ಕ್ರಿಕೆಟ್ಜೆ.ಅರುಣ್ ಕುಮಾರ್, ಅಮೋಲ್ ಮಜುಮ್ದಾರ್ ಸಾಲಿಗೆ ಮತ್ತೊಬ್ಬ ನತದೃಷ್ಟ..!

ಜೆ.ಅರುಣ್ ಕುಮಾರ್, ಅಮೋಲ್ ಮಜುಮ್ದಾರ್ ಸಾಲಿಗೆ ಮತ್ತೊಬ್ಬ ನತದೃಷ್ಟ..!

-

- Advertisment -spot_img

ಜೆ.ಅರುಣ್ ಕುಮಾರ್, ಅಮೋಲ್ ಮಜುಮ್ದಾರ್ ಸಾಲಿಗೆ ಮತ್ತೊಬ್ಬ ನತದೃಷ್ಟ..!

ಭಾರತ ಪರ ಆಡುವ ಒಂದೇ ಒಂದು ಗುರಿಯೊಂದಿಗೆ ಆಟ ಆರಂಭಿಸಿದವನಿಗೆ ಕ್ರಿಕೆಟ್ ಪಾಠಗಳನ್ನು ಕಲಿಸಿಕೊಟ್ಟ ಮೊದಲ ಗುರು ತಂದೆ.. ‘ದೇಶವನ್ನು ಪ್ರತಿನಿಧಿಸುವುದೇ ನಿನ್ನ ಪರಮಗುರಿ’ ಎಂದು ಮಗನಲ್ಲಿ ಆ ಕನಸು ತುಂಬಿದ್ದ ತಂದೆ ಇಲ್ಲವಾದಾಗ ಮಗ
15ರ ಹುಡುಗ.

ಭಾರತ ಪರ ಆಡಿ ತಂದೆಯ ಕನಸನ್ನು ಈಡೇರಿಸಲೇಬೇಕೆಂಬ ಛಲದೊಂದಿಗೆ ಆಡಿದವನು ಅದಕ್ಕಾಗಿ ಎಲ್ಲವನ್ನೂ ಮಾಡಿದ.. ಕನಸನ್ನು ಬೆನ್ನತ್ತಿ ಕೊನೆಯವರೆಗೂ ಹೋರಾಡುತ್ತಲೇ ಇದ್ದ. ಆಡಿದ ಕೊನೆಯ ರಣಜಿ ಪಂದ್ಯದಲ್ಲಿ ಶತಕವನ್ನೂ ಬಾರಿಸಿದ.. ಆದರೆ ಅವನ ಕನಸು, ಅವನ ತಂದೆ ಕಂಡಿದ್ದ ಕನಸು ಕೊನೆಗೂ ನನಸಾಗಲೇ ಇಲ್ಲ.. ಅವನು ದೇಶೀಯ ಕ್ರಿಕೆಟ್’ನಲ್ಲಿ ಟನ್’ಗಟ್ಟಲೆ ರನ್ ಹೊಡೆದರೂ ಭಾರತ ಪರ ಆಡಲಾಗದ ನತದೃಷ್ಟರ ಸಾಲಿಗೆ ಸೇರಿದ ಮತ್ತೊಬ್ಬ ನತದೃಷ್ಟ.

‘’ಭಾರತ ತಂಡಕ್ಕೆ ನನ್ನನ್ನು ಇನ್ನು ಆಯ್ಕೆ ಮಾಡುವುದಿಲ್ಲ’’ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡು ನಿವೃತ್ತಿ ಘೋಷಿಸಿದವನು ಗುಜರಾತ್’ಗೆ ಮೊದಲ ರಣಜಿ ಟ್ರೋಫಿ ಗೆದ್ದು ಕೊಟ್ಟ ದೇಶೀಯ ಕ್ರಿಕೆಟ್’ನ ಮತ್ತೊಬ್ಬ stalwart ಪ್ರಿಯಾಂಕ್ ಪಾಂಚಾಲ್.

ಗುಜರಾತ್’ನ ಈ ಕ್ರಿಕೆಟಿಗನ ನಿವೃತ್ತಿಯನ್ನು ಕಂಡು ಥಟ್ಟನೆ ನೆನಪಾದವರು ಕರ್ನಾಟಕ ಕ್ರಿಕೆಟ್ ಕಂಡ legendary ಓಪನಿಂಗ್ ಬ್ಯಾಟ್ಸ್’ಮನ್ ಜೆ.ಅರುಣ್ ಕುಮಾರ್.

