ಶಿವಮೊಗ್ಗ ಸಿಟಿ ಕಾರ್ಪೋರೇಶನ್ ಪೌರಕಾರ್ಮಿಕರ ಕಪ್ – ಜೆರ್ಸಿ ಅನಾವರಣ

ಶಿವಮೊಗ್ಗ ಸಿಟಿ ಕಾರ್ಪೋರೇಶನ್ ಪೌರಕಾರ್ಮಿಕರ ಕಪ್ – ಜೆರ್ಸಿ ಅನಾವರಣ

ಶಿವಮೊಗ್ಗ ಸಿಟಿ ಕಾರ್ಪೋರೇಶನ್ ಪೌರಕಾರ್ಮಿಕರ ಕಪ್ – ಜೆರ್ಸಿ ಅನಾವರಣ

ಶಿವಮೊಗ್ಗ ನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ ಪೌರಕಾರ್ಮಿಕರ ಕಪ್ ಕ್ರಿಕೆಟ್ ಟೂರ್ನಮೆಂಟ್ ಜೆರ್ಸಿ ಅನಾವರಣ ಕಾರ್ಯಕ್ರಮವು  ಭವ್ಯವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಅತಿಥಿ ಮಾಯಣ್ಣ ಗೌಡ, ನೌಕರರ ಸಂಘದ ಅಧ್ಯಕ್ಷ ಗೋವಿಂದಣ್ಣ, ಅಡ್ಮಿನ್ ತುಷಾರ್ ಬಿ. ಉಸೂಲ್, ಹಾಗೂ 8 ತಂಡಗಳ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಯಣ್ಣ ಗೌಡ ಅವರು, “ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ, ಅವರಿಗಾಗಿ ಇಂತಹ ಕ್ರೀಡಾ ಕಾರ್ಯಕ್ರಮಗಳು ಆಯೋಜನೆಯಾಗುವುದು ಸಂತಸದ ವಿಷಯ. ಇದು ಒಗ್ಗಟ್ಟನ್ನು ಹೆಚ್ಚಿಸಿ, ಕ್ರೀಡಾ ಮನೋಭಾವವನ್ನು ಬೆಳೆಸುತ್ತದೆ” ಎಂದು ಹೇಳಿದರು. ಅಧ್ಯಕ್ಷ ಗೋವಿಂದಣ್ಣ ಅವರು ಟೂರ್ನಮೆಂಟ್ ಯಶಸ್ವಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜೆರ್ಸಿ ಬಿಡುಗಡೆ ಮಾಡಿ, ತಂಡಗಳಿಗೆ ಹಸ್ತಾಂತರಿಸಲಾಯಿತು. ಟೂರ್ನಮೆಂಟ್ ನಾಳೆ ನಗರದಲ್ಲಿ ಪ್ರಾರಂಭವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *