Categories
ಟೆನಿಸ್

AICS ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟದ 2 ಪ್ರಶಸ್ತಿ ಜಯಿಸಿದ ಡೆಲ್ಲಿ ಪಬ್ಲಿಕ್ ಸ್ಕೂಲ್(MRPL)

ಡೆಲ್ಲಿ ಪಬ್ಲಿಕ್ ಸ್ಕೂಲ್(M.R.P.L)ನಲ್ಲಿ ಇತ್ತೀಚೆಗಷ್ಟೇ ನಡೆದ AICS ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟದ ಫಲಿತಾಂಶ.

ಅಂಡರ್ 14 ಹುಡುಗರು : ಪ್ರಥಮ-ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು, ದ್ವಿತೀಯ-ಶಾರದಾ ವಿದ್ಯಾನಿಕೇತನ ತಲಪಾಡಿ

ಅಂಡರ್ 14 ಹುಡುಗಿಯರು : ಪ್ರಥಮ-ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು, ದ್ವಿತೀಯ-ಸೈಂಟ್ ಅ್ಯಾಗ್ನೆಸ್ ಮಂಗಳೂರು

ಅಂಡರ್ 17 ಹುಡುಗರು : ಪ್ರಥಮ-ಡೆಲ್ಲಿ ಪಬ್ಲಿಕ್ ಸ್ಕೂಲ್ (M.R.P.L), ದ್ವಿತೀಯ-B.B.M.P ಬಂಟ್ವಾಳ

ಅಂಡರ್ 17 ಹುಡುಗಿಯರು : ಪ್ರಥಮ-ಡೆಲ್ಲಿ ಪಬ್ಲಿಕ್ ಸ್ಕೂಲ್, ದ್ವಿತೀಯ-ಶಾರದಾ ವಿದ್ಯಾನಿಕೇತನ ತಲಪಾಡಿ.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ PTA ಹಾಗೂ MRPL ನೌಕರರ ಸಂಘದ ಅಧ್ಯಕ್ಷ ಶ್ರೀ ಗೋಪಿರಾಮ್,PTA ಉಪಾಧ್ಯಕ್ಷೆ ಶ್ರೀಮತಿ ವಿನುತಾ,MRPL ನೌಕರರ ಸಂಘದ ಕಾರ್ಯದರ್ಶಿ ಶ್ರೀ ನರಸಿಂಹ ಮೂರ್ತಿ,ಪ್ರಾಂಶುಪಾಲರಾದ ಪಿ.ಎಸ್.ಚಂದ್ರಶೇಖರ್, ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ದೈಹಿಕ ನಿರ್ದೇಶಕ ಶ್ರೀ ಗೌತಮ್ ಶೆಟ್ಟಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಿದರು.

ದೈಹಿಕ ಶಿಕ್ಷಣದ ಶಿಕ್ಷಕರಾದ ಶ್ರೀಮತಿ ಸುನೀತಾ ರೋಡ್ರಿಗಸ್,ಲೋಕೇಶ್ ದೇವಾಡಿಗ, ಪಂದ್ಯಾಕೂಟದ ಮುಖ್ಯ ತೀರ್ಪುಗಾರ ಅಶ್ವಿನ್ ಪಡುಕೋಣೆ ಪಂದ್ಯಾಕೂಟ ಯಶಸ್ವಿಗೊಳಿಸುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದರು.

ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿಯರ ವಿಭಾಗದ ಮುಖ್ಯಸ್ಥೆ ಜ್ಯೋತ್ಸ್ನಾ ಮನ್ನಾರ್ ಆಚಲ್ ಕಾರ್ಯಕ್ರಮ‌ ನಿರೂಪಣೆಗೈದರೆ, ಚಿನ್ಮಯಿ ಪೇಜತ್ತಾಯ ಧನ್ಯವಾದ ಸಮರ್ಪಿಸಿದರು. ಸಂಘಟನಾ ಸಮಿತಿಯ ಕ್ಯಾಬಿನೆಟ್ ನ ಮುಖ್ಯಸ್ಥ ಗಣೇಶ್ ಕಾಮತ್, ವೆನಿಶಾ ಮಸ್ಕರೇನಸ್, ಸೌಭಿಯಾ ಎಸ್, ಡಿ.ಪಿ.ಎಸ್ ಕ್ರೀಡಾ ಕಪ್ತಾನರಾದ ಸತ್ಯಮ್ ಹಾಗೂ ಭವನ್ ಡಿ.ಜೆ ವಿದ್ಯಾರ್ಥಿ ಮುಖಂಡ ಶಿವಕುಮಾರ್ ಉಪಸ್ಥಿತರಿದ್ದರು.

ಆರ್.ಕೆ.ಆಚಾರ್ಯ ಕೋಟ