Categories
ಕ್ರಿಕೆಟ್

ಇಂದಿನಿಂದ ಶಾರ್ಜಾದಲ್ಲಿ 10PL ವರ್ಲ್ಡ್ ಟೆನ್ನಿಸ್ ಕ್ರಿಕೆಟ್ ಸೀಸನ್-3

ಯು ಎ ಇ ಮೂಲದ ತೈಲ ಮತ್ತು ಅನಿಲ ಉತ್ಪಾದನಾ ಘಟಕ ಪೆಟ್ರೋಮ್ಯಾನ್ ಸಂಸ್ಥೆ ಮತ್ತು ಶಾರ್ಜಾದ ಕ್ರಿಕೆಟ್ ಕೌನ್ಸಿಲ್ ನ ಸಹಭಾಗಿತ್ವದಲ್ಲಿ “ಗಲ್ಲಿ ಕ್ರಿಕೆಟ್” 10PL 2020. ಮಾರ್ಚ್ 10-13.

ಗಲ್ಲಿ ಕ್ರಿಕೆಟ್ ನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಬೇಕು ಅನ್ನುವ ಯೋಚನೆಯಿಂದ ಇದೇ ಬರುವ ಮಾರ್ಚ್ ತಿಂಗಳ 10 ರಿಂದ 13 ರ ವರೆಗೆ ಶಾರ್ಜಾದ ಅಂತರರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ.

ಈ ರೋಚಕ ಪಂದ್ಯದಲ್ಲಿ 16 ಪ್ರಸಿದ್ಧ ತಂಡಗಳು ಭಾಗವಹಿಸಲಿದ್ದು,
4 ಪೂಲ್ ಗಳನ್ನಾಗಿ ವಿಭಾಗಿಸಲಾಗಿದೆ.

A ಪೂಲ್ ನಲ್ಲಿ
ಇಂಟರ್ ಗ್ಲೋಬ್ ಮೆರಿನ್
ಇಲೆವೆನ್ ವಾರಿಯರ್ಸ್ ವೈ.ಬಿ.ಎಲ್.
ಈ ಕ್ರಾಫ್ಟ್ ಮೀಡಿಯಾ
ಗ್ಲೋಬಲಿಂಕ್ ವೆಸ್ಟ್ ಸ್ಟಾರ್ ಶಿಪ್ಪಿಂಗ್

 

 

B ಪೂಲ್ ನಲ್ಲಿ
ಟೀಮ್ ಪೆಟ್ರೋಮ್ಯಾನ್
ಫ್ರೆಂಡ್ಸ್ ಕುವೈಟ್
ಶೆಹೆನ್ಶಾ ವಾರಿಯರ್ಸ್
ಇಲೆವೆನ್ ವಾರಿಯರ್ಸ್ ದುಬೈ

C ಪೂಲ್ ನಲ್ಲಿ
ದೊಂಬಿವಿಲಿ ಗ್ರಾಮೀಣ ಸ್ಟಾರ್
ಟಿಪ್ ಟಾಪ್ ಅಲಾಯನ್ಸ್
ಎಸ್‌.ಜೆ.ಎ ಶಿಪ್ಪಿಂಗ್
ಇಂಡೋ ರೈಡರ್ಸ್

 

D ಪೂಲ್ ನಲ್ಲಿ
ಆಶಾ ಕೀ ಕಿರಣ್ ರಾಯಗಡ್
ಐಲ್ಯಾಂಡ್ ಬಾಯ್ಸ್ ಶ್ರೀಲಂಕಾಯು.ಕೆ.ಸಿ.ಸಿ ಕುವೈಟ್
ಹಾಶ್ಮಿ ಸಿ.ಸಿ ತಂಡಗಳು
ಭಾಗವಹಿಸಲಿವೆ ಎಂದು ಪೆಟ್ರೋಮ್ಯಾನ್ ಸಂಸ್ಥೆಯ ಕಾರ್ಯ ನಿರ್ವಾಹಕ ಅಬ್ದುಲ್ ಲತೀಫ್ ಖಾನ್ ತಿಳಿಸಿದ್ದಾರೆ.

ಈ ರೋಚಕ ಪಂದ್ಯವು ಭಾರತದಲ್ಲಿ ವಿಭಿನ್ನವಾಗಿದ್ದು ಅದನ್ನು ಯು ಎ ಇ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವೀಗೊಳಿಸಬೇಕು ಎಂದು ಕನಸು ಹೊತ್ತಿರುವ ಅಬ್ದುಲ್ ಸ್ವತಃ ಒಬ್ಬ 1990 ರ ದಶಕದ ಪ್ರಸಿದ್ಧ ಕ್ರಿಕೆಟ್ ಆಟಗಾರ., ಈ ಪಂದ್ಯದಲ್ಲಿ ಗೆಲ್ಲುವ ತಂಡವು ಯುಎಇ ಯ ಮೊತ್ತ ದಿರಾಮ್ 250.000 ಎಂದು ತಿಳಿಸಿದ್ದಾರೆ.

ಈ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ ನಾಮಾಂಕಿತ ಆಟಗಾರರು
ಪ್ರಸಿದ್ಧ ತಂಡಗಳನ್ನು ಪ್ರತಿನಿಧಿಸಲಿದ್ದು,ಪ್ರಮುಖವಾಗಿ
ಸೀಸನ್ 2 ರ 10pl ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ನಿರ್ವಹಣೆ ನೀಡಿ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದ
ರಾಜೇಶ್ ಪೂಜಾರಿ ಹಾಗೂ ಹನನ್ ಕತಾರ್ ನ ಇಮ್ರಾನ್ ಕೋಟೇಶ್ವರ, ಉಡುಪಿ ಮೂಲದ ರೋವೆಲ್ ಪ್ರೀತ್ ಹಾಗೂ ಕ್ಲೇವನ್ ಭಾಗವಹಿಸಲಿದ್ದಾರೆ.

ಈ ಕ್ರಾಫ್ಟ್ ಮೀಡಿಯಾ, ಡೆಲ್ಲಿ ಡೊರ್ಬೊರ್, ಅರಿಯನ್ ಹೈಜೆನಿಕ್ ಗಾರ್ಡ್ ಊಕ್ ಏರ್ ಅರೆಬಿಯಾ ಮತ್ತು ಟೂಲ್ಸ್ ಸಂಸ್ಥೆಗಳು ಪ್ರಾಯೋಜಿಸುವ ಈ ಪಂದ್ಯದಲ್ಲಿ
ಭಾಗವಹಿಸುವ ಎಲ್ಲಾ ತಂಡಗಳಿಗೆ ಸ್ಪೋರ್ಟ್ಸ್ ಕನ್ನಡ ಜಾಲತಾಣದ ವತಿಯಿಂದ ಹಾರ್ದಿಕ ಶುಭಾಶಯಗಳು.

ಆರ್.ಕೆ.ಆಚಾರ್ಯ ಕೋಟ
ಸ್ಪೋರ್ಟ್ಸ್ ಕನ್ನಡ
‌ಉಡುಪಿ.