ಪಡುಬಿದ್ರಿಯಲ್ಲಿ ರಾಯಲ್ ಚಾಲೆಂಜರ್ಸ್ ಅಭಿಮಾನಿ ಬಳಗದಿಂದ ಭಕ್ತಿಯ ಕಟೀಲು ಪಾದಯಾತ್ರೆ

ಪಡುಬಿದ್ರಿಯಲ್ಲಿ ರಾಯಲ್ ಚಾಲೆಂಜರ್ಸ್ ಅಭಿಮಾನಿ ಬಳಗದಿಂದ ಭಕ್ತಿಯ ಕಟೀಲು ಪಾದಯಾತ್ರೆ

ಪಡುಬಿದ್ರಿಯಲ್ಲಿ ರಾಯಲ್ ಚಾಲೆಂಜರ್ಸ್ ಅಭಿಮಾನಿ ಬಳಗದಿಂದ ಭಕ್ತಿಯ ಕಟೀಲು ಪಾದಯಾತ್ರೆ

ಪಡುಬಿದ್ರಿ: ರಾಯಲ್ ಚಾಲೆಂಜರ್ಸ್ ಅಭಿಮಾನಿ ಬಳಗ ಪಡುಬಿದ್ರಿ ಘಟಕದ ವತಿಯಿಂದ ಜೂನ್ 3, 2025ರಂದು ಧಾರ್ಮಿಕ ಭಕ್ತಿಯ ಕಟೀಲು ಪಾದಯಾತ್ರೆ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಪಡುಬಿದ್ರಿ ತಂಡದ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪಾದಯಾತ್ರೆ ಜೂನ್ 3ರಂದು ಮಂಗಳವಾರ ಬೆಳಿಗ್ಗೆ 3 ಗಂಟೆಗೆ ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಪ್ರಾರಂಭವಾಗಲಿದೆ. ಈ ಪಾದಯಾತ್ರೆ ಕಟೀಲು ದೇವಾಲಯದವರೆಗೆ ನಡೆಯಲಿದೆ.

ಈ ಉತ್ಸಾಹಭರಿತ ಧಾರ್ಮಿಕ ಪ್ರಯಾಣದಲ್ಲಿ ಭಕ್ತರನ್ನು ಜತೆಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ್ ಉಚ್ಚಿಲ (ದೂರವಾಣಿ: 9164716499) ಇವರನ್ನು ಸಂಪರ್ಕಿಸಬಹುದಾಗಿದೆ.

ಸಹಕರಿಸುವವರು:

ಸುನಿಲ್ ಶೆಟ್ಟಿ (ಗೌರವಾಧ್ಯಕ್ಷರು)

ಅಪ್ಪು ಪಡುಬಿದ್ರಿ (ಸ್ಥಾಪಕರು)

ಯಶ್ ಪಾಲ್ ಕೋಡಿ (ಅಧ್ಯಕ್ಷರು)

ಪ್ರಶಾಂತ್ ಉಚ್ಚಿಲ (ಕಾರ್ಯದರ್ಶಿ)

ಗೌರೀಶ್ ಆಚಾರ್ಯ ಮೂಲ್ಕಿ (ಜತೆ ಕಾರ್ಯದರ್ಶಿ)

ಈ ಕಾರ್ಯಕ್ರಮಕ್ಕೆ ಆರ್ ಸಿ ಬಿ ಅಭಿಮಾನಿಗಳ ಭಾರಿ ಬೆಂಬಲ ವ್ಯಕ್ತವಾಗಿದ್ದು, “ಈ ಬಾರಿ ಕಪ್ ನಮ್ದೆ!” ಎಂಬ ಆಶಯದೊಂದಿಗೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗೆಲುವಿಗಾಗಿ ವಿಶೇಷ ಪ್ರಾರ್ಥನೆಯಾಗಿ, ಪಡುಬಿದ್ರಿಯ ರಾಯಲ್ ಚಾಲೆಂಜರ್ಸ್ ಅಭಿಮಾನಿ ಬಳಗದ ವತಿಯಿಂದ ಭಕ್ತಿ ಪೂರ್ಣ ಕಟೀಲು ಪಾದಯಾತ್ರೆ ಆಯೋಜಿಸಲಾಗಿದೆ. “ನಮ್ಮ ನಡೆ… ಕಟೀಲು ಅಮ್ಮನೆಡೆ” ಎಂಬ ಘೋಷವಾಕ್ಯದೊಂದಿಗೆ, RCB ತಂಡದ ಮೇಲೆ ಅಪಾರ ಪ್ರೀತಿ ಹೊಂದಿರುವ ಅಭಿಮಾನಿಗಳು ಭಕ್ತಿಯಿಂದ ನಡೆದು ಜೈಕಾರ ಮಾಡಲಿದ್ದಾರೆ. RCB ಅಭಿಮಾನಿಗಳ ಈ ವಿಶಿಷ್ಟ ಭಕ್ತಿಯ ಪಾದಯಾತ್ರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ತಂಡದ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿಯಾಗಬಹುದು ಎಂಬ ಭಾವನೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *