ಕ್ರಿಕೆಟ್ದುಬೈ ದಸರಾ ಕಪ್ ಕ್ರಿಕೆಟ್ ಡಿಸೆಂಬರ್ 7ಕ್ಕೆ- ಹೆಮ್ಮೆಯ ದುಬೈ ಕನ್ನಡ...

ದುಬೈ ದಸರಾ ಕಪ್ ಕ್ರಿಕೆಟ್ ಡಿಸೆಂಬರ್ 7ಕ್ಕೆ- ಹೆಮ್ಮೆಯ ದುಬೈ ಕನ್ನಡ ಸಂಘದಿಂದ 7ನೇ ವರ್ಷದ ದಸರಾ ಕಪ್ ಕ್ರಿಕೆಟ್ ಆಯೋಜನೆ

-

- Advertisment -spot_img

ದುಬೈ ದಸರಾ ಕಪ್ ಕ್ರಿಕೆಟ್ ಡಿಸೆಂಬರ್ 7ಕ್ಕೆ- ಹೆಮ್ಮೆಯ ದುಬೈ ಕನ್ನಡ ಸಂಘದಿಂದ 7ನೇ ವರ್ಷದ ದಸರಾ ಕಪ್ ಕ್ರಿಕೆಟ್ ಆಯೋಜನೆ

ಅಬುಧಾಬಿ : 06.12.2025

ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ನಡೆಯಲಿರುವ ಏಳನೇ ವರ್ಷದ ಯುಎಇ ಕನ್ನಡಿಗರ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವದ ಭಾಗವಾದ ದುಬೈ ದಸರಾ ಕಪ್ ಕ್ರಿಕೆಟ್ ಪಂದ್ಯಾವಳಿಗಳು ನವೆಂಬರ್ 7ಕ್ಕೆ ಅಲ್ ಕ್ವಾಸಿಸ್ ಮೈದಾನದಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರ ತನಕ ಮೂರು ಐದು ಮೈದಾನಗಳಲ್ಲಿ ಒಂದೇ ಸಮಯದಲ್ಲಿ ನಡೆಯಲಿದೆ, ಈ ಕ್ರಿಕೆಟ್ ಪಂದ್ಯಾವಳಿಗಳು ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಸಮಸ್ತ ಅನಿವಾಸಿ ಪುರುಷ ಮತ್ತು ಮಹಿಳಾ ಕನ್ನಡಿಗರಿಗೆ ಆಯೋಜಿಸಿದ್ದಾರೆ, 

ಈ ದಸರಾ ಕಪ್ ಪಂದ್ಯಾವಳಿಯಲ್ಲಿ ಒಟ್ಟು 32 ಪುರುಷರ ತಂಡ ಮತ್ತು 8 ಮಹಿಳಾ ತಂಡಗಳು ಸೇರಿ ಒಟ್ಟು 40 ತಂಡಗಳು ಪ್ರತಿಷ್ಠಿತ ದುಬೈ ದಸರಾ ಟ್ರೋಫಿಗಾಗಿ ಸೆಣಸಲಿದ್ದಾರೆ.

ಪಂದ್ಯಾವಳಿಗಳ ವೇಳಾಪಟ್ಟಿ ತಯಾರಿ ಮತ್ತು ಆಯೋಜಕರೊಂದಿಗೆ ತಂಡದ ನಾಯಕರ ಸಮಾಲೋಚನೆ ಸಭೆ ಹಾಗೂ ತಂಡದ ಜೆರ್ಸಿ ಅನಾವರಣ ನವೆಂಬರ್ 30ರಂದು ಕರಾಮದಲ್ಲಿರುವ ಯುನಿಕ್ ವರ್ಲ್ಡ್ ಸೆಂಟರ್ ಬೋರ್ಡ್ ರೂಮಿನಲ್ಲಿ ನಡೆಯಿತು, ಎಲ್ಲಾ ನಲವತ್ತು ತಂಡಗಳ ಒಬ್ಬ ಪ್ರತಿನಿಧಿ ಆಗಮಿಸಿ ಪಂದ್ಯದಲ್ಲಿ ಪಾಲಿಸಬೇಕಾದ ನೀತಿ ನಿಯಮಗಳನ್ನು ಕ್ರಿಕೆಟ್ ಆಯೋಜಕ ಸಮಿತಿಯ ಕ್ಲಿವನ್ ಅವರಿಂದ ಮಾಹಿತಿ ಪಡೆದರು, ಸಭೆಯಲ್ಲಿ ದಸರಾ ಕಪ್ ಕ್ರಿಕೆಟ್ ಆಯೋಜಕರಾದ ಹೆಮ್ಮೆಯ ದುಬೈ ಕನ್ನಡ ಸಂಘದ ರಫೀಕಲಿ ಕೊಡಗು, ಶಂಕರ್ ಬೆಳಗಾವಿ, ಪ್ರತಾಪ್ ಮಡಿಕೇರಿ, ಅಯೂಬ್ ಶಿವಮೊಗ್ಗ, ನಜೀರ ಮಂಡ್ಯ, ರಂಗ ಬೆಂಗಳೂರು, ಬಾಸಿತ್ ಉಡುಪಿ ಮುಂತಾದವರು ಉಪಸ್ಥಿತರಿದ್ದರು.

ದುಬೈ ದಸರಾದ ಮುಖ್ಯ ಕಾರ್ಯಕ್ರಮವಾದ ಕ್ರೀಡೋತ್ಸವ ಮತ್ತು ಇದೆ ಡಿಸೆಂಬರ್ ತಿಂಗಳ 21ರಂದು ಬೆಳಿಗ್ಗೆ 8ರಿಂದ ರಾತ್ರಿ 11ರವರೆಗೆ ಬಹಳ ಅದ್ದೂರಿಯಾಗಿ ಎಥಿಸಲಾತ್ ಸ್ಪೋರ್ಟ್ಸ್ ಅಕಾಡೆಮಿ ಲೀಸರ್ ಕ್ಲಬ್ಬಿನಲ್ಲಿ ನಡೆಯಲಿದ್ದು ಅಂದು ಮಕ್ಕಳು ಮಹಿಳೆಯರು ಮತ್ತು ಪುರುಷರಿಗೆ ವಿವಿಧ ರೀತಿಯ ಕ್ರೀಡೆ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳು ಇರಲಿದ್ದು ಹಾಗೂ ತಾಯಿನಾಡಿನಿಂದ ಖ್ಯಾತ ಕಲಾವಿದರನ್ನು ಕರೆಸಿ ಆಗಮಿಸಿದ ಅನಿವಾಸಿ ದುಬೈ ಕನ್ನಡಿಗರಿಗೆ ಸಂಗೀತ ಸಂಜೆಯ ರಸದೌತಣ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

1 × 2 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you