ಜ್ಯಾಕ್ ಎಂದೇ ಲೋಕಪ್ರಸಿದ್ಧರಾಗಿದ್ದ ಜೆ.ಅರುಣ್ ಕುಮಾರ್ ನಿಸ್ಸಂದೇಹವಾಗಿ ಭಾರತ ಪರ ಆಡಬೇಕಿದ್ದ ಕ್ರಿಕೆಟಿಗ. ಪ್ರಥಮದರ್ಜೆ ಹಾಗೂ ಲಿಸ್ಟ್ ಎ ಕ್ರಿಕೆಟ್ ಸೇರಿ 209 ಪಂದ್ಯಗಳು.. 10, 435 ರನ್, 27 ಶತಕಗಳು..

2000ನೇ ಇಸವಿಯ ಆರಂಭದ ವರ್ಷಗಳಲ್ಲಿ ವೀರೇಂದ್ರ ಸೆಹ್ವಾಗ್ ಆಡಿದ್ದ ಹೊಡಿಬಡಿಯ ಆಟವನ್ನು 90ರ ದಶಕದಲ್ಲೇ ಕರ್ನಾಟಕ ಪರ ಆಡಿದವರು ಜ್ಯಾಕ್. ರಣಜಿ ಟ್ರೋಫಿಯಲ್ಲಿ ಲಂಚ್ ಬ್ರೇಕ್ ಒಳಗೆ ಶತಕ ಚಚ್ಚಿ ಔಟಾಗಿ ಪೆವಿಲಿಯನ್’ನಲ್ಲಿ ಕುಳಿತು ಬಿಡುತ್ತಿದ್ದರೆಂದರೆ ಲೆಕ್ಕ ಹಾಕಿ, ಆ ಆರ್ಭಟ ಹೇಗಿದ್ದಿರಬಹುದೆಂದು.

ಜೆ.ಅರುಣ್ ಕುಮಾರ್ ಅವರ ಆಟವನ್ನು ನಾನು ಕಣ್ಣಾರೆ ಕಂಡವನಲ್ಲ. ಆದರೆ ಅವರ ಜೊತೆಗೆ ಆಡಿದವರಿಂದಲೇ ಆ ಗತವೈಭವವನ್ನು ಕೇಳಿದ್ದೇನೆ. ರಣಜಿ ಟ್ರೋಫಿ ಪಂದ್ಯಗಳಲ್ಲಿ ಜ್ಯಾಕ್ ಅಬ್ಬರಿಸುತ್ತಿದ್ದ ಪರಿಯನ್ನು ಒಬ್ಬರಂತೂ ರೋಮಾಂಚಿತರಾಗಿ ವಿವರಿಸಿದ್ದರು. ಅದಾದ ನಂತರ 1998-99ರ ರಣಜಿ ಫೈನಲ್ ಪಂದ್ಯದ ವೀಡಿಯೊವನ್ನು ಹುಡುಕಿ ತೆಗೆದು ನೋಡಿದಾಗ ಅನ್ನಿಸಿದ್ದು.. ಛೇ.. ಇಂಥಾ ಆಟಗಾರನಿಗೆ ಭಾರತ ತಂಡದ ಪರ ಒಂದೇ ಒಂದು ಪಂದ್ಯವಾಡುವ ಅವಕಾಶವೂ ಸಿಗಲಿಲ್ಲವಲ್ಲಾ ಎಂದು.

1997-98ರ ರಣಜಿ ಫೈನಲ್’ನಲ್ಲಿ ಉತ್ತರ ಪ್ರದೇಶ ವಿರುದ್ಧ ಶತಕ, 1998-99ರ ರೋಚಕ ರಣಜಿ ಫೈನಲ್’ನಲ್ಲಿ ಮಧ್ಯಪ್ರದೇಶ ವಿರುದ್ಧ 2ನೇ ಇನ್ನಿಂಗ್ಸ್’ನಲ್ಲಿ ಶತಕ ಬಾರಿಸಿ ಕರ್ನಾಟಕಕ್ಕೆ ಸತತ ರಣಜಿ ಟ್ರೋಫಿಗಳನ್ನು ಗೆದ್ದುಕೊಟ್ಟವರು ಜ್ಯಾಕ್.

