Categories
ಕ್ರಿಕೆಟ್

ಕ್ರೀಡಾ ಕ್ಷೇತ್ರದ ಸಾಧನೆ- ತುಮಕೂರು ಪ್ರಕಾಶ್ ಚಕ್ರವರ್ತಿಯವರಿಗೆ ಒಲಿದ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕಳೆದ ಎರಡು ದಶಕಗಳ ಹಿಂದೆ ಚಕ್ರವರ್ತಿ ಗೆಳೆಯರ ಬಳಗ ತಂಡವನ್ನು ಕಟ್ಟಿ,ಕ್ರಿಕೆಟ್,ವಾಲಿಬಾಲ್,ಷಟಲ್ ಹೀಗೆ ಅನೇಕ ಕ್ರೀಡಾಕೂಟಗಳನ್ನು ಸಂಘಟಿಸಿ ಜೊತೆಯಾಗಿ ರಕ್ತದಾನ ಶಿಬಿರದಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಸಂಘಟಿಸಿ ಸಮಾಜಮುಖಿಯಾಗಿ ಬೆಳೆಸಿದ ತಂಡವಿಂದು ರಾಜ್ಯದಲ್ಲೇ ಅಗ್ರಗಣ್ಯ ತಂಡಗಳ ಸಾಲಿನಲ್ಲಿ ನಿಂತಿದೆ.ಪ್ರತಿವರ್ಷವು ನಡೆಯುವ ಕ್ರಿಕೆಟ್ ಪಂದ್ಯಾಕೂಟಗಳು ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದಿದೆ.


ಈ ತಂಡವನ್ನು ಸಮರ್ಥವಾಗಿ ಕಟ್ಟಿ,ಸಮಾಜದ ಯುವ ಜನಾಂಗಕ್ಕೆ ಸ್ಪೂರ್ತಿಯ ಸಂದೇಶವನ್ನು ನೀಡುತ್ತಿರುವ ಚಕ್ರವರ್ತಿ ಗೆಳೆಯರ ಬಳಗದ ಸಾರಥಿ ತುಮಕೂರಿನ ಪ್ರಕಾಶ್ ಟಿ‌‌.ಸಿ ಇವರಿಗೆ ಅರ್ಹವಾಗಿ ತುಮಕೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ನಡೆದ ಭವ್ಯ ಸಮಾರಂಭದಲ್ಲಿ ಅತಿಥಿ ಗಣ್ಯರ ಸಮ್ಮುಖದಲ್ಲಿ ಪ್ರಕಾಶ್.ಟಿ‌‌.ಸಿ ಯವರಿಗೆ ಅಭಿನಂದನಾಪೂರ್ವಕವಾಗಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.