Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಪ್ರಯುಕ್ತ ಟಿ.ಸಿ.ಎ ಉಡುಪಿ ಆಶ್ರಯದಲ್ಲಿ CRIC IQ ರಸಪ್ರಶ್ನೆ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಕ್ರಿಕೆಟ್ ನ ಬಗ್ಗೆ  ಹೆಚ್ಚಿನ ಜ್ಞಾನ ಮತ್ತು ಅರಿವನ್ನು ಮೂಡಿಸುವಲ್ಲಿ ಉತ್ತಮ ವೇದಿಕೆಯಾಗಲಿದೆ-ಗೌತಮ್ ಶೆಟ್ಟಿ
ಉಡುಪಿ- ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭವನ್ನು ಸ್ಮರಿಸಲು, ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಇವರು  MAHE ವಿಶ್ವವಿದ್ಯಾನಿಲಯದೊಂದಿಗೆ ಕ್ರಿಕೆಟ್ ನ  ಸುತ್ತ ಕೇಂದ್ರೀಕೃತವಾದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲು ಸಹಕರಿಸುತ್ತಿದ್ದಾರೆ.  ಈ ಕಾರ್ಯಕ್ರಮವು ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
”ಈ ಅತ್ಯಾಕರ್ಷಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು  ಗೌರವಾನ್ವಿತ ಶಿಕ್ಷಣ ಸಂಸ್ಥೆಗೆ ಆಹ್ವಾನವನ್ನು ನೀಡುವುದರಲ್ಲಿ ನಾವು ಬಹಳ ಸಂತೋಷಪಡುತ್ತೇವೆ” ಎಂದು ಗುರುವಾರ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ ತಿಳಿಸಿದ್ದಾರೆ.
”ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ, ಈ ರಾಷ್ಟ್ರೀಯ ಕ್ರೀಡಾ ದಿನವನ್ನು ಮರೆಯಲಾಗದ ಅನುಭವವನ್ನಾಗಿ ಮಾಡಲು ನೀವು ಕೊಡುಗೆ ನೀಡುತ್ತೀರಿ. ನಿಮ್ಮ ತಂಡದ ಭಾಗವಹಿಸುವಿಕೆಯನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತೇವೆ”  ಎಂದು ಮನವಿ ಮಾಡಿದರು.
ಈ ರಸಪ್ರಶ್ನೆ ಕ್ರಿಕೆಟ್ ಗೆ ಸಂಬಂಧಿತವಾಗಿದೆ ಮತ್ತು ಇದರ ಸಾಮಾನ್ಯ ಮಾಹಿತಿ ಇಲ್ಲಿದೆ.
• ಈವೆಂಟ್ ನಾಲ್ಕು ವಿಭಿನ್ನ ವಿಭಾಗಗಳನ್ನು ಒಳಗೊಂಡಿರುತ್ತದೆ: ಪ್ರಾಥಮಿಕ ಶಾಲೆಗಳು (7ನೇ ತರಗತಿವರೆಗೆ), ಪ್ರೌಢಶಾಲೆಗಳು (8ನೇ-10ನೇ ತರಗತಿ), ಪಿಯುಸಿ ಕಾಲೇಜು (1ನೇ ಮತ್ತು 2ನೇ ಪಿಯುಸಿ), ಮತ್ತು ಪದವಿ ಕಾಲೇಜುಗಳು (1ನೇ, 2ನೇ, ಮತ್ತು 3ನೇ ವರ್ಷದ ಪದವಿ).
• ತಂಡವನ್ನು ರಚಿಸಲು ಪ್ರತಿ ವರ್ಗದಿಂದ ಇಬ್ಬರು ವಿದ್ಯಾರ್ಥಿಗಳು ಸೇರಬಹುದು.
