ಕ್ರಿಕೆಟ್ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

-

- Advertisment -spot_img

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

ಅಂಬಾಗಿಲು: ಅಂಬಾಗಿಲು ಎಆರ್ ಫ್ರೆಂಡ್ಸ್ (AR Friends) ವತಿಯಿಂದ ಜಿಎಸ್‌ಬಿ ಟ್ರೋಫಿ ಅಂಬಾಗಿಲು 2026 ಕ್ರಿಕೆಟ್ ಟೂರ್ನಿಯನ್ನು ಇಂದು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಾವಳಿಗಳನ್ನು ನೀಡಿದವು. ಅಂತಿಮ ಪಂದ್ಯದಲ್ಲಿ ವಿಹಾನ್ ಫೈಟರ್ಸ್ ಹರಿಖಂಡಿಗೆ ತಂಡವು SLNC ಉಳ್ಳಾಲ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಟೂರ್ನಿಯಲ್ಲಿ ವಿಹಾನ್ ಫೈಟರ್ಸ್ ಬಿ ತಂಡವು ಮೂರನೇ ಸ್ಥಾನವನ್ನು ಪಡೆದುಕೊಂಡರೆ, ಕೊಂಕಣ್ ಎಕ್ಸ್ ಪ್ರೆಸ್ ಕೋಟೇಶ್ವರ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಅಂತಿಮ ಪಂದ್ಯದಲ್ಲಿ “ದೀಪಕ್ ಕಾಮತ್ ಬೆಳ್ಮಣ್” ಅವರು ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು “ಆಧೇಶ್ ಭಟ್ ಮೂಲ್ಕಿ” ಪಡೆದುಕೊಂಡರೆ, ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ “ವಿವೇಕ್ ಪ್ರಭು ಅಂಬಾಗಿಲು” ಅವರಿಗೆ ಲಭಿಸಿತು. ಟೂರ್ನಿಯ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು “ಪವನ್ ಉಳ್ಳಾಲ” ತಮ್ಮದಾಗಿಸಿಕೊಂಡರು. ಶರತ್ ಪ್ರಭು( ಬುಲ್ಲಿ) ಅವರು ಅತ್ಯುತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಪಡೆದರು ಹಾಗೂ ಪವನ್ ಉಳ್ಳಾಲ ಅವರು ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಗೆ ಭಾಜನರಾದರು.

ಈ ಟೂರ್ನಿಯನ್ನು ಅಂಬಾಗಿಲು ಎಆರ್ ಫ್ರೆಂಡ್ಸ್ ತಂಡವು ವಿವೇಕ್ ಪ್ರಭು ಅವರ ನೇತೃತ್ವದಲ್ಲಿ ಸಮರ್ಪಕವಾಗಿ ಆಯೋಜಿಸಿ, ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭ ಜಿಎಸ್‌ಬಿ ಸಮುದಾಯದ ಮೂವರು ಮಹಾನ್ ಕ್ರಿಕೆಟಿಗರನ್ನು ಗುರುತಿಸಿ ಸನ್ಮಾನಿಸಲಾಯಿತು. ಶರತ್ ಪ್ರಭು, ಗಿರೀಶ್ ಪೈ ಮಂಗಳೂರು ಹಾಗೂ ಗಣೇಶ್ ನಾಯಕ್ ಕೋಟ ಇವರ ಕ್ರಿಕೆಟ್ ಕ್ಷೇತ್ರದ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here

four + nine =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...
- Advertisement -spot_imgspot_img

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

Must read

- Advertisement -spot_imgspot_img

You might also likeRELATED
Recommended to you