ಕ್ರಿಕೆಟ್ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವ ಗುರಿಯೊಂದಿಗೆ ಟೀಮ್‌ ಇಂಡಿಯಾ...

ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವ ಗುರಿಯೊಂದಿಗೆ ಟೀಮ್‌ ಇಂಡಿಯಾ ಮೈದಾನಕ್ಕಿಳಿಯಲು ಸಜ್ಜು

-

- Advertisment -spot_img

ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವ ಗುರಿಯೊಂದಿಗೆ ಟೀಮ್‌ ಇಂಡಿಯಾ ಮೈದಾನಕ್ಕಿಳಿಯಲು ಸಜ್ಜು

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಟೀಮ್ ಇಂಡಿಯಾ ಹೊಂದಿದೆ. ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯ ಶುಕ್ರವಾರದಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಶುಭಮನ್ ಗಿಲ್ ತಂಡಕ್ಕೆ ಮೊದಲ ಟೆಸ್ಟ್ ಗೆಲ್ಲಲು ಕೇವಲ ಮೂರು ದಿನಗಳು ಸಾಕಾಯಿತು.

ಮೊದಲ ಟೆಸ್ಟ್‌ನಲ್ಲಿ ಭಾರತವು ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 140 ರನ್‌ಗಳ ಭರ್ಜರಿ ಜಯ ಸಾಧಿಸಿ ಏಕಪಕ್ಷೀಯ ಪ್ರದರ್ಶನ ನೀಡಿತ್ತು. ಎರಡನೇ ಟೆಸ್ಟ್‌ನಲ್ಲಿ ಭಾರತವು ಇದೇ ರೀತಿಯ ಅಧಿಕಾರಯುತ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದೆ. ಈ ಬಾರಿಯೂ ಶುಭಮನ್ ಗಿಲ್ ನೇತೃತ್ವದ ತಂಡವು ಅದೇ ರೀತಿ ಆಡಲು ಸಜ್ಜಾಗಿದೆ.

ಭಾರತ ಹಾಗೂ ವೆಸ್ಟ್‌ ಇಂಡೀಸ್ ನಡುವಣ ಎರಡನೇ ಪಂದ್ಯ ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಸರಣಿಯನ್ನು ವಶಕ್ಕೆ ಪಡೆಯುವ ಕನಸು ಶುಭಮನ್ ಗಿಲ್ ಪಡೆಯದ್ದಾಗಿದೆ. ಇನ್ನು ಆಡಿದ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ವೆಸ್ಟ್‌ ಇಂಡೀಸ್ ತಂಡ ಪುಟಿದೇಳುವ ಕನಸು ಕಾಣುತ್ತಿದೆ.

ಅಹಮದಾಬಾದ್‌ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ರವೀಂದ್ರ ಜಡೇಜಾ, ಕೆಎಲ್ ರಾಹುಲ್, ಧ್ರುವ್ ಜುರೇಲ್‌ ಶತಕ ಬಾರಿಸಿದರೆ, ಬೌಲಿಂಗ್‌ನಲ್ಲಿ ಸಿರಾಜ್‌, ಜಡ್ಡು ಕಮಾಲ್‌ ಪ್ರದರ್ಶನ ನೀಡಿದರು. ಜೇಟ್ಲಿ ಪಿಚ್‌ನಲ್ಲೂ ಇದೇ ಪ್ರದರ್ಶನ ನೀಡುವ ಕನಸು ಭಾರತ ತಂಡದ್ದಾಗಿದೆ.

ಈ ಮೈದಾನದಲ್ಲೂ ಟೀಮ್ ಇಂಡಿಯಾ ಮತ್ತೊಂದು ಏಕಪಕ್ಷೀಯ ಜಯ ದಾಖಲಿಸುವ ಕನಸು ಹೊಂದಿದೆ. 14 ವರ್ಷದ ಬಳಿಕ ಇದೇ ಅಂಗಳದಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ಕಾದಾಟ ನಡೆಸಲಿವೆ. ಅರುಣ್‌ ಜೇಟ್ಲಿ ಮೈದಾನದಲ್ಲಿ ಸ್ಪಿನ್ ಬೌಲರ್‌ಗಳು ಅಬ್ಬರ ನಡೆಸಲಿದ್ದಾರೆ. ಇನ್ನು ಬೌನ್ಸ್‌ ಸಹ ವೇಗದ ಬೌಲರ್‌ಗಳಿಗೆ ನೆರವು ನೀಡಲಿದೆ. ವೆಸ್ಟ್‌ ಇಂಡೀಸ್‌ ಬ್ಯಾಟರ್‌ಗಳಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ. ಎರಡನೇ ಟೆಸ್ಟ್‌ನಲ್ಲಿ ಯಾರು ಮಿಂಚುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಭಾರತ ಮತ್ತೆ ಗೆಲ್ಲುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

20 − fourteen =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...
- Advertisement -spot_imgspot_img

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

Must read

- Advertisement -spot_imgspot_img

You might also likeRELATED
Recommended to you