• ಪ್ರತಿ ಭಾಗವಹಿಸುವ ತಂಡವು ಪ್ರಾಥಮಿಕ ಪರೀಕ್ಷೆಗಳಿಗೆ ಒಳಗಾಗುತ್ತದೆ. ಅರ್ಹತಾ ಪರೀಕ್ಷೆಯ ಫಲಿತಾಂಶಗಳಿಂದ ಹೊರಹೊಮ್ಮುವ ಅಗ್ರ ಎಂಟು ತಂಡಗಳು ಕ್ವಿಜ್ ಫೈನಲ್‌ಗೆ ಮುನ್ನಡೆಯುತ್ತವೆ.
• ಸಕಾಲಿಕ ಆಗಮನವು ಕಡ್ಡಾಯವಾಗಿದೆ. ತಡವಾಗಿ ಬರುವ ಪಾಲ್ಗೊಳ್ಳುವವರಿಗೆ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ.
• ಈ ರಸಪ್ರಶ್ನೆಯು ರಾಷ್ಟ್ರೀಯ ಕ್ರೀಡಾ ದಿನದ ನೆನಪಿಗಾಗಿ ಶಿಕ್ಷಣ ಸಂಸ್ಥೆಗಳಿಂದ ಎಲ್ಲಾ ಕ್ರೀಡಾ ಉತ್ಸಾಹಿಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ.
ಪ್ರತಿಯೊಬ್ಬರೂ ಈವೆಂಟ್‌ನಲ್ಲಿ ನಿಜವಾದ ಕ್ರೀಡಾ ಮನೋಭಾವದಿಂದ ತೊಡಗಿಸಿಕೊಳ್ಳಲು ಮತ್ತು ತೀರ್ಪುಗಾರರ ಮತ್ತು ಸಂಘಟಕರ ನಿರ್ಧಾರಗಳನ್ನು ಗೌರವಿಸುವಂತೆ ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಕೋರುತ್ತಿದೆ.
ಭಾಗವಹಿಸಲು ಇಚ್ಚಿಸುವವರು ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು:
• ಚೇತನ್ (ಮೊಬೈಲ್: 9901850385)
• ಪ್ರವೀಣ್ (ಮೊಬೈಲ್: 9964244946)
• ಪ್ರಶಾಂತ್ (ಮೊಬೈಲ್: 8660457633)
• ಅಜೀಜ್ (ಮೊಬೈಲ್: 8310010819)
ಕ್ವಿಜ್ ಮಾಸ್ಟರ್ ರಂಜನ್ ನಾಗರಕಟ್ಟೆ ಈ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.  ಸ್ಪೋರ್ಟ್ಸ್ ಕನ್ನಡ ಯುಟ್ಯೂಬ್ ಚಾನೆಲ್ ಕಾರ್ಯಕ್ರಮದ ನೇರ ಪ್ರಸಾರವನ್ನು  ಮಾಡಲಿದೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟಿಸಿಎ ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಬೈಲೂರು, ಕಾರ್ಯದರ್ಶಿ ಪ್ರವೀಣ್ ಪಿತ್ರೋಡಿ, ಪ್ರಶಾಂತ ಅಂಬಲಪಾಡಿ, ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್ಯ, ಮಾಹೆ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಾರ್ಗದರ್ಶಕರಾದ ಉಪೇಂದ್ರ ನಾಯಕ್ ಭಾಗವಹಿಸಿದ್ದರು. ಈ ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಕ್ರಿಕೆಟ್ ನ ಬಗ್ಗೆ  ಹೆಚ್ಚಿನ ಜ್ಞಾನ ಮತ್ತು ಅರಿವನ್ನು ಮೂಡಿಸುವಲ್ಲಿ ಉತ್ತಮ ವೇದಿಕೆಯಾಗಲಿದೆ ಎಂದು ಟಿಸಿಎ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಹೇಳಿದರು.  ತದನಂತರ ಮಾತನಾಡಿದ ಸ್ಪೋರ್ಟ್ಸ್ ಕನ್ನಡದ ಪ್ರಧಾನ ಸಂಪಾದಕರಾದ ಕೆ ಆರ್ ಕೆ ಆಚಾರ್ಯ ಅವರು ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಕ್ರಿಕೆಟ್ ನ ಶ್ರೇಯೋಭಿವೃದ್ಧಿಗಾಗಿ ಉತ್ತಮ ಚಟುವಟಿಕೆಗಳನ್ನು ನಡೆಸುತ್ತಾ ಇದೆ ಮತ್ತು ರಾಜ್ಯಕ್ಕೆ ಮಾದರಿಯಾಗಿದೆ.  ಇದು ಇದೇ ರೀತಿ ಮುಂದುವರಿಯಲಿ ಮತ್ತು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಟೆನ್ನಿಸ್ ಬಾಲ್ ಗಾಗಿ ರಾಜ್ಯ ಟೆನಿಸ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪ್ರಶಾಂತ್ ಅಂಬಲಪಾಡಿ ಸ್ವಾಗತಿಸಿ ವಂದಿಸಿದರು.
ಯಶಸ್ವಿ ಈವೆಂಟ್‌ಗಾಗಿ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ.
Categories
ಭರವಸೆಯ ಬೆಳಕು

ಸರಳ ಇಂಗ್ಲೀಷ್ ಕಲಿಕೆಗೆ ಪೂರಕ ಚಟುವಟಿಕೆ ಆಧಾರಿತ ಪುಸ್ತಕ ಕೊಡುಗೆ ನೀಡಿದ ಗೌತಮ್ ಶೆಟ್ಟಿ

ಕೊರವಡಿ  ಅಂಗನವಾಡಿ ಕೇಂದ್ರಕ್ಕೆ ಉಚಿತ ಪುಸ್ತಕ ವಿತರಣೆ
ಕುಂದಾಪುರ:  ಇಲ್ಲಿಗೆ ಸಮೀಪದ ಕೊರವಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ  ದಿನಾಂಕ 12 ಜುಲೈ, 2023ರಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ  ಶ್ರೀಯುತ ಗೌತಮ್ ಶೆಟ್ಟಿ ಮೂಲಕ ಸರಳ ಇಂಗ್ಲಿಷ್ ಕಲಿಕೆಗೆ ಪೂರಕವಾಗಿರುವ ಚಟುವಟಿಕೆ ಆಧಾರಿತ ಪುಸ್ತಕಗಳನ್ನುಉಚಿತವಾಗಿ ವಿತರಿಸಲಾಯಿತು.
”ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶಿಕ್ಷಿತ ಮಗು ರಾಷ್ಟ್ರವನ್ನು ನಿರ್ಮಿಸುತ್ತದೆ” ಎಂಬ ಚಿಂತನೆಯನ್ನು ದಾನಿಗಳಾದ ಗೌತಮ್ ಶೆಟ್ಟಿಯವರು  ಹೊಂದಿದ್ದು ಅವರ ಬೆಂಬಲದೊಂದಿಗೆ ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ  ಶಾಲಾ ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಅವರು ಪ್ರಾಯೋಜಿಸಿದ್ದಾರೆ. ಇದು ಗೌತಮ್ ಶೆಟ್ಟಿಯವರ ಒಂದು ಸೂಕ್ಷ್ಮ ಯೋಜನೆ. ಬಡ ಶಾಲಾ ಮಕ್ಕಳು ಈ ಶಾಲಾ ಶಿಕ್ಷಣ ಪುಸ್ತಕಗಳಿಂದ ಪ್ರಯೋಜನ ಪಡೆಯಲಿದ್ದಾರೆ.
ಬಡ ವಂಚಿತ ಮಕ್ಕಳಿಗೆ ಅವರ ಅಧ್ಯಯನದ ಸಮಯದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಉಂಟಾಗದಂತೆ ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಯೋಜನೆಯ ಮೂಲಕ, ಶಿಕ್ಷಣದ ಅಭಿವೃದ್ಧಿಗೆ ಸ್ವಲ್ಪ ಪ್ರಯತ್ನ ಮಾಡಿದರೆ ವಂಚಿತ ಬಡ ಮಕ್ಕಳ ಭವಿಷ್ಯ ಬದಲಾಗಲಿದೆ ಮತ್ತು ಅನಕ್ಷರತೆ ನಿವಾರಣೆಯಾಗುತ್ತದೆ ಎನ್ನುವುದು ಗೌತಮ್ ಶೆಟ್ಟಿಯವರ ಚಿಂತನೆ.
