ಕ್ರಿಕೆಟ್‘‘ನಾನು ಫಾರ್ಮ್ ಕಳೆದುಕೊಂಡಿಲ್ಲ, ರನ್ ಬರುತ್ತಿಲ್ಲ ಅಷ್ಟೇ..’’ ಒಬ್ಬ ಮೂರ್ಖನ ಬಾಯಲ್ಲಷ್ಟೇ...

‘‘ನಾನು ಫಾರ್ಮ್ ಕಳೆದುಕೊಂಡಿಲ್ಲ, ರನ್ ಬರುತ್ತಿಲ್ಲ ಅಷ್ಟೇ..’’ ಒಬ್ಬ ಮೂರ್ಖನ ಬಾಯಲ್ಲಷ್ಟೇ ಇಂತಹ ಮಾತು ಬರಲು ಸಾಧ್ಯ

-

- Advertisment -spot_img

‘‘ನಾನು ಫಾರ್ಮ್ ಕಳೆದುಕೊಂಡಿಲ್ಲ, ರನ್ ಬರುತ್ತಿಲ್ಲ ಅಷ್ಟೇ..’’

ಒಬ್ಬ ಮೂರ್ಖನ ಬಾಯಲ್ಲಷ್ಟೇ ಇಂತಹ ಮಾತು ಬರಲು ಸಾಧ್ಯ.

0, 5, 12, 1, 39*, 1, 24, 20, 12, 5, 12, 5.

12 ಇನ್ನಿಂಗ್ಸ್, 136 ರನ್.. 

ಅಮೋಘ ಫಾರ್ಮ್’ನಲ್ಲಿರುವ ಸೂರ್ಯಕುಮಾರನ ಸಾಧನೆಯಿದು.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 34 ರನ್..

140 ಕೋಟಿ ಜನಸಂಖ್ಯೆಯಿರುವ ದೇಶವನ್ನು ಪ್ರತಿನಿಧಿಸುವ ಕ್ರಿಕೆಟ್ ತಂಡದ ಒಬ್ಬ ನಾಯಕನ ಆಟವಿದು..!

ನಾಯಕನೆಂದರೆ ಹೇಗಿರಬೇಕು..? ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುವವನಾಗಿರಬೇಕು. ತನ್ನ ಕೆಲಸದಿಂದ, ತನ್ನ ವ್ಯಕ್ತಿತ್ವದಿಂದ ಸಹವರ್ತಿಗಳಿಗೆ ಮಾದರಿಯಾಗಿ ನಿಲ್ಲುವವನು ನಿಜವಾದ ನಾಯಕ.. ಈ ಮಾತು ಬಂದಾಗಲೆಲ್ಲಾ ನನಗೆ ನೆನಪಾಗುವವನು ಕರ್ನಾಟಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ, ದಾವಣಗೆರೆ ಎಕ್ಸ್ ಪ್ರೆಸ್ ಆರ್.ವಿನಯ್ ಕುಮಾರ್.

ವಿನಯ್ ಕುಮಾರ್ ಅಸಾಧ್ಯವನ್ನು ಸಾಧ್ಯವಾಗಿಸಿದ ನಾಯಕ.. ಅವನು captain ಅಲ್ಲ, Leader. ಭಾರತೀಯ ಕ್ರಿಕೆಟ್’ಗೆ ಸೌರವ್ ಗಂಗೂಲಿ ಹೇಗೋ, ಕರ್ನಾಟಕ ಕ್ರಿಕೆಟ್’ಗೆ ಆರ್.ವಿನಯ್ ಕುಮಾರ್. 

ದಾವಣಗೆರೆಯ ಒಬ್ಬ ಸಾಮಾನ್ಯ ಆಟೋ ಡ್ರೈವರ್ ಮಗ ಕರ್ನಾಟಕ ಕ್ರಿಕೆಟ್’ನಲ್ಲಿ ಏರಿದ ಎತ್ತರವಿದೆಯಲ್ಲಾ.. ಬಹುಶಃ ಆ ಎತ್ತರವನ್ನು ಮತ್ತೊಬ್ಬ ಏರಲಾರ..

2013ರಿಂದ 2015.. ಎರಡೇ ವರ್ಷಗಳಲ್ಲಿ ಆರು ಟ್ರೋಫಿಗಳು.. ಎರಡು ಬಾರಿ ರಣಜಿ ಟ್ರೋಫಿ, ಎರಡು ಬಾರಿ ಇರಾನಿ ಕಪ್, ಮತ್ತೆರಡು ಬಾರಿ ವಿಜಯ್ ಹಜಾರೆ ಟ್ರೋಫಿ.. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಇಂಥಾ ಸಾಧನೆ ಮಾಡಿದ ತಂಡ ಮತ್ತೊಂದು ಇದ್ದರೆ ತೋರಿಸಿ. 

