
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ಪರ ಮಿಂಚಲು ಅಭಿಲಾಷ್ ಶೆಟ್ಟಿ ರೆಡಿ
ಕರ್ನಾಟಕ ಏಕದಿನ ತಂಡದಲ್ಲಿ ಇದೇ ಮೊದಲ ಬಾರಿ ಸ್ಥಾನ ಪಡೆದಿರುವ ಉಡುಪಿಯ ಕೋಟಾದ ಮೂಡು ಗಿಳಿಯಾರಿನ ಹುಡುಗ ಅಭಿಲಾಷ್ ಶೆಟ್ಟಿ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ ಪಾದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. 26 ವರ್ಷದ ಪ್ರತಿಭಾವಂತ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ ಇದೇ ವರ್ಷ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದರು.
ಈ ಬಾರಿ ಕರ್ನಾಟಕ ತಂಡ ಅನುಭವಿ ಆಟಗಾರ ಮನೀಶ್ ಪಾಂಡೆ ಅನುಪಸ್ಥಿತಿಯಲ್ಲು ಆಡುತ್ತಿದೆೆ. ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಎಡವಿರುವ ಮನೀಶ್ ಪಾಂಡೆ ಅವರನ್ನು ಕರ್ನಾಟಕ ತಂಡದಿಂದ ಕೈಬಿಡಲಾಗಿದೆ.
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದು, ಅನುಭವಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪಂದ್ಯಗಳು ಡಿಸೆಂಬರ್ 21ರಿಂದ ಜನವರಿ 5ರವರೆಗೆ ಗುಜರಾತ್’ನ ಅಹ್ಮದಾಬಾದ್’ನಲ್ಲಿ ನಡೆಯಲಿವೆ.
ಈಗಾಗಲೇ ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ನಾಕೌಟ್ ಪ್ರವೇಶಿಸಲು ವಿಫಲವಾಗಿದ್ದು, ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಾದರೂ ನಾಕೌಟ್ ಹಂತಕ್ಕೇರಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ.
ಮತ್ತೊಂದೆಡೆ ಬಲಿಷ್ಠ ಮುಂಬೈ ತಂಡ ಈ ವರ್ಷ ರಣಜಿ ಟ್ರೋಫಿ, ಇರಾನಿ ಕಪ್ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದು, ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿದೆ.
ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ಕರ್ನಾಟಕ ತಂಡ
1. ಮಯಾಂಕ್ ಅಗರ್ವಾಲ್ (ನಾಯಕ)
2. ಎಸ್‌ಜೆ ನಿಕಿನ್ ಜೋಸ್
3. ಅನೀಶ್ ಕೆವಿ
4. ಸ್ಮರಣ್ ಆರ್.
5. ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್)
6. ಅಭಿನವ್ ಮನೋಹರ್
7. ಶ್ರೇಯಸ್ ಗೋಪಾಲ್ (ಉಪನಾಯಕ)
8. ಹಾರ್ದಿಕ್ ರಾಜ್
9. ವೈಶಾಖ್ ವಿಜಯ ಕುಮಾರ್
10. ಕೌಶಿಕ್ ವಿ.
11. ವಿದ್ಯಾಧರ್ ಪಾಟೀಲ್
12. ಕಿಶನ್ ಎಸ್ ಬೆದಾರೆ
13. ಅಭಿಲಾಶ್ ಶೆಟ್ಟಿ
14. ಮನೋಜ್ ಭಾಂಡಗೆ
15. ಪ್ರವೀಣ್ ದುಬೆ
16. ಲವ್‌ನಿತ್ ಸಿಸೋಡಿಯಾ (ವಿಕೆಟ್ ಕೀಪರ್)
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ತಂಡದ ವೇಳಾಪಟ್ಟಿ ಡಿಸೆಂಬರ್ 21: ಕರ್ನಾಟಕ Vs ಮುಂಬೈ (ಅಹ್ಮದಾಬಾದ್)
ಡಿಸೆಂಬರ್ 23: ಕರ್ನಾಟಕ Vs ಪುದುಚೇರಿ (ಅಹ್ಮದಾಬಾದ್)
ಡಿಸೆಂಬರ್ 26: ಕರ್ನಾಟಕ Vs ಪಂಜಾಬ್ (ಅಹ್ಮದಾಬಾದ್)
ಡಿಸೆಂಬರ್ 28: ಕರ್ನಾಟಕ Vs ಅರುಣಾಚಲ ಪ್ರದೇಶ (ಅಹ್ಮದಾಬಾದ್)
ಡಿಸೆಂಬರ್ 31: ಕರ್ನಾಟಕ Vs ಹೈದರಾಬಾದ್ (ಅಹ್ಮದಾಬಾದ್)
ಜನವರಿ 03: ಕರ್ನಾಟಕ Vs ಸೌರಾಷ್ಟ್ರ (ಅಹ್ಮದಾಬಾದ್)
ಜನವರಿ 05: ಕರ್ನಾಟಕ Vs ನಾಗಾಲ್ಯಾಂಡ್ (ಅಹ್ಮದಾಬಾದ್)
