
ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’
ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಚಿತ್ರದುರ್ಗ ಇವರ ವತಿಯಿಂದ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ಆಯೋಜಿಸಲಾಗಿರುವ *“ವಿಶ್ವಕರ್ಮ ಪ್ರೀಮಿಯರ್ ಲೀಗ್ (VPL) – ಚಿತ್ರದುರ್ಗ 2026”* ಕ್ರಿಕೆಟ್ ಟೂರ್ನಿಯು ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರೀಡಾಕೂಟವಾಗಿ ಹೊರಹೊಮ್ಮುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ವಿಶ್ವಕರ್ಮ ಸಮಾಜದ ಪ್ರತಿಭಾವಂತ ಆಟಗಾರರು ಈ ಮಹತ್ವದ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಸಮುದಾಯದ ಏಕತೆ, ಕ್ರೀಡಾಸ್ಫೂರ್ತಿ ಹಾಗೂ ಪ್ರತಿಭೆಗೆ ವೇದಿಕೆಯಾಗಲಿದೆ.
ಈ ಕ್ರೀಡಾಕೂಟವು ಆಗಸ್ಟ್ 6ರಿಂದ 9ರವರೆಗೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದ ಮೈದಾನ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಈಗಾಗಲೇ ರಾಜ್ಯದಾದ್ಯಂತ ವಿಶ್ವಕರ್ಮ ಸಮೂದಾಯದ ಕ್ರೀಡಾಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.ಟೂರ್ನಿಯು ಆಗಸ್ಟ್ 6ರಿಂದ 9ರವರೆಗೆ ನಡೆಯಲಿದೆ.

ಟೂರ್ನಿಯ ಆಟಗಾರರ ಹರಾಜು (Player Auction) ಕಾರ್ಯಕ್ರಮವು ಜುಲೈ 12, 2026ರಂದು ನಡೆಯಲಿದ್ದು, ವಿವಿಧ ತಂಡಗಳು ಪ್ರತಿಭಾವಂತ ಆಟಗಾರರನ್ನು ತಮ್ಮ ತಂಡಗಳಿಗೆ ಆಯ್ಕೆ ಮಾಡಿಕೊಳ್ಳಲಿವೆ. ಈ ಹರಾಜು ಪ್ರಕ್ರಿಯೆ ಟೂರ್ನಿಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಈ ಟೂರ್ನಿಗೆ ಸ್ಪೋರ್ಟ್ಸ್ ಕನ್ನಡ ಮಾಧ್ಯಮ ಸಹಭಾಗಿಯಾಗಿ ಕಾರ್ಯನಿರ್ವಹಿಸಲಿದ್ದು, ಇದರ ನೇತೃತ್ವವನ್ನು ಕೆ.ಆರ್.ಕೆ ಆಚಾರ್ಯ ವಹಿಸಿಕೊಂಡಿದ್ದಾರೆ. ಪಂದ್ಯಾವಳಿಯ ಸಂಪೂರ್ಣ ಮಾಹಿತಿಗಳು, ನೇರ ಪ್ರಸಾರ, ವಿಶೇಷ ವರದಿಗಳು ಹಾಗೂ ಆಟಗಾರರ ಪರಿಚಯ ಕಾರ್ಯಕ್ರಮಗಳನ್ನು ಸ್ಪೋರ್ಟ್ಸ್ ಕನ್ನಡ ಮೂಲಕ ಜನತೆಗೆ ತಲುಪಿಸಲಾಗುತ್ತದೆ.
ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷರಾದ ಎಂ. ಶಂಕರ ಮೂರ್ತಿ ಹಾಗೂ ಕಾರ್ಯದರ್ಶಿ ಆರ್. ಮಧುಸೂದನ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟವು ವಿಶ್ವಕರ್ಮ ಸಮುದಾಯದ ಯುವ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸಿಕೊಡುವುದರ ಜೊತೆಗೆ, ಸಮುದಾಯದ ಸಂಘಟಿತ ಶಕ್ತಿಯನ್ನು ರಾಜ್ಯದ ಮುಂದೆ ಪರಿಚಯಿಸುವ ವೇದಿಕೆಯಾಗಲಿದೆ.
ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಘೋಷಿಸಲಾದ ಅತಿದೊಡ್ಡ ನಗದು ಬಹುಮಾನ ಹೊಂದಿರುವ ಈ ಕ್ರಿಕೆಟ್ ಟೂರ್ನಿ ಕರ್ನಾಟಕ ರಾಜ್ಯದಾದ್ಯಂತ ಇರುವ ವಿಶ್ವಕರ್ಮ ಸಮುದಾಯದ ಆಟಗಾರರಿಗೆ ಒಂದು ಸುವರ್ಣಾವಕಾಶವಾಗಿರುತ್ತದೆ.