ವಿನಯ್ ಕುಮಾರ್ ತಂಡವನ್ನು ಮುನ್ನಡೆಸುತ್ತಿದ್ದ ನಾಯಕನಲ್ಲ.. ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದ ನಿಜವಾದ ನಾಯಕ. ಅವನ ಆ ಸ್ವಿಂಗ್ ಬೌಲಿಂಗ್, ಕೆಳ ಕ್ರಮಾಂಕದಲ್ಲಿ ಬಂದು ಬ್ಯಾಟ್ ಬೀಸುತ್ತಿದ್ದ ಪರಿ.. ಕ್ಷೇತ್ರರಕ್ಷಣೆಯಲ್ಲಿ ತೋರುತ್ತಿದ್ದ ಚುರುಕುತನ.. ಆತನ ಕಾರಣಕ್ಕೆ ತಂಡಕ್ಕೆ ಸಿಕ್ಕಿದ್ದ ಆ ಸಮತೋಲನ.. ಎಲ್ಲದಕ್ಕೂ ಕರ್ನಾಟಕ ಕ್ರಿಕೆಟ್’ನಲ್ಲಿ ದಾಖಲಾಗಿರುವ ಆ ಸ್ವರ್ಣ ಚರಿತ್ರೆಯೇ ಸಾಕ್ಷಿ ನುಡಿಯುತ್ತಿದೆ.

ಹೌದು.. ವಿನಯ್ ಕುಮಾರ್ ಒಬ್ಬ ಅದ್ಭುತ ನಾಯಕ.. ‘‘ನಿನ್ನ ಜವಾಬ್ದಾರಿ ಇದು. ನಿನ್ನಿಂದ ಇಂತಹ ಆಟ ಬೇಕು” ಎಂದು ಅಧಿಕಾರಯುತವಾಗಿ ಆಟಗಾರರಿಗೆ ಹೇಳುವ ಶಕ್ತಿ ವಿನಯ್ ಕುಮಾರ್’ಗಿತ್ತು. ಕಾರಣ, ಅವನು ಅಂತಹ ಆಟವಾಡಿ ಇನ್ನೊಬ್ಬರಿಂದ ಆಟ ತೆಗೆಸುತ್ತಿದ್ದ. ಕರ್ನಾಟಕ ತಂಡದ ಡ್ರೆಸ್ಸಿಂಗ್ ರೂಮ್’ನಲ್ಲಿ ಅವನ ಮಾತಿಗೆ ಭೂಮಿ ತೂಕವಿರುತ್ತಿತ್ತು. ಅವನ ಮಾತುಗಳನ್ನು ಸಹವರ್ತಿಗಳು ಕೇಳುತ್ತಿದ್ದರು. ಅದು ಆಟದ ಕಾರಣಕ್ಕೆ ಅವನು ಸಂಪಾದಿಸಿದ್ದ ಗೌರವ.. 

ನಾಯಕನೊಬ್ಬ ತನ್ನ ಮೂಲ ಜವಾಬ್ದಾರಿಯನ್ನೇ ನಿಭಾಯಿಸದಿದ್ದರೆ ಇನ್ನೊಬ್ಬರಿಗೆ ಪಾಠ ಹೇಳುವ ನೈತಿಕತೆ, ಅಧಿಕಾರವನ್ನೇ ಕಳೆದುಕೊಂಡು ಬಿಡುತ್ತಾನೆ. ಭಾರತ ಟಿ20 ತಂಡದಲ್ಲಿ ಸೂರ್ಯಕುಮಾರ್ ಯಾದವ್’ಗೆ ಈಗ ಇಂಥಾ ದುಸ್ಥಿತಿ ಎದುರಾಗಿದೆ.

ನಾಯಕನಾದವನು ಯಾವತ್ತೂ ತಂಡಕ್ಕೆ ಹೊರೆಯಾಗಬಾರದು.. 

0, 5, 12, 1, 39*, 1, 24, 20, 12, 5, 12, 5.. ಇದನ್ನು ನೋಡಿದ ಮೇಲೆ ಸೂರ್ಯಕುಮಾರ ತಂಡಕ್ಕೆ ಹೊರೆಯಲ್ಲದೆ ಮತ್ತಿನ್ನೇನೂ ಅಲ್ಲ.. ಇಂಥದ್ದೇ ಕೆಟ್ಟ ಆಟವಾಡಿದ್ದಕ್ಕೆ ಟಿ20 ವಿಶ್ವಕಪ್-2026 ಟೂರ್ನಿಗೆ ಆಯ್ಕೆ ಮಾಡಲಾದ ಭಾರತ ತಂಡದಿಂದ ಶುಭಮನ್ ಗಿಲ್ ಹೊರ ಬಿದ್ದಿದ್ದಾನೆ. ನಾಯಕನೆಂಬ ಒಂದೇ ಒಂದು ಕಾರಣಕ್ಕೆ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಉಳಿದಿದ್ದಾನೆ.

