SportsKannada | ಸ್ಪೋರ್ಟ್ಸ್ ಕನ್ನಡ

ಅಂದು ಕುಂಬ್ಳೆ ವಿಶ್ವದಾಖಲೆಯ 10 ವಿಕೆಟ್ ಗಳಿಸಲು ಗೊಂಚಲಿಗೆ ನೆರವಾಗಿದ್ದ ಶ್ರೀನಾಥ್

ಭಾರತೀಯರ ಪಾಲಿಗೆ ಹಾಗೂ ಅನಿಲ್ ಕುಂಬ್ಳೆ ಅದೊಂದು ಅವಿಸ್ಮರಣೀಯ ದಿನ ಅಂದರೆ ತಪ್ಪಾಗಲಾರದು. ಅವತ್ತು ದಿನಾಂಕ 7 ಫೆಬ್ರವರಿ 1999 ಆ ದಿನ ಬಹುಶಃ ವಿಶ್ವ ಕ್ರಿಕೆಟ್ ಅನಿಲ್ ಕುಂಬ್ಳೆ ಎಂಬ ಸ್ಪಿನ್ ಗಾರುಡಿಗನತ್ತ ತಿರುಗಿ ನೋಡಿದ ದಿನ.

ದಿನಾಂಕ 7 ಫೆಬ್ರವರಿ 1999ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ 2 ನೇ ಟೆಸ್ಟ್ ನಲ್ಲಿ ಅನಿಲ್ ಕುಂಬ್ಳೆ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು.

ಹಾಗೆ 2 ನೇ ಇನ್ನಿಂಗ್ಸ್ ನಲ್ಲಿ ಎದುರಾಳಿಗಳಿಗೆ ಆರಂಭದಿಂದಲೂ ಅನಿಲ್ ಕುಂಬ್ಳೆ ದುಃಸ್ವಪ್ನವಾಗಿ ಕಾಡಿದ್ದರು ಅಂತಿಮವಾಗಿ ಕುಂಬ್ಳೆ 9 ವಿಕೆಟ್ ಪಡೆದಿದ್ದರು ಇತಿಹಾಸ ನಿರ್ಮಿಸಲು ಕುಂಬ್ಳೆಗೆ ಒಂದು ವಿಕೆಟ್ ಅವಶ್ಯಕತೆ ಇತ್ತು .ಪಾಕಿಸ್ತಾನದ 9 ವಿಕೆಟ್ ಗಳು ಉರುಳಿದಾಗ ಬೌಲಿಂಗ್ ಸರದಿ ಜವಾಗಲ್ ಶ್ರೀನಾಥ್ ಅವರದ್ದಾಗಿತ್ತು ಆದರೆ ಅವರು ಎಸೆದ ಆ ಓವರ್ ಕುಂಬ್ಳೆಗೆ 10 ವಿಕೆಟ್ ಗಳಿಸಲು ಸಂಪೂರ್ಣ ಅನುವು ಮಾಡಿಕೊಟ್ಟಿತು.

ಮುಂದಿನ ಓವರ್ ನಲ್ಲಿ ಕುಂಬ್ಳೆಗೆ ವಿಕೆಟ್ ಸಿಗಲೆಂದು ಅವರು ಆ ಓವರ್ ನಲ್ಲಿ ವಾಸಿಮ್ ಅಕ್ರಮ್ ಅವರಿಗೆ ಆಫ್ ಸ್ಟಂಪ್ ನಿಂದ ಹೊರಗೆ ಮತ್ತು ಲೆಗ್ ಸ್ಟಂಪ್ ನಿಂದ ಹೊರಗೆ ಚೆಂಡನ್ನು ಎಸೆದು ತಮ್ಮ ಓವರ್ ಅನ್ನು ಮುಗಿಸಿದ ಕನ್ನಡಿಗ ಇನ್ನೊಬ್ಬ ಕನ್ನಡಿಗನ 10 ವಿಕೆಟ್ ಗಳ ದಾಖಲೆಗೆ ನೆರವಾದರು. ಮುಂದಿನ ಓವರ್ ನಲ್ಲೇ ವಾಸಿಂ ಅಕ್ರಮ್ ಅವರ ವಿಕೆಟ್ ಕಬಳಿಸುವುದರ ಮೂಲಕ ಕುಂಬ್ಳೆ ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು.

ಶ್ರೀನಾಥ್ ಕುಂಬ್ಳೆ ಗೆ10 ನೇ ವಿಕೆಟ್ ಗಳಿಸಲು ನೆರವಾದ ರೋಮಾಂಚಕ ವಿಡಿಯೋ ಇಲ್ಲಿದೆ ನೋಡಿ ಆನಂದಿಸಿ.

Exit mobile version