Categories
ಕ್ರಿಕೆಟ್

ಡಿಸೆಂಬರ್ 25, 26 ರಂದು ಡೈಮಂಡ್ ಜುಬಿಲಿ ಕಪ್-ಕಮ್ಯೂನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ  ಅಂತರ್ ಶಾಲಾ-ಕಾಲೇಜು ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ ಶಿಪ್-2019

6 ದಶಕಗಳ ಹಿಂದೆ ಬೆಂಗಳೂರಿನ ಜಯನಗರದಲ್ಲಿ ಸಮಾಜದ ಎಲ್ಲಾ ವರ್ಗಗಳಿಗೆ ಶೈಕ್ಷಣಿಕ ಸೇವೆಯನ್ನು ನೀಡುವ ಉದ್ದೇಶದಿಂದ 1956 ರಲ್ಲಿ ಸ್ಥಾಪನೆಯಾದ ಕಮ್ಯೂನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆ ಇದೆ ಡಿಸೆಂಬರ್ 27,28 ರಂದು ವಜ್ರ ಮಹೋತ್ಸವವನ್ನು ಆಚರಿಸಲಿದೆ. ಪ್ರಾರಂಭದಿಂದಲೂ ಶಿಕ್ಷಣದ ಜೊತೆಯಾಗಿ ಕ್ರೀಡೆಗೂ ವಿಶೇಷ ಮಹತ್ವವನ್ನು ನೀಡುತ್ತಾ ಬಂದಿರುವ ಸಂಸ್ಥೆ ವಜ್ರಮಹೋತ್ಸವದ ಸವಿನೆನಪಿಗಾಗಿ 14 ವರ್ಷ ವಯೋಮಿತಿಯ ಅಂತರ್ ಶಾಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಡಿಸೆಂಬರ್ 17 ರಂದು ಹಾಗೂ ಡಿಸೆಂಬರ್ 25, 26 ರಂದು ಅಂತರ್ ಕಾಲೇಜು ಮಟ್ಟದ  ಜಯನಗರ 1 ನೇ ಬ್ಲಾಕ್ ನ ಕಿತ್ತೂರು ರಾಣಿ ಚೆನ್ನಮ್ಮ ಅಂಗಣದಲ್ಲಿ ಆಯೋಜಿಸಿದ್ದಾರೆ.

ಬೆಂಗಳೂರಿನ ವಿವಿಧ ಭಾಗಗಳಿಂದ 12 ಶಾಲಾ ತಂಡಗಳು ಭಾಗವಹಿಸಲಿದ್ದು, ಪ್ರಥಮ ಪ್ರಶಸ್ತಿ ವಿಜೇತ ತಂಡ 5,000 ನಗದು ಹಾಗೂ ದ್ವಿತೀಯ ಪ್ರಶಸ್ತಿ 2,500 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳು,

ಡಿಸೆಂಬರ್ 25,26 ರಂದು ನಡೆಯುವ ಅಂತರ್ ಕಾಲೇಜು ಮಟ್ಟದ ಪಂದ್ಯಾವಳಿಯಲ್ಲಿ ವಿವಿಧೆಡೆಯಿಂದ 24 ಕಾಲೇಜು ತಂಡಗಳು ಭಾಗವಹಿಸಲಿದ್ದು, ಪ್ರಥಮ ಪ್ರಶಸ್ತಿಯಾಗಿ 10,000 ನಗದು, ದ್ವಿತೀಯ ಪ್ರಶಸ್ತಿಯಾಗಿ 5,000 ನಗದು ಸಹಿತ ಆಕರ್ಷಕ ಟ್ರೋಫಿಗಳು ಹಾಗೂ ಫೈನಲ್ ನ ಪಂದ್ಯಶ್ರೇಷ್ಟ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ. ಪ್ರವೇಶ ದರ ಉಚಿತವಾಗಿರುತ್ತದೆ.

