
ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್
ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಪ್ರಶಸ್ತಿಯನ್ನು ಗುರುಗಣೇಶ್ ನೇಜಾರು ತಮ್ಮದಾಗಿಸಿಕೊಂಡಿತು.
ಉಡುಪಿ,ಮಂಗಳೂರು ಉಭಯ ಜಿಲ್ಲೆಯ ಆಟಗಾರರನ್ನೊಳಗೊಂಡ ಒಟ್ಟು 16 ಫ್ರಾಂಚೈಸಿಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು,

ಫೈನಲ್ ನಲ್ಲಿ ಗುರುಗಣೇಶ್ ನೇಜಾರು-ಶ್ರೀ ಮಾತಾ ಕೈಲ್ಕೆರೆ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ 1,11,111 ರೂ ಸಹಿತ ಆಕರ್ಷಕ ಪಾರಿತೋಷಕವನ್ನು ಪಡೆದರು.
ಗುರುಗಣೇಶ್ ತಂಡದ ಪ್ರಸಿದ್ಧ್ ಫೈನಲ್ ಪಂದ್ಯಶ್ರೇಷ್ಟ,ಬೆಸ್ಟ್ ಬ್ಯಾಟರ್ ಅಶ್ವಿನ್ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಗುರುಗಣೇಶ್ ತಂಡದ ರಾಕೇಶ್ ಮಲ್ಪೆ ಪಡೆದುಕೊಂಡರು.





