Categories
ಕ್ರಿಕೆಟ್ ಯಶೋಗಾಥೆ

ಎಂಎಸ್ ಧೋನಿ ಹುಟ್ಟುಹಬ್ಬ: ಧೋನಿ ಹುಟ್ಟುಹಬ್ಬದಂದು 77 ಅಡಿ ಕಟೌಟ್, ಸಂಭ್ರಮಾಚರಣೆಗೆ ತಯಾರಿ ಆರಂಭಿಸಿದ ‘ಮಹಿ’ ಅಭಿಮಾನಿಗಳು

ಎಂಎಸ್ ಧೋನಿ ಜನ್ಮದಿನ, ಸುದ್ದಿ: ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಶುಕ್ರವಾರ ಅಂದರೆ 7ರಂದು ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಧೋನಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.
ಧೋನಿ ಬ್ಯಾಟಿಂಗ್ ವೀಕ್ಷಿಸಲು ವಿಶ್ವದ ಮೂಲೆ ಮೂಲೆಯಿಂದ ಜನರು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಐಪಿಎಲ್ 2023 ರಲ್ಲಿಯೂ ಸಹ, ಅವರು ಅಭಿಮಾನಿಗಳಿಂದ ಸಾಕಷ್ಟು ಪ್ರೀತಿಯನ್ನು ಪಡೆದರು.
42ನೇ ವರ್ಷಕ್ಕೆ ಕಾಲಿಡಲಿರುವ ಧೋನಿ ಹುಟ್ಟುಹಬ್ಬಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ಸಿದ್ಧತೆಗಳು ಕಂಡು ಬರುತ್ತಿವೆ. ಹೈದರಾಬಾದ್‌ನಲ್ಲಿ ಧೋನಿಯ 77 ಅಡಿ ಎತ್ತರದ ಕಟ್‌ಔಟ್‌ ಅಳವಡಿಸಲಾಗಿದೆ. ಈ ಕಟ್ ಔಟ್ ನಲ್ಲಿ ಎಂಎಸ್ ಧೋನಿಯ ದೈತ್ಯ ರೂಪ ಕಾಣುತ್ತಿದೆ. ಧೋನಿ ಭಾರತ ತಂಡದ ODI ಜರ್ಸಿಯನ್ನು ಕೈಯಲ್ಲಿ ಬ್ಯಾಟ್‌ನೊಂದಿಗೆ ಧರಿಸಿರುವುದು ಕಂಡುಬಂದಿದೆ. ಧೋನಿಯ ಈ ಚಿತ್ರವು 2011 ರ ವಿಶ್ವಕಪ್ ಫೈನಲ್‌ನದ್ದಾಗಿದೆ.
ಧೋನಿಯ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರತಿ ವರ್ಷದಂತೆ ಧೋನಿ ತಮ್ಮ ಪತ್ನಿ ಮತ್ತು ಮಗಳು ಝಿವಾ ಅವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಧೋನಿ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಈಗಾಗಲೇ ಕಾಯುತ್ತಿದ್ದಾರೆ. ಧೋನಿ 4 ಜುಲೈ 2010 ರಂದು ಸಾಕ್ಷಿ ರಾವತ್ ಅವರನ್ನು ವಿವಾಹವಾದರು. ಅದೇನೆಂದರೆ, ಹುಟ್ಟುಹಬ್ಬಕ್ಕೆ ಮೂರು ದಿನ ಬಾಕಿ ಇರುವಾಗಲೇ ಧೋನಿ ಮದುವೆಯಾದರು.
ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು 2019 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು ರನ್ ಔಟ್ ಆಗಿ ಪೆವಿಲಿಯನ್ ಗೆ ಮರಳಿದ್ದರು. ಅವರ ಚಿತ್ರಗಳು ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ತಾಜಾವಾಗಿವೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಧೋನಿ ಐಪಿಎಲ್‌ನಲ್ಲಿ ಅಬ್ಬರಿಸುತ್ತಿದ್ದಾರೆ.
 *ಐಪಿಎಲ್‌ನಲ್ಲಿ ಮತ್ತೊಮ್ಮೆ ಸದ್ದು ಮಾಡಲಿದೆ ಧೋನಿ ಬ್ಯಾಟ್:* ಐಪಿಎಲ್ 2023 ರಲ್ಲಿ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಫಿನಿಶರ್ ಪಾತ್ರವನ್ನು ನಿರ್ವಹಿಸಿದರು. ಅವರು ಐಪಿಎಲ್ 2024ರಲ್ಲೂ ಆಡಲಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ನೋಡಿ ಇನ್ನೂ ಒಂದು ಸೀಸನ್‌ಗೆ ಐಪಿಎಲ್‌ನಲ್ಲಿ ಭಾಗವಹಿಸಲು ಬಯಸುತ್ತೇನೆ ಎಂದು ಧೋನಿ ಸ್ವತಃ ಖಚಿತಪಡಿಸಿದ್ದಾರೆ. ಹೀಗಿರುವಾಗ ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದ ಮಹಿ ಅವರನ್ನು ಅಭಿಮಾನಿಗಳು ಮತ್ತೊಮ್ಮೆ ಕಣ್ತುಂಬಿಕೊಳ್ಳಲಿದ್ದಾರೆ.