ಈ ಪಂದ್ಯಾವಳಿಯ ನೇರ ಪ್ರಸಾರ ಕ್ರಿಕ್ ಸೇ ಬಿತ್ತರಿಸಲಿದ್ದು,ಸಂಸ್ಥೆಯ ಕ್ರೀಡಾ ಸಮಿತಿಯ ಅಧ್ಯಕ್ಷರು ಹಾಗೂ ಬೆಂಗಳೂರಿನ ಪ್ರತಿಷ್ಟಿತ ತಂಡ M.B.C.C ತಂಡದ ಮಾಲೀಕ ಹರೀಶ್ ಎಂ.ನಾಗರಾಜ್ ರವರು ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ವಹಿಸಲಿದ್ದಾರೆ.

ಕಮ್ಯೂನಿಟಿ ಸೆಂಟರ್ ವಿದ್ಯಾ ಸಂಸ್ಥೆಗಳ ಸಾಧನಾ ಪಥ. ಉದ್ಯಾನ ನಗರಿ ಬೆಂಗಳೂರಿನ ಹೃದಯ ಭಾಗವಾದ ಜಯನಗರದಲ್ಲಿ,ಸ್ವಾತಂತ್ರ್ಯೋತ್ತರ ಭಾರತದ ಆಶಯಗಳಲ್ಲೊಂದಾದ ಶಿಕ್ಷಣದ ಅಗತ್ಯತೆಯನ್ನರಿತು 1956 ರಲ್ಲಿ ಕಮ್ಯೂನಿಟಿ ಸೆಂಟರ್ ಸಂಸ್ಥೆಯ ಸ್ಥಾಪನೆಯಾಯಿತು. ಕಮ್ಯೂನಿಟಿ ಸೆಂಟರ್ ನರ್ಸರಿ ಆಂಗ್ಲ ಶಾಲೆ,ಕಮ್ಯೂನಿಟಿ ಸೆಂಟರ್ ಹಿರಿಯ ಆಂಗ್ಲ ಪ್ರಾಥಮಿಕ‌ ಶಾಲೆ, ಕಮ್ಯೂನಿಟಿ ಸೆಂಟರ್ ಪ್ರೌಢಶಾಲೆಗಳು ಸರ್ಕಾರಿ‌‌ ಅನುದಾನವನ್ನು ಪಡೆದು ಜಯನಗರದ ಒಂದನೇ ಬಡಾವಣೆಯಲ್ಲಿ ಸರ್ವರಿಗೂ ಸಮಾನ ಶಿಕ್ಷಣ ಎನ್ನುವ ತತ್ವದೊಡನೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ,ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಸರ್ವತೋಮುಖ ಬೆಳವಣಿಗಾಗಿ ಶ್ರಮಿಸುತ್ತಾ ಬಂದಿದ್ದು,ಕಡಿಮೆ ಶುಲ್ಕವನ್ನು ಸ್ವೀಕರಿಸುವುದರ ಮೂಲಕ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಾ ಕಳೆದ ಆರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ನಗರದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಕೆ.ಎಂ.ನಾಗರಾಜ್, ಚೇರ್ಮನ್ ಕಮ್ಯೂನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳು, ಹಿರಿಯ ಕಾಂಗ್ರೆಸ್ ನಾಯಕರು.

