
ಮಹಾರಾಜಾ ಟ್ರೋಫಿ T20: ಮಳೆಯ ನಡುವೆ ಮಂಗಳೂರು ಡ್ರ್ಯಾಗನ್ಸ್ ಚಾಂಪಿಯನ್
ಮೈಸೂರು: 2025ರ ಮಹಾರಾಜಾ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡವು ಮಳೆಯ ಅಡಚಣೆಯ ನಡುವೆಯೂ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಜಯ ಸಾಧಿಸಿ, ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಮೈಸೂರು ನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯವು ಮಳೆ ಕಾರಣದಿಂದ ಅರ್ಧಕ್ಕೆ ನಿಂತಿದ್ದು, ವಿ ಜಯದೇವನ್ (VJD) ವಿಧಾನದಿಂದ ಫಲಿತಾಂಶ ನಿರ್ಧರಿಸಲಾಯಿತು.
![]()
ಹುಬ್ಬಳ್ಳಿ ಟೈಗರ್ಸ್ ನಾಯಕರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಇನಿಂಗ್ಸ್ನಲ್ಲಿ ಅವರು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 154 ರನ್ಗಳನ್ನು ಕಲೆ ಹಾಕಿದರು. ಮಂಗಳೂರು ಡ್ರ್ಯಾಗನ್ಸ್ ತಂಡ ಚೇಸ್ ಆರಂಭಿಸಿ 10.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿದ್ದಾಗ ಮಳೆ ಆರ್ಭಟಿಸಿತು. ಮುಂದೆ ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗದ ಕಾರಣ, ನಿಯಮಾನುಸಾರ ಮಂಗಳೂರು ತಂಡವು 14 ರನ್ ಗಳಿಂದ ವಿಜೇತಎಂದು ಘೋಷಿಸಲಾಯಿತು.


ಈ ವಿಜಯದೊಂದಿಗೆ ಮಂಗಳೂರು ಡ್ರ್ಯಾಗನ್ಸ್ ಮಹಾರಾಜಾ ಟ್ರೋಫಿ ಜಯಿಸಿದ ನಾಲ್ಕನೇ ತಂಡವಾಗಿದೆ. ಅವರಿಗೆ ಪ್ರಶಸ್ತಿ ಜೊತೆ ₹15 ಲಕ್ಷ ನಗದು ಬಹುಮಾನ ನೀಡಲಾಯಿತು. ರನ್ನರ್ ಅಪ್ ಆಗಿ ಮುಕ್ತಾಯಗೊಳ್ಳಿದ ಹುಬ್ಬಳ್ಳಿ ಟೈಗರ್ಸ್ಗೆ ₹10 ಲಕ್ಷ ಬಹುಮಾನ ಲಭಿಸಿತು.
ಮಹಾರಾಜಾ ಟ್ರೋಫಿ ಟಿ20 ಟೂರ್ನಿಯ ಚಾಂಪಿಯನ್ ಪಟ್ಟ:
2022 – ಗುಲ್ಬರ್ಗ ಮಿಸ್ಟಿಕ್ಸ್
2023 – ಹುಬ್ಬಳ್ಳಿ ಟೈಗರ್ಸ್
2024 – ಮೈಸೂರು ವಾರಿಯರ್ಸ್
2025 – ಮಂಗಳೂರು ಡ್ರ್ಯಾಗನ್ಸ್
ಮಂಗಳೂರಿನ ಈ ಗೆಲುವು ತಂಡದ ಸುತ್ತಲೂ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದೆ. ಆಟಗಾರರ ಶಿಸ್ತು, ಉತ್ತಮ ತಂಡ ಒಗ್ಗಟ್ಟು ಮತ್ತು ಕ್ರಿಕೆಟ್ ಅಭಿಮಾನಿಗಳ ಬೆಂಬಲವೇ ಈ ಯಶಸ್ಸಿಗೆ ಮೂಲ ಕಾರಣ ಎಂದು ತಂಡದ ನಿರ್ವಾಹಕರು ತಿಳಿಸಿದ್ದಾರೆ.




