Categories
ಕ್ರಿಕೆಟ್

ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಶಾಲಾ ವಾರ್ಷಿಕ ಕ್ರೀಡೋತ್ಸವ

ರಾಮ್ಸನ್ ಸರಕಾರಿ ಪ್ರೌಢಶಾಲೆ_ಕಂಡ್ಲೂರು ಇಲ್ಲಿ 2019 -20 ನೇ ಸಾಲಿನ ಶಾಲಾ ವಾರ್ಷಿಕ ಕ್ರೀಡೋತ್ಸವ ಶ್ರೀ ಸಾಮ್ರಾಟ್ ಶೆಟ್ಟಿ ಮಾನ್ಯ ಕಾರ್ಯಾಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು .

ಶ್ರೀಮತಿ ಜ್ಯೋತಿ .ಎಂ ಮಾನ್ಯ ಜಿಲ್ಲಾ ಪಂಚಾಯಿತಿ ಸದಸ್ಯರು ಧ್ವಜಾರೋಹಣ ನೆರವೇರಿಸಿದರು .

ಶ್ರೀ ರಂಜಿತ್ ಕುಮಾರ್ ಶೆಟ್ಟಿ,ಕ್ರೀಡಾಪಟು ಹಾಗೂ ಯುವ ಉದ್ಯಮಿಗಳು “ಶೆಟ್ಟಿ ಐಸ್ಪ್ಲಾಂಟ್” ಕುಂದಾಪುರ ಇವರು ಉದ್ಘಾಟಿಸಿದರು .
ಮುಖ್ಯ ಅತಿಥಿಗಳಾಗಿ ಕುಮಾರಿ ಅಂಬಿಕಾ ಮಾನ್ಯ ತಾಲೂಕು ಪಂಚಾಯಿತಿ ಸದಸ್ಯರು ,ಶ್ರೀ ರಾಜ್ ಕುಮಾರ್ ಮಾನ್ಯ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಕಂಡ್ಲೂರು .ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ರಾಘವೇಂದ್ರ ಶೆಟ್ಟಿ ಕಲ್ಲೋಳಿ ಮನೆ ,ಶ್ರೀ ರತ್ನಾಕರ ಕಂಡ್ಲೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶ್ರೀ ಅರುಣ್ ಹಾಗೂ ಶ್ರೀ ಆನಂದ್ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಗಮ್ಮ ನಾಯಕ್ ಉಪಸ್ಥಿತರಿದ್ದರು .

ಕ್ರೀಡಾಂಗಣದಲ್ಲಿ ಗುಂಡೆಸೆದ ಮೂಲಕ ಉಪಸ್ಥಿತರಿದ್ದ ಗಣ್ಯರು ಉದ್ಘಾಟಿಸಿ ಶುಭ ಹಾರೈಸಿದರು .ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು .