ಕ್ರಿಕೆಟ್ಟೀಮ್ ಇಂಡಿಯಾದ ಬೇಜವಾಬ್ದಾರಿ ಬ್ಯಾಟಿಂಗ್.. ಮೊದಲ ದಿನವೇ ಕಂಗಾಲಾದ ಭಾರತ!

ಟೀಮ್ ಇಂಡಿಯಾದ ಬೇಜವಾಬ್ದಾರಿ ಬ್ಯಾಟಿಂಗ್.. ಮೊದಲ ದಿನವೇ ಕಂಗಾಲಾದ ಭಾರತ!

-

- Advertisment -spot_img

ಟೀಮ್ ಇಂಡಿಯಾದ ಬೇಜವಾಬ್ದಾರಿ ಬ್ಯಾಟಿಂಗ್… ಮೊದಲ ದಿನವೇ ಕಂಗಾಲಾದ ಭಾರತ!

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿ ತತ್ತರಿಸಿದೆ. ಭಾರತ ತಂಡ ಕೊನೆಯ 12 ಎಸೆತಗಳಲ್ಲಿ 8 ರನ್ ಗಳಿಸಿ ಸತತ 3 ವಿಕೆಟ್ ಕಳೆದುಕೊಂಡು ಅಭಿಮಾನಿಗಳಲ್ಲಿ ಆಘಾತ ಉಂಟು ಮಾಡಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 235 ರನ್‌ಗಳಿಗೆ ಆಲೌಟ್ ಆಯಿತು. ಭಾರತ ತಂಡದ ಪರ ಜಡೇಜಾ 5 ಹಾಗೂ ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದರು.

ಇದಾದ ಬಳಿಕ ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಭಾರತ ತಂಡದ ಆರಂಭಿಕರಾಗಿ ಮೈದಾನಕ್ಕಿಳಿದರು. ಇಬ್ಬರಿಗೂ ವಾಂಖೆಡೆ ಕ್ರೀಡಾಂಗಣ ತವರು ನೆಲವಾದ್ದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿತ್ತು. ಆದರೆ ರೋಹಿತ್ ಶರ್ಮಾ 18 ರನ್ ಗಳಿಸಿ ಔಟಾದರು.

ನಿರಾಸೆ ಮೂಡಿಸಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

ನಂತರ ಬಂದ ವಿರಾಟ್ ಕೊಹ್ಲಿ ಮೊದಲ ದಿನವನ್ನು ಚೆನ್ನಾಗಿಯೇ ಮುಗಿಸಿದಂತೆ ಕಂಡು ಬಂದರೂ ಇದ್ದಕ್ಕಿದ್ದಂತೆ  4 ರನ್ ಗಳಿಸಿ ರನೌಟ್ ಆದರು.ಭಾರತ ತಂಡ ಕೇವಲ 6 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಕೊನೆಯ ನಿಮಿಷಗಳಲ್ಲಿ ಮುಗ್ಗರಿಸಿತು.

ದಿನದಾಟದ ಅಂತ್ಯಕ್ಕೆ ಭಾರತ ತಂಡ 4 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ. ಕೊನೆಯ ಕ್ಷಣದಲ್ಲಿ ಕಳಪೆ ಫಲಿತಾಂಶ ಬಂದಿರುವುದು ಭಾರತ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಇದರಿಂದ ಆತುರ ತೋರಿದ ವಿರಾಟ್ ಕೊಹ್ಲಿ ಹಾಗೂ ಕೋಚ್ ಗಂಭೀರ್ ಇಬ್ಬರನ್ನೂ ಅಭಿಮಾನಿಗಳು ತೀವ್ರವಾಗಿ ಟೀಕಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

seventeen + eleven =

Latest news

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ; ಅದು ಜನರ ಭಾವನೆ ಮತ್ತು ಗುರುತಿನ ಭಾಗವಾಗಿದೆ. ಆದರೆ ದೀರ್ಘಕಾಲದವರೆಗೆ ಬಿಹಾರ...

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...
- Advertisement -spot_imgspot_img

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

Must read

- Advertisement -spot_imgspot_img

You might also likeRELATED
Recommended to you