Categories
ಅಥ್ಲೆಟಿಕ್ಸ್

ಖೇಲೋ ಇಂಡಿಯಾ ಸ್ಪರ್ಧೆಯ ತ್ರಿವಿಧ ಜಿಗಿತದಲ್ಲಿ ವಿವೇಕ ವಿದ್ಯಾಸಂಸ್ಥೆಯ ಅಖಿಲೇಶ್ ಗೆ ಚಿನ್ನ.

ಖೇಲೋ ಇಂಡಿಯಾ ಸ್ಪರ್ಧೆಯ ತ್ರಿವಿಧ ಜಿಗಿತದಲ್ಲಿ ವಿವೇಕ ವಿದ್ಯಾಸಂಸ್ಥೆಯ ಅಖಿಲೇಶ್ ಗೆ ಚಿನ್ನ.

ಕಳೆದ ಡಿಸೆಂಬರ್ ನಲ್ಲಿ ಪಂಜಾಬ್ ನ ಚಂಡಿಗಢ್ ನಲ್ಲಿ ನಡೆದಿದ್ದ ರಾಷ್ಟ್ರೀಯ ಸ್ಕೂಲ್ ಅಥ್ಲೆಟಿಕ್ಸ್ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಕೇಂದ್ರ ಸರಕಾರ ಪ್ರಾಯೋಜಿತ ಖೇಲೋ ಇಂಡಿಯಾ ಸ್ಪರ್ಧೆಯ 17 ರ ವಯೋಮಿತಿಯ ವಿಭಾಗದ ತ್ರಿವಿಧ ಜಿಗಿತ ಸ್ಪರ್ಧೆಗೆ ಕರ್ನಾಟಕದ ಸ್ಪರ್ಧಿಯಾಗಿ ಆಯ್ಕೆಯಾಗಿದ್ದ ಅಖಿಲೇಶ್ ಚಿನ್ನದ ಪದಕವನ್ನು ಗೆದ್ದಿದ್ದಾನೆ.

ಕೋಟ ವಿವೇಕ ವಿದ್ಯಾ ಸಂಸ್ಥೆಯ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿರುವ ಅಖಿಲೇಶ್ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆಲ್ಲುವುದರ ಮೂಲಕ
ವಿದ್ಯಾ ಸಂಸ್ಥೆಯ ಕೀರ್ತಿ ಪತಾಕೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾನೆಂದು ವಿವೇಕ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಕೆ‌‌.ಜಗದೀಶ್ ನಾವುಡ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
ಆರ್.ಕೆ.ಆಚಾರ್ಯ ಕೋಟ.