
ಸ್ಪೋರ್ಟ್ಸ್ ಕನ್ನಡ ಕಚೇರಿಯಲ್ಲಿ ಆಯುಧ ಪೂಜೆ ಆಚರಣೆ
ಉಡುಪಿ: ನವರಾತ್ರಿಯ ಪ್ರಯುಕ್ತ ಇಂದು (ಅ.1) ಸ್ಪೋರ್ಟ್ಸ್ ಕನ್ನಡ ಕಚೇರಿಯಲ್ಲಿ ಆಯುಧ ಪೂಜೆ Simple ಆಗಿ ಹಾಗೂ ಶ್ರದ್ಧೆಯಿಂದ ನೆರವೇರಿತು. ಪ್ರತಿ ವರ್ಷದಂತೆ ಈ ಬಾರಿ ಕೂಡ ಕಚೇರಿಯ ಎಲ್ಲಾ ಉಪಕರಣಗಳು, ಕಂಪ್ಯೂಟರ್‌ಗಳು, ಕ್ಯಾಮೆರಾಗಳು ಮತ್ತು ಕಾರ್ಯಕ್ಕೆ ಉಪಯೋಗವಾಗುವ ವಸ್ತುಗಳಿಗೆ ಪೂಜೆ ಸಲ್ಲಿಸಲಾಯಿತು.

ಈ ಪೂಜಾ ಕಾರ್ಯಕ್ರಮದಲ್ಲಿ ಸ್ಪೋರ್ಟ್ಸ್ ಕನ್ನಡದ ಸಂಸ್ಥಾಪಕರು, ಸಿಬ್ಬಂದಿ ಮತ್ತು ಹಲವು ಹಿರಿಯರು ಉಪಸ್ಥಿತರಿದ್ದರು. ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ ನೆರವೇರಿದ ಬಳಿಕ, ಪ್ರಸಾದ ವಿತರಣೆ ಕೂಡ ಜರುಗಿತು.


ಸಂಸ್ಥೆಯ ಮುಖ್ಯಸ್ಥ ಕೋಟ ರಾಮಕೃಷ್ಣ ಆಚಾರ್ಯ ಈ ಸಂದರ್ಭದಲ್ಲಿ ಮಾತನಾಡಿ, “ಕೇವಲ ಕೆಲಸವಲ್ಲ, ನಾವು ಬಳಸುವ ಸಾಧನಗಳಿಗೂ ಗೌರವ ತೋರಿಸುವ ಸಂಭ್ರಮ ಇದು. ನಮ್ಮ ಕೆಲಸ ಸುಗಮವಾಗಿ ಸಾಗಲಿ ಎಂಬ ಆಶಯದೊಂದಿಗೆ ಈ ಆಚರಣೆ ನಡೆಸುತ್ತಿದ್ದೇವೆ,” ಎಂದರು.
ಹಿರಿಯ ಆಟಗಾರರಾದ ಯಾದವ್ ನಾಯ್ಕ್ ಕೆಮ್ಮಣ್ಣು, ವಿ.ಲಾತವ್ಯ ಆಚಾರ್ಯ ಉಡುಪಿ,ರಾಯೇಶ್ ಕಿಣಿ,ಯು.ಆರ್.ಸ್ಪೋರ್ಟ್ಸ್ ಪಾಲುದಾರರಾದ ಪ್ರವೀಣ್ ಪಿತ್ರೋಡಿ,ದೇವರಾಜ್ ಸಾಲ್ಯಾನ್,ಸಂದೀಪ್ ಕುಮಾರ್,ಉಡುಪಿಯ ಖ್ಯಾತ ರೂಪದರ್ಶಿ ವಿದ್ಯಾಸರಸ್ವತಿ,ಚಲನಚಿತ್ರ ನಟಿ ಆಶಾ ನಾಯಕ್ ಇನ್ನಂಜೆ,ಶಿವರಾಮ್ ಆಚಾರ್ಯ ಮತ್ತು ಭಾಸ್ಕರ್ ಆಚಾರ್ಯ ಉಪಸ್ಥಿತರಿದ್ದರು.






