ಬ್ಯಾಡ್ಮಿಂಟನ್ದೈಹಿಕ ಕ್ಷಮತೆ ಸಮಸ್ಯೆಯಿಂದ ಬ್ಯಾಡ್ಮಿಂಟನ್‌ನಿಂದ ದೂರವಿರುವ ಸೈನಾ ನೆಹ್ವಾಲ್ — ಇದೀಗ...

ದೈಹಿಕ ಕ್ಷಮತೆ ಸಮಸ್ಯೆಯಿಂದ ಬ್ಯಾಡ್ಮಿಂಟನ್‌ನಿಂದ ದೂರವಿರುವ ಸೈನಾ ನೆಹ್ವಾಲ್ — ಇದೀಗ ಮಕ್ಕಳಿಗೆ ಪ್ರೇರಣೆಯಾದ ಸ್ಫೂರ್ತಿದಾಯಕ ಆಟಗಾರ್ತಿ

-

- Advertisment -spot_img

**ದೈಹಿಕ ಕ್ಷಮತೆ ಸಮಸ್ಯೆಯಿಂದ ಬ್ಯಾಡ್ಮಿಂಟನ್‌ನಿಂದ ದೂರವಿರುವ ಸೈನಾ ನೆಹ್ವಾಲ್ — ಇದೀಗ ಮಕ್ಕಳಿಗೆ ಪ್ರೇರಣೆಯಾದ ಸ್ಫೂರ್ತಿದಾಯಕ ಆಟಗಾರ್ತಿ**

ಉಡುಪಿ: “ಆಡುವ ಆಸೆ ಇನ್ನೂ ಇದೆ, ಆದರೆ ದೇಹ ಸಹಕಾರ ನೀಡುವುದಿಲ್ಲ. ಅದಕ್ಕಾಗಿ ಸಕ್ರಿಯ ಪಂದ್ಯಾಟದಿಂದ ಹಿಂದೆ ಸರಿಯಬೇಕಾಯಿತು,” ಎಂದು ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೇಳಿದರು.

ಮಣಿಪಾಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈಗ ನಾನು ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷ ಸಿಗುತ್ತಿದೆ. ಭವಿಷ್ಯದಲ್ಲಿ ಅಗತ್ಯ ಎನಿಸಿದರೆ ಮಾತ್ರ ತರಬೇತಿ ಅಕಾಡೆಮಿಯಲ್ಲಿ ತೊಡಗಿಸಿಕೊಳ್ಳುತ್ತೇನೆ,” ಎಂದರು.

ಸೈನಾ ನೆಹ್ವಾಲ್ ಮುಂದುವರಿಸಿದರು, “ಬ್ಯಾಡ್ಮಿಂಟನ್ ಮಾತ್ರವಲ್ಲದೆ, ಎಲ್ಲಾ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು. ಮಕ್ಕಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಮೈದಾನದತ್ತ ಮುಖ ಮಾಡಬೇಕಾಗಿದೆ. ಕೋಚಿಂಗ್‌ ಕೆಲಸ ನನಗೆ ಅಷ್ಟಾಗಿ ಆಸಕ್ತಿಯಿಲ್ಲ — ಅದು ತುಂಬಾ ಕಷ್ಟದ ಕೆಲಸ. ಆಡುವುದಕ್ಕಿಂತ ತರಬೇತಿ ನೀಡುವುದೇ ಹೆಚ್ಚು ಪರಿಶ್ರಮದ ಕಾರ್ಯ. ಹತ್ತು-ಹದಿನೈದು ಗಂಟೆಗಳ ಕಾಲ ನಿಂತುಕೊಂಡು ತರಬೇತಿ ನೀಡುವುದು ಸುಲಭವಲ್ಲ,” ಎಂದರು.