ಸಮಾಜ ಸೇವೆ ಮತ್ತು ಪರಸ್ಪರ ಸಹಕಾರ ಎಂಬ ಉತ್ಸಾಹದೊಡನೆ 1956 ರಲ್ಲಿ ಮೈಸೂರು ಸ್ಟೇಟ್ ಸೊಸೈಟೀಸ್ ರಿಜಿಸ್ಟ್ರೇಶನ್ ಅ್ಯಾಕ್ಟ್ ಅಡಿಯಲ್ಲಿ ನೋಂದಣಿಯಾಗಿರುವ ಸಂಸ್ಥೆಯ ಪ್ರಥಮ‌ ಅಧ್ಯಕ್ಷರಾಗಿ ವಿಶ್ರಾಂತ ಐ.ಪಿ.ಎಸ್ ಅಧಿಕಾರಿ, ಮೈಸೂರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯ ಪ್ರಸಕ್ತ  ಬಿ.ಎಸ್‌.ರಾಘವೇಂದ್ರ ರಾವ್ ಅವರು ಮತ್ತು ಶಿಕ್ಷಣ ತಜ್ಞ  ಕೆ.ವಿ ಅಶ್ವತ್ಥ ನಾರಾಯಣ ಅವರು ಸಂಸ್ಥಾಪಕ ಕಾರ್ಯದರ್ಶಿಗಳಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಗುಡಿಬಂಡೆ ಎಸ್.ರಾಮರಾವ್,  ಹೆಚ್.ಕೆ ಕುಮಾರಸ್ವಾಮಿ ಮತ್ತು  ಕೆ.ವಿ.ವಸಂತ್ ಹಾಗೂ ಪ್ರಸಿದ್ಧ ವಕೀಲ  ಎನ್.ಟಿ.ರಾಜುರವರು ಮತ್ತು‌‌ ಅನೇಕರ ಸಹಕಾರದೊ ಎನೆ ಸಂಸ್ಥೆ ಪ್ರಾರಂಭವಾಯಿತು.

ಸಂಸ್ಥೆಯ ಪ್ರಥಮ ಅಧ್ಯಕ್ಷ ಬಿ‌.ಎಸ್.ರಾಘವೇಂದ್ರ ರಾವ್ ಅವರು ದೈವಾಧೀನರಾದ ಮೇಲೆ ಶ್ರೀ ಎನ್.ಟಿ.ರಾಜು ಅವರನ್ನು ಅಧ್ಯಕ್ಷರಾಗಿ 1958ರಲ್ಲಿ ನೇಮಿಸಲಾಯಿತು.ನಂತರ 1986 ರಲ್ಲಿ ಗುಡಿಬಂಡೆ ಶ್ರೀ ಎಸ್.ರಾಮಾರಾವ್ ರವರು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದರು. 1993 ರಿಂದ ಶ್ರೀ ಕೆ.ಎಂ.ನಾಗರಾಜ್ ರವರು ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.ಅಂತೆಯೇ ಸಂಸ್ಥಾಪಕ ಕಾರ್ಯದರ್ಶಿಗಳಾದ ಶ್ರೀ ಕೆ.ವಿ.ಅಶ್ವತ್ಥನಾರಾಯಣ ಅವರ ಅವಧಿ ಮುಗಿದ ಮೇಲೆ 1967 ರಲ್ಲಿ ಶ್ರೀ.ಕೆ.ವಿ.ವಸಂತ್ ಅವರನ್ನು ಕಾರ್ಯದರ್ಶಿಗಳಾಗಿ ನೇಮಿಸಲಾಯಿತು.ಅನಂತರ 1986 ರಿಂದ ಹೆಚ್.ಕೆ.ಕುಮಾರಸ್ವಾಮಿ ಅವರು ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸಿದರು.2001ರಿಂದ ಶ್ರೀ ಚಿಕ್ಕಯ್ಯ ಅವರು ಕಾರ್ಯದರ್ಶಿಗಳಾಗಿ ಮುನ್ನಡೆಸುತ್ತಿದ್ದಾರೆ.

ಕಮ್ಯೂನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿಶೇಷವಾದ ಸಾಧನೆಗಳನ್ನು ಮಾಡಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸುತ್ತಿರುವ ಶ್ರೀ ಕೆ.ಎಂ.ನಾಗರಾಜ್ ರವರು,ಕಾರ್ಯದರ್ಶಿಗಳಾದ ಚಿಕ್ಕಯ್ಯನವರು 2007 ರಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತೆ,ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಭವ್ಯವಾದ ಸಂಸ್ಥೆಯನ್ನು ನಿರ್ಮಿಸಿ, ಕಮ್ಯೂನಿಟಿ ಸೆಂಟರ್ ಪದವಿಪೂರ್ವ ಕಾಲೇಜು,ಕಮ್ಯೂನಿಟಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್&ಮ್ಯಾನೇಜ್ಮೆಂಟ್ ಸ್ಟಡೀಸ್ ನಲ್ಲಿ “ಬೆಂಗಳೂರು ವಿಶ್ವವಿದ್ಯಾಲಯ” ದ ಮಾನ್ಯತೆಯನ್ನು ಪಡೆದು ಬಿ.ಕಾಂ,ಬಿ.ಬಿ.ಎ ಮತ್ತು ಬಿ.ಸಿ.ಎ ಪದವಿಗಳನ್ನು ನೀಡುತ್ತಿದೆ.ಕಮ್ಯೂನಿಟಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್,ಸ್ನಾತಕೋತ್ತರ ಕೇಂದ್ರವು “ಎ.ಐ.ಸಿ.ಟಿ.ಇ” ಮಾನ್ಯತೆಯೊಡನೆ ಎಂಬಿಎ ಸ್ನಾತಕೋತ್ತರ ಪದವಿಯನ್ನು ನೀಡುವುದರ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜ್ಞಾನ ದಾಹವನ್ನು ನೀಗಿಸುತ್ತಿದೆ.

ಸ್ವಾತಂತ್ರ್ಯ ನಂತರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಜಯನಗರ ಬಡಾವಣೆಯನ್ನಹ ನಿರ್ಮಿಸಿತು.ಆಗ ಆ ಪ್ರದೇಶದ ಪ್ರಧಾನ ಹಳ್ಳಿಗನೆಸಿದ್ದ ಕನಕನಪಾಳ್ಯ,ಬೈರಸಂದ್ರ,ಯಡಿಯೂರು,ನಾಗಸಂದ್ರ,ಸಿದ್ಧಾಪುರ ಮುಂತಾದ ಪ್ರದೇಶಗಳಲ್ಲಿ ವ್ಯವಸಾಯವನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಜನರ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮವು ಉಂಟಾಯಿತು.ಬಡಾವಣೆ ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರವು ರೈತರ ವ್ಯವಸಾಯದ ಭೂಮಿಯನ್ನು ವಶಪಡಿಸಿಕೊಂಡು, ಅನಿವಾರ್ಯವಾಗಿ ರೈತರು ಪಾರಂಪರಿಕ ಕೃಷಿಯನ್ನು ಬಿಟ್ಟು ವ್ಯಾಪಾರ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದರು.ತಮಗರಿವಿಲ್ಲದೇ ಚಟುವಟಿಕೆಗಳಲ್ಲಿ ಸಫಲರಾಗದೆ ಕೈಯ್ಯಲ್ಲಿದ್ದಷ್ಟು ಹಣವನ್ನು ಖರ್ಚು ಮಾಡಿಕೊಂಡು ಬಡತನಕ್ಕೆ ಸಿಲುಕಿ ಕಂಗಾಲಾದರು.ಆರ್ಥಿಕ ಸಂಕಷ್ಟಗಳಿಂದ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗದೆ ಅನಕ್ಷರಸ್ಥರಾಗಿಯೇ ಹಿಂದುಳಿದು ಜೀವನ‌ ಸಾಗಿಸುವಂತಾಯಿತು.ಅಷ್ಟೇ ಅಲ್ಲದೆ ಈ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಅನಾಗರಿಕರು, ಅಸಂಸ್ಕೃತರು, ಕೊಳಚೆ ನಿವಾಸಿಗಳು ಎಂದು ಗುರುತಿಸಿ ಜನಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಬಿಂಬಿಸಲಾಯಿತು.

