Categories
ಭರವಸೆಯ ಬೆಳಕು

ಜೈಹಿಂದ್ ಪಡುಕರೆ ತಂಡದಿಂದ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಕಾಲೇಜಿನ ಪೀಠೋಪಕರಣಕ್ಕೆ ಧನಸಹಾಯ

ಕಳೆದ ತಿಂಗಳಿನಲ್ಲಿ ಕರ್ನಾಟಕದ ಪ್ರಸಿದ್ಧ ವೇಗಿ ಪ್ರಶಾಂತ್ ಪಡುಕರೆ ಇವರ ಸಾರಥ್ಯದಲ್ಲಿ ಕೋಟ ಪಡುಕರೆಯಲ್ಲಿ, ಮೊತ್ತ ಮೊದಲ ಬಾರಿಗೆ ದಾಖಲೆಯ 4 ಪ್ರಾಕಾರಗಳಲ್ಲಿ  ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಅತ್ಯಂತ ವಿಜೃಂಭಣೆಯಿಂದ ಜರುಗಿತ್ತು.
ಟೂರ್ನಮೆಂಟ್ ನ ಸಂದರ್ಭದಲ್ಲೂ ಬಡ,ಅಶಕ್ತರಿಗೆ ವೈದ್ಯಕೀಯ ಮತ್ತು ಶಿಕ್ಷಣಕ್ಕೆ ಧನಸಹಾಯ ನೀಡಿ ಮಾನವೀಯತೆ ಮೆರೆದ ಜೈಹಿಂದ್ ಪಡುಕರೆ ಸಂಸ್ಥೆ ಇದೀಗ ಪಂದ್ಯಾಟಕ್ಕಾಗಿ ಮೈದಾನವನ್ನು ನೀಡಿ ಸಹಕರಿಸಿದ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಹಾಲ್ ನ ಪೀಠೋಪಕರಣಕ್ಕಾಗಿ 10000 ರೂ ಧನ್ಯಸಹಾಯವನ್ನು ನೀಡಿರುತ್ತಾರೆ.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ಗಾಂವ್ಕರ್,ದೈಹಿಕ ಶಿಕ್ಷಕರಾದ ಮನೋಜ್ ಕುಮಾರ್,ಕೃಷ್ಣ ಸಾಸ್ತಾನ ಮತ್ತು ಪ್ರಶಾಂತ್ ಪಡುಕರೆ ಉಪಸ್ಥಿತರಿದ್ದರು.
ಸದಾ ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಜೈಹಿಂದ್ ಪಡುಕರೆ ಸಂಸ್ಥೆಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಧನ್ಯವಾದಗಳು ಹಾಗೂ ಅಭಿನಂದನೆಗಳು…