Categories
ಕ್ರಿಕೆಟ್

ಮರಳುಗಾಡಿನ ಮಹಾಯುದ್ಧ- ಅರಬ್ಬರ ನಾಡಿನಲ್ಲಿ ನಡೆಯಲಿರುವ 14 ನೇ ಆವೃತ್ತಿಯ 2ನೇ ಚರಣದ ಐಪಿಎಲ್ ಪಂದ್ಯಾಕೂಟಕ್ಕೆ ಕ್ಷಣಗಣನೆ

ಅಯ್ಯೋ ಕೊರೊನಾ ಎರಡನೇ ಅಲೆ ಕೊರೊನಾ ಮೂರನೇ ಅಲೆ ಎಲ್ಲಿ ನೋಡಿದರೂ ಕೊರೊನಾ ಕೊರೊನಾ.ಹೌದು ಕೊರೊನಾ ಎಂಬ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಅರ್ಧಕ್ಕೆ ನಿಂತಿದ್ದ ದೇಶದ ಶ್ರೀಮಂತ ಕ್ರೀಡಾಕೂಟ  ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಅರಬ್ಬರ ನಾಡಿನಲ್ಲಿ ಮತ್ತೆ ಆರಂಭಗೊಳ್ಳಲಿದೆ.
ನಾಳೆಯಿಂದ ಅಂದರೆ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ನಡೆಲಿರುವ ದೇಶದ ಶ್ರೀಮಂತ ಕ್ರೀಡಾಕೂಟಕ್ಕೆ  ಯುನೈಟೆಡ್ ಅರಬ್ ಎಮಿರೇಟ್ಸ್ ನಾ ಮೂರು ಕ್ರೀಡಾಂಗಣಗಳು ಸಾಕ್ಷಿಯಾಗಲಿದೆ. ಈ ಬಾರಿ ಶೇಕಡಾ 60% ಭಾಗದಷ್ಟು ಕೊರೊನಾ  ಲಸಿಕೆ  ಹಾಕಿಸಿಕೊಂಡಿರುವ ಜನರಿಗೆ ಪಂದ್ಯಾಟದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
14ನೇ ಆವೃತ್ತಿಯ 2ನೇ ಚರಣದ ಮೊದಲ ಪಂದ್ಯ 
ಎರಡು ಬಲಿಷ್ಠ ತಂಡಗಳಾದ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಮತ್ತು ಮಾಜಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಪೈಪೋಟಿ ನಡೆಯಲಿವೆ. ಅಂತೆಯೇ ಅದು ಯಾವ ತಂಡ ಈ ಬಾರಿಯ ಐಪಿಎಲ್ ಚಾಂಪಿಯನ್ ಆಗಲಿದೆ ಎನ್ನುವುದು ಕಾದು ನೋಡಬೇಕು.
✍🏻 ವಿಘ್ನೇಶ್ ಕುಂದಾಪುರ