30ನೇ ವಯಸ್ಸಿಗೆ ಭಾರತ ತಂಡಕ್ಕೆ ಪದಾರ್ಪಣೆ.. 32ಕ್ಕೆ ಜಗತ್ತಿನ ನಂ.1 ಟಿ20 ಬ್ಯಾಟರ್, 34ಕ್ಕೆ ಕ್ಯಾಪ್ಟನ್.. 35ನೇ ವಯಸ್ಸಲ್ಲಿ ವಿಶ್ವಕಪ್ ತಂಡದ ನಾಯಕ.. ಸೂರ್ಯಕುಮಾರ್ ಯಾದವನದ್ದು ಎಂಥಾ ಸಕ್ಸಸ್ ಸ್ಟೋರಿ..?

ಆದರೆ ಈಗ..? ಆಕಾಶದೆತ್ತರದಲ್ಲಿ ಹಾರಾಡುತ್ತಿದ್ದವನು ಪಾತಾಳಕ್ಕೆ ಬಿದ್ದ ಅನುಭವ. ತಂಡ ಗೆಲ್ಲುತ್ತಿದೆ ನಿಜ. ಸೂರ್ಯಕುಮಾರ್ ಯಾದವ್ ಸೋಲುತ್ತಿದ್ದಾನೆ. ನಾಯಕನಾಗಿ ಗೆದ್ದರೂ, ಆಟಗಾರನಾಗಿ ಸೋತಿದ್ದಾನೆ. ಪರಿಣಾಮ, ನಾಯಕನೆಂಬ ಕೋಟಾದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ ಅವನಿಗೆ. 

ಇಷ್ಟಾದರೂ ಅವನು ಆಡಿದ ಮಾತಿದೆಯಲ್ಲಾ.. 

‘‘ನಾನು ಫಾರ್ಮ್ ಕಳೆದುಕೊಂಡಿಲ್ಲ, ರನ್ ಬರುತ್ತಿಲ್ಲ ಅಷ್ಟೇ..’’. 

ಇದರ ಅರ್ಥ ಇಷ್ಟೇ.. ‘ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’. 

ಸೂರ್ಯಕುಮಾರ್ ಯಾದವ್ ಮುಗ್ಗರಿಸಿ ಬಿದ್ದಿದ್ದಾನೆ ನಿಜ.. ಹಾಗಂತ ಇದೇನೂ ಮತ್ತೆ ಮೇಲೆದ್ದು ನಿಲ್ಲಲಾಗದ ಸೋಲಲ್ಲ.. 

ಬಿದ್ದವನು ಎದ್ದು ನಿಲ್ಲದಿದ್ದರಷ್ಟೇ ಸೋಲು.. ಭಾರತ ಕ್ರಿಕೆಟ್ ತಂಡದ ತಂಡದ ಕೋಚ್ ಗೌತಮ್ ಗಂಭೀರನ ರಾಜಕೀಯದ ದಾಳವಾಗದೆ ಆಟದತ್ತ ಮಾತ್ರ ಗಮನ ಹರಿಸಿದರೆ ಸೂರ್ಯಕುಮಾರ್ ಯಾದವ್ ಮತ್ತೆ ಸೂರ್ಯನಂತೆ ಪ್ರಜ್ವಲಿಸಬಲ್ಲ. 

– ಸುದರ್ಶನ್

LEAVE A REPLY

Please enter your comment!
Please enter your name here

sixteen − 4 =

Latest news

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಯುವ...

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!   2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್...

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ!

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲಿ ಕೆಲವು ಆಟಗಾರರು ಕೇವಲ ಕ್ರಿಕೆಟಿಗರಾಗಿ ಮಾತ್ರ ಉಳಿಯುವುದಿಲ್ಲ; ಅವರು ಭಾವನೆಗಳಾಗುತ್ತಾರೆ....

RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ… ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ?

  RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ... ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ? ಈ ಋತುವಿನ ಐಪಿಎಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಬೆಂಗಳೂರು ಮತ್ತು ಗುಜರಾತ್...
- Advertisement -spot_imgspot_img

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

Must read

- Advertisement -spot_imgspot_img

You might also likeRELATED
Recommended to you