ಇಂತಹ ಅಮಾನವೀಯ ಪರಿಸ್ಥಿತಿಯಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ನೊಂದ ಜನತೆಗೆ ಆಶಾದಾಯಕವಾಗಿ ಕಮ್ಯೂನಿಟಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಕೆ.ಎಂ.ನಾಗರಾಜ್ ಮತ್ತು ಕಾರ್ಯದರ್ಶಿಗಳಾದ ಶ್ರೀ ಚಿಕ್ಕಯ್ಯನವರು ಸಂಸ್ಥೆಯ ಚುಕ್ಕಾಣಿ ಹಿಡಿದ ಮೇಲೆ ಜನಗಳ ಅಂತರಾಳವನ್ನು ಅರ್ಥೈಸಿಕೊಂಡು, ಇಂತಹ ಜನಾಂಗವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿಶೇಷವಾದ ಯೋಜನೆಗಳನ್ನು ರೂಪಿಸಿ,ಇಂತಹ ಪರಿಸರದಿಂದ ಬಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಿ,ಶಾಲಾ ಶುಲ್ಕ ರಿಯಾಯಿತಿ ಹಾಗೂ ವಿದ್ಯಾರ್ಥಿ ವೇತನಗಳ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ,ಗುರುತರವಾದ ಸೇವೆ ಸಲ್ಲಿಸಿ ನಗರದಾದ್ಯಂತ ಜನಮನ್ನಣೆಯನ್ನು ಗಳಿಸಿದೆ.

ಈ ನಿಟ್ಟಿನಲ್ಲಿ ಕಮ್ಯೂನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳು ಸ್ಥಳೀಯ ನಿವಾಸಿಗರಿಗೆ ಆರ್ಥಿಕವಾಗಿ,ಸಾಮಾಜಿಕ,ಶೈಕ್ಷಣಿಕವಾಗಿ ಹಿಂದುಳಿದವರಿಗೆ ಆದ್ಯತೆ ನೀಡಿ ಆ ವಿದ್ಯಾರ್ಥಿಗಳು,ಕನಿಷ್ಠ ಉತ್ತೀರ್ಣಾಂಕಗಳನ್ನು ಪಡೆದಿದ್ದರೂ ಸಹ,ಅವರಿಗೆ ಪ್ರವೇಶ ನೀಡಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶವನ್ನು ಕಲ್ಪಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ ನಡೆಸುತ್ತಿರುವ ಪದವಿ ಪರೀಕ್ಷೆಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳನ್ನು ಪಡೆದಿರುತ್ತಾರೆ.ಸಂಸ್ಥೆಯು ನಡೆಸುತ್ತಿರುವ ನಿರ್ವಹಣಾ ಶಾಸ್ತ್ರದ ಸ್ನಾತಕೋತ್ತರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇಕಡಾ 100 ರಷ್ಟು ಫಲಿತಾಂಶ ಪಡೆದ ಸಂದರ್ಭದಲ್ಲಿ,ಬೆಂಗಳೂರು ವಿಶ್ವವಿದ್ಯಾಲಯ ಇತ್ತೀಚೆಗೆ ಆಯೋಜಿಸಿದ್ದ ಅಂತರಾಷ್ಟ್ರೀಯ ಸಮಾವೇಶದಲ್ಲಿ ಬೆಸ್ಟ್ ಎಜುಕೇಷನಲ್ ಎಕ್ಸಲೆನ್ಸ್” ಗೌರವವನ್ನು ನೀಡಿ,ಆಡಳಿತ ಮಂಡಳಿಯ ಅಧ್ಯಕ್ಷ  ಕೆ.ಎಂ.ನಾಗರಾಜ್ ಹಾಗೂ ಕಾರ್ಯದರ್ಶಿ  ಚಿಕ್ಕಯ್ಯ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು ಸನ್ಮಾನಿಸಿ ಗೌರವಿಸಿದ್ದಾರೆ.

 

ಆರ್.ಕೆ.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

19 − 15 =