ಕೂಚ್ ಬೆಹಾರ್ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಸೆಹ್ವಾಗ್ ಪುತ್ರ!

ಕೂಚ್ ಬೆಹಾರ್ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಸೆಹ್ವಾಗ್ ಪುತ್ರ!

ಕೂಚ್ ಬೆಹಾರ್ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಸೆಹ್ವಾಗ್ ಪುತ್ರ!

ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್, ದೆಹಲಿ ದಿಗ್ಗಜ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಪ್ರತಿಷ್ಠಿತ ಕೂಚ್ ಬೆಹಾರ್ ಟ್ರೋಫಿ ಅಂಡರ್-19 ಟೂರ್ನಮೆಂಟ್’ನಲ್ಲಿ ಅಮೋಘ ದ್ವಿಶತಕ ಬಾರಿಸಿದ್ದಾರೆ. ದೆಹಲಿ ಪರ ಆಡುತ್ತಿರುವ 17 ವರ್ಷ ವಯಸ್ಸಿನ ಆರ್ಯವೀರ್ ಸೆಹ್ವಾಗ್ ಕೂಡ ತಂದೆ ವೀರೇಂದ್ರ ಸೆಹ್ವಾಗ್ ಅವರಂತೆ ಬಲಗೈ ಆರಂಭಿಕ ಬ್ಯಾಟ್ಸ್’ಮನ್. ಶೀಲ್ಲಾಂಗ್’ನ ಮೇಘಾಲಯ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಆತಿಥೇಯ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಅಬ್ಬರಿಸಿದ ಸೆಹ್ವಾಗ್ ಪುತ್ರ 227 ಎಸೆತಗಳಲ್ಲಿ ಭರ್ಜರಿ ದ್ವಿಶತಕ ಸಿಡಿಸಿದರು. ಆರ್ಯವೀರ್ ಇನ್ನಿಂಗ್ಸ್’ನಲ್ಲಿ 34 ಬೌಂಡರಿಗಳು ಹಾಗೂ ಎರಡು ಸಿಕ್ಸರ್’ಗಳಿದ್ದವು. ಅಕ್ಟೋಬರ್ ತಿಂಗಳಲ್ಲಿ ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಆಡುವ ಮೂಲಕ ಸೆಹ್ವಾಗ್ ಪುತ್ರ ಆರ್ಯವೀರ್ ದೆಹಲಿ ಅಂಡರ್-19 ತಂಡಕ್ಕೆ ಪದಾರ್ಪಣೆ ಮಾಡಿದ್ದರು.

Leave a Reply

Your email address will not be published. Required fields are marked *