ಈ ಕಾರ್ಯಕ್ರಮಕ್ಕೆ ಶಾಲಾ ಸಿಬ್ಬಂದಿ, ಪೋಷಕರು ಹಾಗೂ ಮಕ್ಕಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ  ಸಂಧರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ್ ಹತ್ವಾರ್ ಅಧ್ಯಕ್ಷತೆ ವಹಿಸಿದ್ದರು,  ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಪ್ರಭಾವತಿ ಶೆಟ್ಟಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಸರೋಜಾ, ಅಂಗನವಾಡಿ ಹಿತೈಷಿ ದಿನೇಶ್, ಮುಖ್ಯ ಶಿಕ್ಷಕಿ ಮಾಲತಿ ಶೆಟ್ಟಿ,ದಿನೇಶ್ ಮೊಗವೀರ ಉಪಸ್ಥಿತರಿದ್ದರು. ಸಹಶಿಕ್ಷಕಿ ನೇತ್ರಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಂತಿ ಡಿಸೋಜಾ, ಶ್ರೀಮತಿ ಶೋಭಾ ಪೂಜಾರ್ತಿ, ಅತಿಥಿ ಶಿಕ್ಷಕಿ ಸುದೀಪ, ಗೌರವ ಶಿಕ್ಷಕಿಯರಾದ ಜ್ಯೋತಿ, ಪ್ರಮೀಳಾ, ಕಾವ್ಯ, ಅಂಗನವಾಡಿ ಸಹಾಯಕಿ ಪದ್ಮಾವತಿ ಸಹಕರಿಸಿದರು.  ಅಂಗನವಾಡಿ ಶಿಕ್ಷಕಿ ಶ್ರೀಮತಿ ಶೋಭಾ ವಂದನಾರ್ಪಣೆಗೈದರು.
Categories
ಕ್ರಿಕೆಟ್ ರಾಜ್ಯ

ಕಲ್ಲಮುಂಡ್ಕೂರು ವಾರಿಯರ್ಸ್ ತಂಡಕ್ಕೆ ಕಿನ್ನಿಗೋಳಿ ಪ್ರೀಮಿಯರ್‌ ಲೀಗ್-2020 ಪ್ರಶಸ್ತಿ

 

ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣ ಹಾಗೂ ಸ್ಥಳೀಯ ತಂಡಗಳ ಬಲವರ್ಧನೆ ಯ ಸದುದ್ದೇಶದಿಂದ
ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ದಿನಾಂಕ 7,8.15 ರಂದು ಕಟೀಲು ಸಿತ್ಲ ಮೈದಾನದಲ್ಲಿ ಆಯೋಜಿಸಿದ್ದ ಕಿನ್ನಿಗೋಳಿ ಪ್ರೀಮಿಯರ್ ಲೀಗ್ (KPL) ಪಂದ್ಯಾವಳಿಯ ಪ್ರಶಸ್ತಿಯನ್ನು ಕಲ್ಲಮುಂಡ್ಕೂರು ತಂಡ ಜಯಿಸಿದೆ.