ಅವರು ಗೋಪಿ ಚಂದ್ ಮತ್ತು ಪತಿ ಪಾರೂಪ್‌ಳ್ಳಿ ಕಶ್ಯಪ್‌ರನ್ನು ಉಲ್ಲೇಖಿಸಿ, “ಗೋಪಿ ಸರ್ ಮತ್ತು ಕಶ್ಯಪ್ ಇಬ್ಬರೂ ಅತ್ಯಂತ ಸಕ್ರಿಯರು. ನಾನು ಈಗ ಆಟಗಾರ್ತಿಯ ಮನಸ್ಥಿತಿಯಿಂದ ಹೊರಬರಬೇಕಾಗಿದೆ,” ಎಂದರು.

ತಮ್ಮ ಕ್ರೀಡಾ ಜೀವನದ ಕುರಿತು ನೆನಪಿಸಿಕೊಂಡ ಸೈನಾ, “ಬ್ಯಾಡ್ಮಿಂಟನ್‌ಗಾಗಿ ನಾನು 25 ವರ್ಷ ತ್ಯಾಗಮಯ ಜೀವನ ನಡೆಸಿದ್ದೇನೆ. ಮನೆ, ಸ್ನೇಹಿತರು, ಆಹಾರ — ಎಲ್ಲವನ್ನೂ ಬಿಟ್ಟು ಕ್ರೀಡೆಗೆ ಅರ್ಪಣೆ ಮಾಡಿದ್ದೇನೆ. ಅದು ಒತ್ತಡದ ಬದುಕು, ಆದರೆ ಅದೇ ನನ್ನ ಜೀವನವನ್ನು ರೂಪಿಸಿದೆ,” ಎಂದು ಹೇಳಿದರು.

ರಾಜಕೀಯ ವಿಚಾರ ಕೇಳಿದಾಗ ಅವರು ಸ್ಪಷ್ಟವಾಗಿ ಹೇಳಿದರು, “ನನಗೆ ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ನನ್ನ ಆಸಕ್ತಿ ಮಕ್ಕಳನ್ನು ಕ್ರೀಡೆಗೆ ಸೆಳೆಯುವುದರಲ್ಲಿ ಇದೆ. ಬ್ಯಾಡ್ಮಿಂಟನ್ ನನ್ನ ಹೃದಯಕ್ಕೆ ಹತ್ತಿರವಾದ ಕ್ರೀಡೆ. ನಾಳೆ ರಾಜಕೀಯದ ಬಗ್ಗೆ ಆಸಕ್ತಿ ಬಂದರೆ ಯೋಚಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗಳು ನನಗೆ ಬಹಳ ಇಷ್ಟ. ಅವರು ನನ್ನ ನೆಚ್ಚಿನ ನಾಯಕರು. ಅವರ ಕೆಲವು ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ್ದೇನೆ,” ಎಂದರು.

ಅವರು ಮತ್ತಷ್ಟು ಹೇಳಿದರು, “ರಾಜಕೀಯ ಸುಲಭ ಎಂದು ಹಲವರು ಭಾವಿಸುತ್ತಾರೆ, ಆದರೆ ಅದು ಅಷ್ಟು ಸುಲಭವಲ್ಲ. ಪ್ರತಿಯೊಂದು ಕ್ಷೇತ್ರವೂ ತನ್ನದೇ ಆದ ಸವಾಲುಗಳನ್ನು ಹೊಂದಿದೆ,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

**— ಚಿತ್ರ ಕೃಪೆ-ರತನ್ ಸುರಭಿ**

LEAVE A REPLY

Please enter your comment!
Please enter your name here

seventeen + ten =

Latest news

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...
- Advertisement -spot_imgspot_img

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

  ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ Maharaja Trophy: ಜೂನ್‌ 20 ರಿಂದ ಟೂರ್ನಿ ಆರಂಭ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜನೆ ಐದನೇ ಆವೃತ್ತಿಯ...

Must read

- Advertisement -spot_imgspot_img

You might also likeRELATED
Recommended to you