ಕ್ರಿಕೆಟ್ಮಾನವೀಯತೆ ಮೆರೆದ ಕ್ರಿಕೆಟಿಗ ಕೃಷ್ಣ ಉಡುಪಿ.

ಮಾನವೀಯತೆ ಮೆರೆದ ಕ್ರಿಕೆಟಿಗ ಕೃಷ್ಣ ಉಡುಪಿ.

-

- Advertisment -spot_img

ಸರಣಿ ಶ್ರೇಷ್ಟ ಪ್ರಶಸ್ತಿ 10 ಲಕ್ಷ ವಿಮಾ ಪಾಲಿಸಿಯನ್ನು ಸಹ ಆಟಗಾರನಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಕೃಷ್ಣ ಉಡುಪಿ.

 

 ನವೆಂಬರ್ 17 ಭಾನುವಾರದಂದು ಉಡುಪಿಯ ದೊಡ್ಡನಗುಡ್ಡೆ ಮೈದಾನದಲ್ಲಿ ನಡೆದ ಜಿ.ಎಫ್.ಸಿ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟ ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಯಿತು‌.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿಶೇಷ ಚೇತನರಿಗೆ ವೀಲ್ ಚೇರ್,ಆಶ್ರಮಗಳಿಗೆ ಸಹಾಯ‌ ನಿಧಿ,ಜೊತೆಗೆ ಹಿರಿಯ ಕ್ರೀಡಾಪಟುಗಳಿಗೆ,ಸೇವಾ ನಿರತ ಸಂಸ್ಥೆಗಳಿಗೆ ಗೌರವ ಸಲ್ಲಿಸಲಾಯಿತು.

ಇದಲ್ಲದೇ ಟೆನಿಸ್ಬಾಲ್ ಕ್ರಿಕೆಟ್ ಆಟಗಾರರಿಗೆ ಯಾವುದೇ ಅವಘಡದ ಸಂದರ್ಭದಲ್ಲಿ ಯಾವುದೇ ಜೀವ ವಿಮೆ ಇಲ್ಲದ ಕಾರಣ ಇದನ್ನು ಮನಗಂಡ ಗುಂಡಿಬೈಲ್ ಫ್ರೆಂಡ್ಸ್ ಕ್ರಿಕೆಟರ್ಸ್ ಸರಣಿಶ್ರೇಷ್ಟ ಆಟಗಾರನಿಗೆ 10 ಲಕ್ಷ ಜೀವರಕ್ಷಕ ವಿಮೆ ಬಹುಮಾನ ರೂಪದಲ್ಲಿ ಘೋಷಿಸಿತ್ತು.

 

ತನ್ನ‌ ಅತ್ಯಮೂಲ್ಯ ಆಲ್ರೌಂಡರ್ ಪ್ರದರ್ಶನ ನೀಡಿದ ನೀಲಾ ಚಾಲೆಂಜರ್ಸ್ ತಂಡದ ಕೃಷ್ಣ ಉಡುಪಿ ಅರ್ಹವಾಗಿ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾಗಿದ್ದು,ತನಗೆ ನೀಡಿದ 10 ಲಕ್ಷ ವಿಮಾ ಪಾಲಿಸಿಯನ್ನು ತನ್ನ ತಂಡದ ಸಹ ಆಟಗಾರನಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

ಪ್ರತಿಭಾನ್ವಿತ ಆಟಗಾರ ಉಡುಪಿಯ ಕೃಷ್ಣ, ವಿಷ್ಣುಮೂರ್ತಿ ದೊಡ್ಡನಗುಡ್ಡೆ,ಸೈಮಂಡ್ಸ್ ಕಡಿಯಾಳಿ,ಗುರುಬ್ರಹ್ಮ ಉದ್ಯಾವರ,ಸ್ಯಾಟರ್ಡೇ ಪ್ಯಾಂಥರ್ಸ್ ಹಾಗೂ ರಾಜ್ಯಮಟ್ಟದಲ್ಲಿ ಜಾನ್ಸನ್ ಕುಂದಾಪುರ ತಂಡವನ್ನು ಪ್ರತಿನಿಧಿಸುತ್ತಿದ್ದು,ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಲ್ಪೆ ಶಾಖೆಯ ಉದ್ಯೋಗಿಯಾಗಿದ್ದಾರೆ.

ಕೃಷ್ಣ ಉಡುಪಿ ಇವರ ಈ ಕ್ರೀಡಾಸ್ಪೂರ್ತಿ ಇತರ ಆಟಗಾರರಿಗೂ ಮಾದರಿಯಾಗಲಿ ಎಂಬುದೇ ಸ್ಪೋರ್ಟ್ಸ್ ಕನ್ನಡ ಹಾರೈಕೆ.

LEAVE A REPLY

Please enter your comment!
Please enter your name here

ten − 7 =

Latest news

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...
- Advertisement -spot_imgspot_img

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

  ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ Maharaja Trophy: ಜೂನ್‌ 20 ರಿಂದ ಟೂರ್ನಿ ಆರಂಭ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜನೆ ಐದನೇ ಆವೃತ್ತಿಯ...

Must read

- Advertisement -spot_imgspot_img

You might also likeRELATED
Recommended to you