ಕ್ರಿಕೆಟ್10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

-

- Advertisment -spot_img

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ ಮನೆಯ ಉಸಿರಿನಲ್ಲಿ ಬೆರೆತು ಹೋಗಿರುವ ದಾದಾ ಸೌರವ್ ಗಂಗೂಲಿ.. ಅವರು ಭಾರತೀಯ ಕ್ರಿಕೆಟ್’ನ ನಿಜನಾಯಕ, ಜನನಾಯಕ.. 

22 ವರ್ಷಗಳ ಹಿಂದೆ ಸೌರವ್ ಗಂಗೂಲಿ ಇನ್ನೇನು ವಿಶ್ವಕಪ್ ಗೆದ್ದೇ ಬಿಟ್ಟಿದ್ದರು.. ಒಂದೇ ಒಂದು ‘ಕೆಟ್ಟ ದಿನ’ ದಾದಾ ಕನಸಿಗೆ ಕೊಳ್ಳಿ ಇಟ್ಟಿತ್ತು. ಈಗ ಅದೇ ದಾದಾ ನಾಡಿನಿಂದ ಬಂದ ಹೆಣ್ಣು ಮಗಳು ಬಂಗಾಳದ ಬಂಗಾರದ ಹುಡುಗಿಯಾಗಿ ಕಂಗೊಳಿಸುತ್ತಿದ್ದಾಳೆ. ಬಂಗಾಳದ ಪಾಲಿಗೆ ಅವಳೇ ಮೊದಲ ವಿಶ್ವಕಪ್ ವಿನ್ನರ್. 

ಅಂದ ಹಾಗೆ, 2003ರಲ್ಲಿ ಸೌರವ್ ಗಂಗೂಲಿ ದಕ್ಷಿಣ ಆಫ್ರಿಕಾದ ಜೊಹಾನ್ಸ್’ಬರ್ಗ್’ನಲ್ಲಿ ವಿಶ್ವಕಪ್ ಫೈನಲ್ ಆಡುವ ಹೊತ್ತಿಗೆ ಈ ಹುಡುಗಿ ಹುಟ್ಟಿಯೇ ಇರಲಿಲ್ಲ. ಆಕೆಯ ಹೆಸರು ರಿಚಾ ಘೋಷ್.. 

ಕಟ್ಟು ಮಸ್ತಿನ ಶಕ್ತಿಶಾಲಿ ಹುಡುಗಿ.. ಸಿಡಿಲ ಸಿಕ್ಸರ್’ಗಳಿಗೆ ಹೆಸರುವಾಸಿ.. ಭಾರತ ಮಹಿಳಾ ತಂಡ ವಿಶ್ವಕಪ್ ಗೆದ್ದಿದೆ ಎಂದರೆ ಅದರಲ್ಲಿ ಈಕೆಯ ಪಾತ್ರ ನಿರ್ಣಾಯಕ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್’ನಲ್ಲಿ ವಿಶ್ವದಾಖಲೆಯ 338 ರನ್ ಚೇಸಿಂಗ್ ವೇಳೆ ಕೊನೇ ಕ್ಷಣದಲ್ಲಿ ಬಂದು 26 ಎಸೆತಗಳಲ್ಲಿ ಬಾರಿಸಿದ 26 ರನ್.. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್’ನಲ್ಲಿ 24 ಚೆಂಡುಗಳ ಮುಂದೆ ಸಿಡಿಸಿದ 34 ರನ್.. ಅದೇ ದಕ್ಷಿಣ ಆಫ್ರಿಕಾ ವಿರುದ್ಧದ ಲೀಗ್ ಪಂದ್ಯದಲ್ಲಿ 77 ಎಸೆತಗಳಲ್ಲಿ ಬಾರಿಸಿದ 94 ರನ್ ಭಾರತದ ಯಶಸ್ಸಿಗೆ ಕಾರಣವಾದ ಇನ್ನಿಂಗ್ಸ್’ಗಳು.. 

ಭಾರತದ ಪೂರ್ವಭಾಗದ ಒಬ್ಬ ವಿಕೆಟ್ ಕೀಪರ್ ದೇಶಕ್ಕೆ ಎರಡು ವಿಶ್ವಕಪ್’ಗಳನ್ನು ಗೆಲ್ಲಿಸಿದರೆ, ಅದೇ ಭಾಗದ ಹುಡುಗಿ ಮಹಿಳಾ ತಂಡದ ಐತಿಹಾಸಿಕ ವಿಶ್ವಕಪ್ ಗೆಲುವಿನ ರೂವಾರಿಗಳಲ್ಲಿ ಒಬ್ಬಳಾಗಿ ನಿಂತಿದ್ದಾಳೆ. 

ರಿಚಾ ಘೋಷ್ ಬಂಗಾಳದ ಸಿಲಿಗುರಿಯ ಧೂಳಿನಿಂದ ಎದ್ದು ಬಂದವಳು.. ಊರಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ನೂರಾರು ಹುಡುಗರ ಮಧ್ಯೆ ಒಬ್ಬಳೇ ಒಬ್ಬಳು ಹೆಣ್ಣು ಮಗಳು.. 

ರಿಚಾ ಘೋಷ್ ಆಟದಲ್ಲಿ ಭಯವೆಂಬುದೇ ಇಲ್ಲ.. ಅವಳು fearless. ಇದು ಹುಡುಗರ ಜೊತೆ ಆಡುತ್ತಾ ಆಡುತ್ತಾ ಬಂದ ಬಳುವಳಿ.. 

ಲೆದರ್ ಬಾಲ್ ಕ್ರಿಕೆಟ್ ಆಡಲು ಶುರು ಮಾಡಿದ ನಂತರ ಸಿಲಿಗುರಿಯ ತಂಡದಲ್ಲಿ 10 ಮಂದಿ ಹುಡುಗರಾದರೆ ಹನ್ನೊಂದನೆಯವಳು ಈ ರಿಚಾ ಘೋಷ್.

ಹೆಣ್ಣು ಹುಡುಗಿ ಎಂದು ಎದುರಾಳಿ ತಂಡದ ಬೌಲರ್’ಗಳು ಕರುಣೆ ತೋರಿಸುತ್ತಿರಲಿಲ್ಲ. ತನಗಿಂತ ಶಕ್ತಿವಂತರ ವಿರುದ್ಧ ಆಡಿ, ತನಗಿಂತ ಬಲಿಷ್ಠರನ್ನೇ ಎದುರಿಸಿ ಬಂದ ಕಾರಣಕ್ಕೆ ಈಗ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಯಾವ ಭಯವೂ ಇಲ್ಲದೆ ಸಿಡಿಲ ಹೊಡೆತಗಳನ್ನು ಬಾರಿಸುತ್ತಿದ್ದಾಳೆ.. 

ಅಪ್ಪ ಮಾನವೇಂದ್ರ ಘೋಷ್ ಟೆನಿಸ್ ಬಾಲ್’ನಲ್ಲಿ ಅದ್ಭುತ ಕ್ರಿಕೆಟರ್.. ಪವರ್ ಹಿಟ್ಟರ್.. ಬಿಗ್ ಹಿಟ್ಟಿಂಗ್ ರಿಚಾಗೆ ತಂದೆಯಿಂದ ಸಿದ್ಧಿಸಿದ ಕಲೆ. 

ಪಶ್ಚಿಮ ಬಂಗಾಳದ ತುತ್ತತುದಿಯ, ಹಿಮಾಲಯದ ಪದತಲದ ಸಿಲಿಗುರಿಯವಳು ರಿಚಾ ಘೋಷ್. ಸಿಲಿಗುರಿಯಲ್ಲಿ ಹುಡುಗರೊಂದಿಗೆ ಆಡುತ್ತಾ ಬೆಳೆದವಳು ವಿಶ್ವಕಪ್ ಗೆದ್ದು ಊರಿಗೆ ಮರಳಿದಾಕ್ಷಣ ಇಡೀ ಊರಿಗೆ ಊರೇ ಮನೆ ಮಗಳನ್ನು ಸ್ವಾಗತಿಸಿದ ಕ್ಷಣ.. ಆ ದೃಶ್ಯ, ತೆರೆದ ಜೀಪ್’ನಲ್ಲಿ ಆ ಮೆರವಣಿಗೆ.. ಎಲ್ಲವೂ ಅದ್ಭುತ..

LEAVE A REPLY

Please enter your comment!
Please enter your name here

7 − 1 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you