ಡೆ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ವತಿಯಿಂದ ಉದ್ಯಾವರ ಬೋಳಾರಗುಡ್ಡೆ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ವತಿಯಿಂದ  ಉದ್ಯಾವರ  ಬೋಳಾರಗುಡ್ಡೆ  ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

 

ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ, ಬೋಳಾರಗುಡ್ಡೆ ಉದ್ಯಾವರ ಇಲ್ಲಿ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಗುರುವಂದನ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಕುಮಾರ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಬೇಕಾದಂತಹ ಉತ್ತಮ ಮೂಲಭೂತ ಅವಕಾಶಗಳನ್ನು ಕಲ್ಪಿಸಿ ಕೊಟ್ಟಾಗ ಭವಿಷ್ಯ ಉತ್ತಮವಾಗಿರುತ್ತದೆ, ಆ ನಿಟ್ಟಿನಲ್ಲಿ ನಮ್ಮ ತಂಡ ಖಂಡಿತ ನಮಗಾಗುವ ರೀತಿಯಲ್ಲಿ ಸಹಕರಿಸಲು ಸಿದ್ಧರಿದ್ದೇವೆ, ಈ ಸಂಸ್ಥೆಯ ಎಲ್ಲಾ ಶಿಕ್ಷಕರೂ ಮಕ್ಕಳೊಂದಿಗೆ ಬೆರೆಯುತ್ತ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಲಿ.ಸರ್ಕಾರಿ ಶಾಲೆಗಳ ಮಕ್ಕಳೂ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಬೇಕಿದೆ ಎಂದು ಮಕಳನ್ನು ಹುರಿದುಂಬಿಸುತ್ತ ಮಾತನಾಡಿದರು.

ಸ್ಪೋರ್ಟ್ಸ್ ಕನ್ನಡ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್ಯ ಅವರು ಮಾತನಾಡುತ್ತಾ ಕಡು ಬಡತನದಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯಕ್ಕೆ ಒಂದು ಸುಂದರ ತಳಹದಿಯನ್ನು ಸಂಘ ಸಂಸ್ಥೆ ಗಳ ದಾನಿಗಳು ನೀಡಿದಾಗ ಆ ಮಕ್ಕಳು ಖಂಡಿತ ಓದುವುದಕ್ಕೆ ಸ್ಫೂರ್ತಿ ಪಡೆದುಕೊಳ್ಳುತ್ತಾರೆ..ವಿದ್ಯೆಗೆ ಸಹಕಾರ ಸಿಕ್ಕಾಗ ಅದೇ ಭವಿಷ್ಯದ ಅತ್ಯುತ್ತಮ ಅವಕಾಶಗಳಿಗೆ ಕಾರಣವಾಗುತ್ತದೆ ಎಂದರು.

 

ವೆಂಕಟರಮಣ ಸಂಸ್ಥೆಯ ಗೌರವ ಸಲಹೆಗಾರರಾದ ಜಿತೇಂದ್ರ ಶೆಟ್ಟಿ ಉದ್ಯಾವರ ಅವರು ಮಾತನಾಡುತ್ತಾ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಸಂಸ್ಥೆ ವೆಂಕಟರಮಣ ಸಂಸ್ಥೆ, ಸರ್ಕಾರಿ ಶಾಲೆ ಯಾವುದೇ ಖಾಸಗಿ ಸಂಸ್ಥೆಗಿಂತಲೂ ಕಡಿಮೆಯಿರಬಾರದು ಅನ್ನುವ ಉದ್ದೇಶದಿಂದ ಇಂದು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುವ ಅದ್ಭುತ ಕಾರ್ಯವನ್ನು ಕೈಗೊಂಡು ಯಶಸ್ವಿಯಾಗಿದೆ.ಸರ್ವರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.

ಉಪಾಧ್ಯಕ್ಷರಾದ ವಿಜಯ್ ಕೋಟ್ಯಾನ್ ಪಿತ್ರೋಡಿ,ಗೌರವ ಸಲಹೆಗಾರರದ ಸತೀಶ್ ಕುಂದರ್, ಪ್ರವೀಣ್ ಕುಮಾರ್, ಪ್ರಕಾಶ್ ಶೆಟ್ಟಿ, ನಾಗೇಶ್ ಮೈಂದನ್,ಹರಿಶ್ಚಂದ್ರ, ಯುವರಾಜ್ ಸಾಲ್ಯಾನ್, ದೇವರಾಜ್ ಸುವರ್ಣ, ಉಪಸ್ಥಿತರಿದ್ದರು.

 

 

ಬಹುವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನೇ ಉಸಿರಾಗಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯ ಬೆಳಗಿದ ಗುರುಗಳಾದ ಗುರುಪ್ರಸಾದ್,ಹಾಗೂ ಶಿಕ್ಷಕಿ ಸುಮನಾ ಟೀಚರ್ ಅವರನ್ನು ಗುರುಪೂರ್ಣಿಮೆಯ ನಿಮಿತ್ತ ಗೌರವಿಸಲಾಯಿತು.
ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here

fourteen − 4 =

ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ವತಿಯಿಂದ ಉದ್ಯಾವರ ಬೋಳಾರಗುಡ್ಡೆ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

  ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ, ಬೋಳಾರಗುಡ್ಡೆ ಉದ್ಯಾವರ ಇಲ್ಲಿ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಗುರುವಂದನ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಕುಮಾರ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಬೇಕಾದಂತಹ ಉತ್ತಮ ಮೂಲಭೂತ ಅವಕಾಶಗಳನ್ನು ಕಲ್ಪಿಸಿ ಕೊಟ್ಟಾಗ ಭವಿಷ್ಯ ಉತ್ತಮವಾಗಿರುತ್ತದೆ, ಆ ನಿಟ್ಟಿನಲ್ಲಿ ನಮ್ಮ ತಂಡ ಖಂಡಿತ ನಮಗಾಗುವ ರೀತಿಯಲ್ಲಿ ಸಹಕರಿಸಲು ಸಿದ್ಧರಿದ್ದೇವೆ, ಈ ಸಂಸ್ಥೆಯ ಎಲ್ಲಾ ಶಿಕ್ಷಕರೂ ಮಕ್ಕಳೊಂದಿಗೆ ಬೆರೆಯುತ್ತ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಲಿ.ಸರ್ಕಾರಿ ಶಾಲೆಗಳ ಮಕ್ಕಳೂ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಬೇಕಿದೆ ಎಂದು ಮಕಳನ್ನು ಹುರಿದುಂಬಿಸುತ್ತ ಮಾತನಾಡಿದರು. ಸ್ಪೋರ್ಟ್ಸ್ ಕನ್ನಡ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್ಯ ಅವರು ಮಾತನಾಡುತ್ತಾ ಕಡು ಬಡತನದಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯಕ್ಕೆ ಒಂದು ಸುಂದರ ತಳಹದಿಯನ್ನು ಸಂಘ ಸಂಸ್ಥೆ ಗಳ ದಾನಿಗಳು ನೀಡಿದಾಗ ಆ ಮಕ್ಕಳು ಖಂಡಿತ ಓದುವುದಕ್ಕೆ ಸ್ಫೂರ್ತಿ ಪಡೆದುಕೊಳ್ಳುತ್ತಾರೆ..ವಿದ್ಯೆಗೆ ಸಹಕಾರ

Send this to a friend