
ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ದೀಪಾವಳಿಗೆ ಹೊಸ ಬಟ್ಟೆ ಉಡುಗೊರೆ
ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ಇವರ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಕೂಡ ದೀಪಾವಳಿಯ ಪ್ರಯುಕ್ತ ಉಡುಪಿ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನ ಆಶ್ರಮದ ಮಕ್ಕಳಿಗೆ ಹೊಸ ಬಟ್ಟೆ ಉಡುಗೊರೆ ನೀಡಿ,ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಿದರು.

ವೆಂಕಟರಮಣ ಪಿತ್ರೋಡಿ ಸಂಸ್ಥೆಯ ಸದಸ್ಯರು ದೀಪಾವಳಿ ಹಬ್ಬದ ಸಂದರ್ಭ ಪಟಾಕಿಗೆ ಖರ್ಚು ಮಾಡುವ ಹಣವನ್ನು ಉಳಿಸಿ,ಆಶ್ರಮದ ಮಕ್ಕಳಿಗೆ ಹೊಸ ಬಟ್ಟೆ ಉಡುಗೊರೆ ನೀಡಿ ಆಶ್ರಮದ ಮಕ್ಕಳೊಂದಿಗೆ ದೀಪಾವಳಿ ಸಂಭ್ರಮವನ್ನು ಆಚರಿಸುತ್ತೇವೆ ಎಂದು ಅಧ್ಯಕ್ಷರಾದ ಸಂದೀಪ್ ಕುಮಾರ್ ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.





ಈ ಸಂದರ್ಭ ಉಪಾಧ್ಯಕ್ಷರಾದ ವಿಜಯ್ ಕೋಟ್ಯಾನ್, ಸಲಹೆಗಾರರಾದ ಜಿತೇಂದ್ರ ಶೆಟ್ಟಿ, ಸ್ಪೋರ್ಟ್ಸ್ ಕನ್ನಡದ ಕೋಟ ರಾಮಕೃಷ್ಣ ಆಚಾರ್ಯ, ಕಾರ್ಯದರ್ಶಿಯಾದ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿಯಾದ ಲೋಕೇಶ್ ಸುವರ್ಣ, ಸತೀಶ್ ಕುಂದರ್, ಪ್ರವೀಣ್ ಕುಮಾರ್, ಸಂತೋಷ್ ಕುಂದರ್, ನಾಗೇಶ್ ಮೈಂದನ್, ಯುವರಾಜ್ ಸಾಲ್ಯಾನ್, ಕಿರಣ್, ಸುರೇಶ್ ಉಪಸ್ಥಿತರಿದ್ದರು,







