ಕ್ರಿಕೆಟ್ಆಟದ ಗತಿಯನ್ನೇ ಬದಲಿಸಿ ಮಹತ್ವದ ತಿರುವು ನೀಡಿದ ಭಾರತದ ಆತ್ಮವಿಶ್ವಾಸದ ಕಮಾಂಡರ್

ಆಟದ ಗತಿಯನ್ನೇ ಬದಲಿಸಿ ಮಹತ್ವದ ತಿರುವು ನೀಡಿದ ಭಾರತದ ಆತ್ಮವಿಶ್ವಾಸದ ಕಮಾಂಡರ್

-

- Advertisment -spot_img

ಆಟದ ಗತಿಯನ್ನೇ ಬದಲಿಸಿ ಮಹತ್ವದ ತಿರುವು ನೀಡಿದ ಭಾರತದಆತ್ಮವಿಶ್ವಾಸದ ಕಮಾಂಡರ್

ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ (ಡಿ 18) ನಿವೃತ್ತಿ ಘೋಷಿಸಿದ್ದಾರೆ.

ಭಾರತ ತಂಡದಲ್ಲಿ ಅಶ್ವಿನ್ ಯಾವಾಗಲೂ ಮ್ಯಾಚ್ ವಿನ್ನರ್ ಮತ್ತು ವಿಕೆಟ್ ಟೇಕರ್ ಆಗಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಭಾರತ ತಂಡಕ್ಕೆ ಹಲವು ನಿರ್ಣಾಯಕ ಕ್ಷಣಗಳಲ್ಲಿ ವಿಕೆಟ್ ಕಬಳಿಸಿ ಟರ್ನಿಂಗ್ ಪಾಯಿಂಟ್ ಸೃಷ್ಟಿಸುವ ಮೂಲಕ ಆಟದ ಗತಿಯನ್ನೇ ಬದಲಿಸಿದವರು ಅಶ್ವಿನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲ ಸಂದರ್ಭಗಳಲ್ಲಿ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ.

2021 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸಿಡ್ನಿ ಟೆಸ್ಟ್‌ನಲ್ಲಿ ಅಶ್ವಿನ್ ಅವರ ಅದ್ಭುತ ಪ್ರದರ್ಶನವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಟೆಸ್ಟ್ ಮಾತ್ರವಲ್ಲದೆ, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿಯೂ ಸಹ ಅಶ್ವಿನ್ ತನ್ನನ್ನು ತಾನು ವ್ಯಕ್ತಪಡಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಮರ್ಥರಾಗಿದ್ದಾರೆ.

2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಆಡಿದ ಮೈಂಡ್ ಗೇಮ್ ಎಂದಿಗೂ ಮರೆಯಲಾಗದು.ಎದುರಾಳಿ ತಂಡಕ್ಕೆ ಬೌಲಿಂಗ್ ಮಾಡುವಾಗ ಬ್ಯಾಟ್ಸ್‌ಮನ್‌ಗಳ ಮನಸ್ಥಿತಿಯನ್ನು ತಿಳಿದುಕೊಳ್ಳುವಲ್ಲಿ ಅಶ್ವಿನ್‌ ಅವರದ್ದು ಎತ್ತಿದ ಕೈ. ಅಶ್ವಿನ್‌ಗೆ ಬ್ಯಾಟ್ಸ್‌ಮನ್‌ಗಳು ಯಾವ ವಾತಾವರಣದಲ್ಲಿದ್ದಾರೆ, ಅವರು ನರ್ವಸ್ ಆಗಿರಲಿ ಅಥವಾ ಒತ್ತಡದಲ್ಲಿರಲಿ ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡುತ್ತಾರೆ. ಅದೇ ರೀತಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಅಶ್ವಿನ್ ಅವರು ಆಟಗಾರರ ಆತಂಕ, ಗಾಬರಿಯನ್ನು ಸುಲಭವಾಗಿ ಪಾಸಿಟಿವ್ ಆಗಿ ಪರಿವರ್ತಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ 

ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅನೇಕ ಸಾಧನೆಗಳನ್ನು ಮತ್ತು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ವೇಗದ 300 ವಿಕೆಟ್, 2ನೇ ಗರಿಷ್ಠ ವಿಕೆಟ್ ಹೀಗೆ ಹಲವು ದಾಖಲೆಗಳನ್ನು ಅಶ್ವಿನ್ ನಿರ್ಮಿಸಿದ್ದಾರೆ.

ಧೋನಿ  ಸಿಎಸ್‌ಕೆ ಯಲ್ಲಿದ್ದಾಗಲೂ ಅಶ್ವಿನ್ ಅವರ ಬೌಲಿಂಗ್ ಮತ್ತು ಕೌಶಲ್ಯಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಶ್ವಿನ್ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಧೋನಿ ಅನೇಕ ಅವಕಾಶಗಳನ್ನು ನೀಡಿದರು. ಸಿಎಸ್ ಕೆ ನಾಯಕರಾಗಿದ್ದಾಗ ಹಾಗೂ ಧೋನಿ ಭಾರತ ತಂಡದ ನಾಯಕರಾಗಿದ್ದಾಗ ಅಶ್ವಿನ್ ಪ್ರತಿಭೆ ಹೊರತರುವಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿದ್ದರು.

2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಶ್ವಿನ್ ಭಾರತ ತಂಡವನ್ನು 5 ರನ್‌ಗಳಿಂದ ಗೆಲ್ಲಲು ನೆರವಾದರು. ಅಶ್ವಿನ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು ಮತ್ತು ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 537 ವಿಕೆಟ್‌ಗಳೊಂದಿಗೆ ಭಾರತದಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರೂ, ಅವರ 300 ನೇ ವಿಕೆಟ್ ವಿಶೇಷ ಹಿರಿಮೆ ಹೊಂದಿದೆ.

ಹೌದು, ಅಶ್ವಿನ್ ಕೇವಲ 54 ಪಂದ್ಯಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 300ನೇ ವಿಕೆಟ್‌ಗೆ ತಲುಪಿದ್ದಾರೆ. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ವೇಗವಾಗಿ ಉರುಳಿಸುವ ಮೂಲಕ ಡೆನ್ನಿಸ್ ಲಿಲ್ಲಿ ಅವರ ದಾಖಲೆಯನ್ನು ಮುರಿದರು.

ಡೆನ್ನಿಸ್ ಲಿಲ್ಲಿ 56 ಟೆಸ್ಟ್ ಪಂದ್ಯಗಳಲ್ಲಿ 300 ವಿಕೆಟ್ ಗಳಿಸಿದ್ದರೆ, ಅಶ್ವಿನ್ 54 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅದೂ ಅಲ್ಲದೆ ಅಶ್ವಿನ್ ಮುರಳೀಧರನ್ ಅವರಿಗಿಂತ 4 ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಶ್ವಿನ್, ಮುಂದಿನ 6 ವರ್ಷಗಳಲ್ಲಿ 300 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದ್ದರು.

ಭಾರತ ತಂಡದಲ್ಲಿ ಅಶ್ವಿನ್ ಸಾಧನೆ ಮಾಡಲು ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಲು ಇನ್ನೂ ಸಾಕಷ್ಟು ಸಮಯವಿರುವಾಗ , ಮೊನ್ನೆ ಕ್ರಿಕೆಟ್ ಜಗತ್ತು ಇದ್ದಕ್ಕಿದ್ದಂತೆ ಅವರ ಕೊಡುಗೆಯನ್ನು ಕಳೆದುಕೊಂಡಿದೆ.

LEAVE A REPLY

Please enter your comment!
Please enter your name here

five + three =

Latest news

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...
- Advertisement -spot_imgspot_img

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

Must read

- Advertisement -spot_imgspot_img

You might also likeRELATED
Recommended to you