ಪಂದ್ಯಾಕೂಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದಿನಾಂಕ 15/03/2020 ಮಧ್ಯಾಹ್ನ ಸಿತ್ಲ ಮೈಧಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುಗಪುರುಷ ಸಂಪಾದಕರಾದ ಶ್ರೀಭುವನಾಭಿರಾಮ ಉಡುಪ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ಶರತ್ ಶೆಟ್ಟಿ, ಅಧ್ಯಕ್ಷರು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್, ಶ್ರೀ ಗೌತಮ್ ಶೆಟ್ಟಿ, ಅಧ್ಯಕ್ಷರು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್, ಶ್ರೀ ಗಿರೀಶ್ ಶೆಟ್ಟಿ ಶ್ರೀ ಡೆವೆಲಪರ್ ಕಟೀಲು, ಕಟೀಲು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ ಪೂಜಾರಿ, ಉಪಾಧ್ಯಕ್ಷರಾದ ಶ್ರೀ ಕಿರಣ್ ಕುಮಾರ್ ಶೆಟ್ಟಿ ಕಟೀಲು, ಎ.ಪಿ.ಎಮ್.ಸಿ.ಸದಸ್ಯರಾದ ಶ್ರೀ ಪ್ರಮೋದ್ ಕುಮಾರ್ ಕಿನ್ನಿಗೋಳಿ ಹಾಗೂ ಕೆ ಎಫ್ ಸಿ ಸಂಘಟನೆಯ ಸಧಸ್ಯರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಪ್ರತಿಷ್ಟಿತ ಪಡುಬಿದ್ರಿ ತಂಡದ ಆದರ್ಶ ಕಪ್ತಾನರು ಹಾಗೂ ರಾಜ್ಯ ಟೆನ್ನಿಸ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ವಲಯಾಧ್ಯಕ್ಷರಾದ ಶ್ರೀ ಶರತ್ ಶೆಟ್ಟಿ ಪಡುಬಿದ್ರಿ ಹಾಗೂ ಕ್ರೀಡಾಲೋಕದಲ್ಲಿ ತೂಫಾನಿ ಮೈಲಿಗಲ್ಲನ್ನು ಸ್ಥಾಪಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿಯ ಸಂಸ್ಥಾಪಕಾಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ ಕುಂದಾಪುರ ಹಾಗೂ ಪಡುಬಿದ್ರಿ ಫ್ರೆಂಡ್ಸ್ ನ ಪರವಾಗಿ ಸಾಕಷ್ಟು ಪಂದ್ಯಗಳನ್ನಾಡಿ ಯು.ಎ.ಇ ಪರವಾಗಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವಾಡಿದ, ಕೆ‌.ಪಿ.ಎಲ್,ಎಮ್.ಪಿ.ಎಲ್ ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿ ಇದೀಗ ಲೆದರ್ ಬಾಲ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿಸ್ತಿನ ಕ್ರಿಕೆಟಿಗರಾದ ನಿತಿನ್ ಮೂಲ್ಕಿ ಯವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ವಿಜೇತರ ವಿವರ.

ಪ್ರಥಮ ಪ್ರಶಸ್ತಿ : ಕಲ್ಲಮುಂಡ್ಕುರು ವಾರಿಯರ್ಸ್ ( ಸುಕುಮಾರ್ ಅಮೀನ್ ಮಾಲಕತ್ವದ ತಂಡ )
ದ್ವಿತೀಯ ಪ್ರಶಸ್ತಿ : ಐಕಳ ಇಂಡಿಯನ್ಸ್ ( ಪ್ರದೀಪ್ ಅವರ ಮಾಲಕತ್ವದ ತಂಡ )
ಫೇರ್ ಪ್ಲೇ ಪ್ರಶಸ್ತಿ : ಕಿಂಗ್ಸ್ ಇಲೆವೆನ್, ಕಿನ್ನಿಗೋಳಿ ( ದಿವಾಕರ್ ಚೌಟ ಮಾಲಕತ್ವದ ತಂಡ )
ಸರಣಿ ಶ್ರೇಷ್ಠ : ಸುದರ್ಶನ್ ( ಕಟೀಲ್ ಕಮೊಂಡೋಸ್ )
ಪಂದ್ಯ ಶ್ರೇಷ್ಠ :ಜೊಯೆಲ್ (ಕಲ್ಲಮುಂಡ್ಕುರು ವಾರಿಯರ್ಸ್ )
ಬೆಸ್ಟ್ ಬ್ಯಾಟ್ಸಮನ್ : ಸಂದೀಪ್ ಕೃಷ್ಣ (ಕಲ್ಲಮುಂಡ್ಕುರು ವಾರಿಯರ್ಸ್ )
ಬೆಸ್ಟ್ ಬೌಲರ್ : ಪ್ರಕಾಶ್ (ಐಕಳ ಇಂಡಿಯನ್ಸ್ ).

ಶರತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.