ಹೊಡೆದ ರನ್ನು, ಬಾರಿಸಿದ ಶತಕಗಳ ಲೆಕ್ಕದಲ್ಲಿ ಅರುಣ್ ಕುಮಾರ್ ಅವರಿಗಿಂತ ಒಂದು ಮೆಟ್ಟಿಲು ಮೇಲೆಯೇ ನಿಲ್ಲುವವನು ಪ್ರಿಯಾಂಕ್ ಪಾಂಚಾಲ್.
224 ಪಂದ್ಯಗಳಿಂದ (ಪ್ರಥಮದರ್ಜೆ+ಲಿಸ್ಟ್ ಎ) 12,528 ರನ್.. 37 ಶತಕಗಳು.. ಒಂದು ತ್ರಿಶತಕ..

2021ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ ಟೆಸ್ಟ್ ಪದಾರ್ಪಣೆಯ ಅವಕಾಶ ಸಿಗದ ನತದೃಷ್ಟ.

ಇದೇ ರೀತಿ ದೇಶೀಯ ಕ್ರಿಕೆಟ್’ನಲ್ಲಿ ಸಾವಿರ ಸಾವಿರ ರನ್ ಗಳಿಸಿಯೂ ಭಾರತ ಪರ ಆಡುವ ಅವಕಾಶ ಸಿಗದೆ ನಿವೃತ್ತಿ ಘೋಷಿಸಿದ ಮತ್ತೊಬ್ಬ ಕ್ರಿಕೆಟಿಗನೆಂದರೆ ಮುಂಬೈ ದಿಗ್ಗಜ ಅಮೋಲ್ ಮಜುಮ್ದಾರ್. ಇವರಂತೂ ದೇಶೀಯ ಕ್ರಿಕೆಟ್’ನ ತಪಸ್ವಿ. 284 ಪಂದ್ಯಗಳನ್ನಾಡಿ 33 ಶತಕಗಳನ್ನು ಬಾರಿಸಿ 14,453 ರನ್ ಗಳಿಸಿದರೂ ತಪಸ್ಸಿ ವರ ಸಿಗಲೇ ಇಲ್ಲ.

ಐಪಿಎಲ್’ನಲ್ಲಿ ಮಿಂಚಿದವರಿಗೆಲ್ಲಾ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಸಿಗುತ್ತಿರುವ ಈ ಕಾಲಘಟ್ಟದಲ್ಲಿ.. ದೇಶೀಯ ಕ್ರಿಕೆಟ್’ನಲ್ಲಿ ಹತ್ತಾರು ವರ್ಷ ಆಡಿ ಹತ್ತಾರು ಸಾವಿರ ರನ್ ಗಳಿಸಿದರೂ ಭಾರತ ಪರ ಆಡುವ ಅವಕಾಶ ಸಿಗದೆ ನಿವೃತ್ತಿಯಾದವರು ನತದೃಷ್ಟರಲ್ಲದೆ ಇನ್ನೇನು..?

-ಸುದರ್ಶನ್

LEAVE A REPLY

Please enter your comment!
Please enter your name here

one + 8 =

Latest news

AllySpin Casino: Quick‑Fire Slots for Short, High‑Intensity Play

1. The Pulse of Quick Wins at AllySpinΤο AllySpin καλεί παίκτες που λαχταρούν την αδρεναλίνη του γρήγορου παιχνιδιού. Με...

Mr Punter – Quick‑Hit Slots & Live Games for Rapid Wins

Witamy w świecie Quick‑Hit od Mr PunterMr Punter zaprasza Cię do krainy, gdzie każda obrotka przypomina pulsujący adrenaliny zastrzyk.Jeśli...

Simsinos Casino: Quick Wins and High‑Intensity Slots Play

1. The Pulse of Fast‑Paced GamingWhen you log in to Simsinos, the first thing that grabs your attention is...

Sevenplay Casino – Quick‑Hit Slots and Live Games for Short‑Burst Thrills

Introduction: The Pulse of Quick Wins at SevenplaySevenplay Casino has carved a niche for players who crave instant gratification....
- Advertisement -spot_imgspot_img

Vodka онлайн казино – обзор

Vodka онлайн казино - обзор ...

Пин Ап казино – Официальный сайт Pin Up Casino вход на зеркало

Пин Ап казино - Официальный сайт Pin Up Casino вход на зеркало ...

Must read

- Advertisement -spot_imgspot_img

You might also likeRELATED
Recommended to you