SportsKannada | ಸ್ಪೋರ್ಟ್ಸ್ ಕನ್ನಡ

ಮೈಟಿ ಬೆಂಗಳೂರು ತಂಡಕ್ಕೆ ರಂಗಣ್ಣ & ಹನುಮಂತರಾಯಪ್ಪ ಮೆಮೋರಿಯಲ್ ಕಪ್-2019

ಟಿ.ದಾಸರಹಳ್ಳಿಯ M.E.I layout ನ ಅಂಗಣದಲ್ಲಿ 2 ದಿನಗಳ ಕಾಲ ನಡೆದ ರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ರಂಗಣ್ಣ & ಹನುಮಂತರಾಯಪ್ಪ ಮೆಮೋರಿಯಲ್ ಕಪ್ ನ್ನು ಮೈಟಿ ಬೆಂಗಳೂರು ತಂಡ ಜಯಿಸಿದೆ.

ಬರೋಡದ ರಣಜಿ ಆಟಗಾರ ಅಂಕುರ್ ಸಿಂಗ್,ಮುಂಬಯಿ ಟೆನ್ನಿಸ್ ಕ್ರಿಕೆಟಿಗ ಬಂಟಿ ಪಾಟೀಲ್ ಒಳಗೊಂಡ ಪಿರಮಿತಾ ತಂಡ ಸೇರಿದಂತೆ ರಾಜ್ಯದ 16 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ARP ನ್ಯಾಶ್ ತಂಡ ಸ್ನೇಹಪ್ರಿಯ ತಂಡವನ್ನು ಸೋಲಿಸಿದರೆ,ಮೈಟಿ ತಂಡ ಫ್ರೆಂಡ್ಸ್ ಬೆಂಗಳೂರು ತಂಡವನ್ನು ರೋಚಕ ಕದನದಲ್ಲಿ 1 ರನ್ ಗಳ ಅಂತರದಲ್ಲಿ ಸೋಲುಣಿಸಿ ಫೈನಲ್ ಗೆ ನೆಗೆದೇರಿದ್ದವು.

ಮಳೆ ಹಾಗೂ ಸಮಯದ ಅಭಾವದಿಂದ ಕೇವಲ 1 ಓವರ್ ಗಳಿಗೆ ಸೀಮಿತವಾದ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮೈಟಿ ಶಾಬುದ್ದೀನ್,ನ್ಯಾಶ್ ಪುರುಷಿಗೆ ಸಿಡಿಸಿದ 1 ಸಿಕ್ಸರ್,1ಬೌಂಡರಿ ಸಹಿತ 13 ರನ್ ಗಳ ಗುರಿಯನ್ನು ನೀಡಿತ್ತು. ಉತ್ತರವಾಗಿ ಮೈಟಿ ಕೃಷ್ಣ ಅದ್ಭುತ ಬೌಲಿಂಗ್ ನಲ್ಲಿ ನ್ಯಾಶ್ ತಂಡವನ್ನು ಒಂದು ಓವರ್ ನಲ್ಲಿ ಕೇವಲ 2ರನ್ ನೀಡಿ 2 ವಿಕೆಟ್ ಉರುಳಿಸಿ ಮೈಟಿಗೆ ಗೆಲುವು ತಂದಿತ್ತರು.

ವಿಜಯಿ ತಂಡ ಮೈಟಿ 3 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ತಂಡ A.R.P ನ್ಯಾಶ್ 1.5 ಲಕ್ಷ ಸಹಿತ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.

ಫೈನಲ್ ತಂಡದ ಪಂದ್ಯಶ್ರೇಷ್ಟ ಪ್ರಶಸ್ತಿ ಶಾಬುದ್ದೀನ್ ಪಡೆದುಕೊಂಡರೆ ಕ್ರಮವಾಗಿ ಬೆಸ್ಟ್ ಬೌಲರ್ ಮೈಟಿ ಕೃಷ್ಣ, ಸರಣಿ ಶ್ರೇಷ್ಠ ಮೈಟಿ ಸ್ಯಾಂಡಿ,ಬೆಸ್ಟ್ ಬ್ಯಾಟ್ಸ್‌ಮನ್ A.R.P ನ್ಯಾಶ್ ನ ಶ್ರೀಕಾಂತ್ ಪಡೆದುಕೊಂಡರು.

ವಿಜೇತರಿಗೆ ದಿ| ರಂಗಣ್ಣ ಹಾಗೂ ದಿ|ಹನುಮಂತರಾಯಪ್ಪ ಕುಟುಂಬಸ್ಥರು ಬಹುಮಾನ ವಿತರಿಸಿದರು. ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಜನತಾದಳದ ಅಧ್ಯಕ್ಷ ಶ್ರೀಯುತ ಜಿ.ಗುರುಪ್ರಸಾದ್ ಸಾರಥ್ಯದಲ್ಲಿ,ಶ್ರೀ ನಿತೇಶ್ ಹಾಗೂ ಸಂಗಡಿಗರ ಸಹಕಾರದೊಂದಿಗೆ ಈ ವ್ಯವಸ್ಥಿತ ಪಂದ್ಯಾಕೂಟ ಭರ್ಜರಿ ಯಶಸ್ಸು ಸಾಧಿಸಿ,ಜನಮೆಚ್ಚುಗೆಗೆ ಪಾತ್ರವಾಯಿತು.

ಸಚಿನ್ ಮಹಾದೇವ್ ನೇತೃತ್ವದ M.Sports ಯೂಟ್ಯೂಬ್ ಚಾನೆಲ್ ಪಂದ್ಯಾಕೂಟದ ನೇರಪ್ರಸಾರವನ್ನು ಬಿತ್ತರಿಸಿ,ವಿಶ್ವದಾದ್ಯಂತ ಸುಮಾರು 40,000 ಕ್ರೀಡಾಭಿಮಾನಿಗಳು ಪಂದ್ಯಾಕೂಟ ವೀಕ್ಷಿಸಿದರು.

ಆರ್.ಕೆ.ಆಚಾರ್ಯ ಕೋಟ

Exit mobile version