Categories
ಟೆನಿಸ್

CBSE-ICSE ಡೆಲ್ಲಿ ಪಬ್ಲಿಕ್ ಸ್ಕೂಲ್, AICS ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟ

AICS ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟ CBSE-ICSE ಡೆಲ್ಲಿ ಪಬ್ಲಿಕ್ ಸ್ಕೂಲ್ (ಎಮ್.ಆರ್.ಪಿ.ಎಲ್) ಮಂಗಳೂರಿನಲ್ಲಿ ಸೋಮವಾರ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾಪಟು MCODs ಮಣಿಪಾಲದ ಮಿ|ಮಿಶಾಲ್ ದಿಲಾವರ್, ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ಪಿ.ಎಸ್.ಚಂದ್ರಶೇಖರ್, AICS ನ ರೂವಾರಿ ಹಾಗೂ ಮಂಗಳೂರಿನ ಮೌಂಟ್ ಕಾರ್ಮೆಲ್ ಸ್ಕೂಲ್ ದೈಹಿಕ ನಿರ್ದೇಶಕ ಪ್ರವೀಣ್ ಕುಮಾರ್, ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ದೈಹಿಕ ನಿರ್ದೇಶಕ ಗೌತಮ್ ಶೆಟ್ಟಿ, ಟೇಬಲ್ ಟೆನ್ನಿಸ್ ಪಂದ್ಯಾಕೂಟದ ಮುಖ್ಯ ತೀರ್ಪುಗಾರ ಹಾಗೂ ಕೋಚ್ ಅಶ್ವಿನ್ ಪಡುಕೋಣೆ ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಶ್ರೀಮತಿ ಸುನೀತಾ ರೋಡ್ರಿಗಸ್ ಹಾಗೂ ಶಿಕ್ಷಕರಾದ ಲೋಕೇಶ್ ದೇವಾಡಿಗ ರವರು ಉಪಸ್ಥಿತರಿದ್ದರು.

ಅಂತರ್ ಶಾಲಾ ಮಟ್ಟದಲ್ಲಿ ಯಶಸ್ವಿಯಾಗಿ ಸಾಗಿದ ಈ ಪಂದ್ಯಾಕೂಟದಲ್ಲಿ ವಿವಿಧ ಶಾಲೆಗಳಿಂದ 25 ತಂಡಗಳಾಗಿ,150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಆರ್.ಕೆ.ಆಚಾರ್ಯ ಕೋಟ.