Categories
ಕ್ರಿಕೆಟ್

ಪಿಎಂ ನಿಧಿಗೆ 50,000 ಡಾಲರ್ ದೇಣಿಗೆ ನೀಡಿದ ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ” ಪ್ಯಾಟ್ ಕಮಿನ್ಸ್ “

ನವದೆಹಲಿ: ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮಿನ್ಸ್ ‘ಪಿಎಂ ನಿಧಿಗೆ  ಬರೋಬ್ಬರಿ 50,000 ಡಾಲರ್ (37,35,640 ರೂ.) ದೇಣಿಗೆ ನೀಡಿದ್ದಾರೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳು ದಿನೆ ದಿನೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ ಈ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ. ಇದನ್ನು ಗಮನಿಸಿದ ಕಮಿನ್ಸ್ ನೆರವಿಗೆ ಮುಂದಾಗಿದ್ದಾರೆ.
ಟ್ವೀಟ್‌ ಮೂಲಕ ಸ್ವತಃ ಪ್ಯಾಟ್ ಕಮಿನ್ಸ್ ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆಮ್ಲಜನಕದ ಸಿಲಿಂಡರ್‌ಗಳ ಕೊರತೆ ಎದುರಿಸುತ್ತಿರುವ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ಖರೀದಿಸಲು ಕಮಿನ್ಸ್ ಸಹಾಯಹಸ್ತ ಚಾಚಿರುವುದು ತುಂಬಾ ಸಂತೋಷದ ವಿಷಯ,  ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಮಿನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಟ್ವೀಟ್ ಮಾಡಿರುವ ಕಮಿನ್ಸ್, ‘ನಾವು  ಪ್ರೀತಿಸುವ ದೇಶಗಳಲ್ಲಿ ಭಾರತವೂ ಒಂದು. ನಾನು ಎಲ್ಲೂ ನೋಡಿರದ  ವಿಶಾಲ ಹೃದಯದ ಪ್ರೀತಿ ನನಗೆ ಭಾರತದಲ್ಲಿ ಸಿಕ್ಕಿದೆ, ಇಂತಹ ಹೃದಯವಂತ  ಮನಸ್ಸಿನ ಜನ ಇಲ್ಲಿದ್ದಾರೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಇಲ್ಲಿನ ಜನ ತೊಂದರೆ ಅನುಭವಿಸುತ್ತಿರುವುದನ್ನು ನೋಡುದಾಗ ನನಗೆ ತುಂಬಾ ನೋವಾಗಿದೆ ಎಂದು ಬರೆದುಕೊಂಡಿದ್ದಾರೆ.
ಟ್ವೀಟ್‌ನ ಮುಂದಿನ ಸಾಲುಗಳಲ್ಲಿ, ನಾನು ಒಬ್ಬ ಆಟಗಾರನಾಗಿ ಐಪಿಎಲ್‌ನಲ್ಲಿ ಕೋಟ್ಯಾಂತರ ಮಂದಿಯನ್ನು ತಲುಪಲು ಇರುವ ಅವಕಾಶವನ್ನು ನಾನು ಬಳಸಿಕೊಳ್ಳಲಿದ್ದೇನೆ. ನಾನು ಪಿಎಂ ನಿಧಿಗೆ ದೇಣಿಗೆ ನೀಡಿದ್ದೇನೆ. ನನ್ನ ಇತರ ಐಪಿಎಲ್ ಆಟಗಾರರಿಗೂ ನಾನು ದೇಣಿಗೆ ನೀಡಲು ಬೆಂಬಲ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ತಲೆಬಾಗಲೆ ಬೇಕು.
ಭಾರತ ದೇಶದಲ್ಲಿ ಕ್ರಿಕೆಟ್ ಅತಿ ಶ್ರೀಮಂತಿಕೆಯ ಆಟವಾಗಿದೆ ದಿನ ಬೇಳಗಾಗುವುದರಲ್ಲಿ ಅದೆಷ್ಟೋ ಮಂದಿ ಕ್ರಿಕೆಟಿಗರು ಶ್ರೀಮಂತರಾಗಿದ್ದಾರೆ ಇನ್ನೂ ಸಾಕಷ್ಟು ಮಂದಿ ಭಾರತದ ಸ್ಟಾರ್ ಕ್ರಿಕೆಟಿಗರು ಕೋಟಿಗಟ್ಟಲೆ ಹಣ ಮಾಡಿಕೊಂಡಿದ್ದಾರೆ ಇವರಲ್ಲಿ ಬೆರಳೆಣಿಕೆಯ ಕೇಲವರು ಸಮಾಜ ಸೇವೆಗೆ, ಕೊರೊನಾ ಸೊಂಕಿತರ ನೆರವಿಗೆ ಸಹಾಯ ಹಸ್ತ ಚಾಚಿದ್ದಾರೆ ಅದರೆ ಇವರಲ್ಲಿ ಕೇಲವರು ಕೋಟಿ ಕೋಟಿ ಸಂಪಾದಿಸಿದರು ಮಾನವೀಯತೆಯನ್ನು ಮರೆತು ತಮ್ಮ ಐಶಾರಾಮಿ ಬದುಕಿನಲ್ಲೆ ಕಳೆದು ಹೋಗಿದ್ದಾರೆ ಅದೇ ದುರಂತ…. ಅದೇನೆ ಇರಲಿ ಭಾರತಿಯ ಅಭಿಮಾನಿಗಳ ಪ್ರೀತಿಗೆ ಬೆಲೆಕೊಟ್ಟು ಕೊರೊನಾ ಸೋಂಕಿತರ ನೆರವಿಗೆ ನಿಂತ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ  “ಪ್ಯಾಟ್ ಕಮಿನ್ಸ್ ” ಗೆ ಪ್ರತಿಯೊಬ್ಬ ಭಾರತಿಯನ ಪರವಾಗಿ ದೊಡ್ಡದೊಂದು ಸಲಾಮ್