
ಭಾರತ ತಂಡದ ಪರ ಆಡಬೇಕು, ದೇಶವನ್ನು ಪ್ರತಿನಿಧಿಸಬೇಕೆಂಬುದು ಕ್ರಿಕೆಟ್ ಆಡುವ ಪ್ರತಿಯೊಬ್ಬ ಹುಡುಗನ ಕನಸಾಗಿರುತ್ತದೆ. ಅದಕ್ಕೂ ಮೊದಲು ರಾಜ್ಯದ ಪರ ರಣಜಿ ಪಂದ್ಯವಾಡಬೇಕೆಂಬ ಕನಸು ಹೊತ್ತವರೂ ಇರುತ್ತಾರೆ. ಅಂತಹ ಆಟಗಾರರಲ್ಲಿ ಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಹುಡುಗ ಅಭಿಲಾಷ್ ಶೆಟ್ಟಿ ಕೂಡ ಒಬ್ಬ.
ಪ್ರತಿಭಾವಂತ ಎಡಗೈ ಮಧ್ಯಮ ವೇಗದ ಬೌಲರ್ ಆಗಿರುವ ಅಭಿಲಾಷ್ ಶೆಟ್ಟಿ ಕಿರಿಯರ ಕ್ರಿಕೆಟ್’ನಲ್ಲಿ ಈಗಾಗಲೇ ಕರ್ನಾಟಕ ಪರ ಮಿಂಚು ಹರಿಸಿರುವ ಆಟಗಾರ. ಮಹಾರಾಜ ಟ್ರೋಫಿ ಟಿ20 ಟೂರ್ನಿ, ಡಾ.ತಿಮ್ಮಪ್ಪಯ್ಯ ಟ್ರೋಫಿ 4 ದಿನಗಳ ಪಂದ್ಯ ಸೇರಿದಂತೆ ಆಡಿರುವ ಬಹುತೇಕ ಟೂರ್ನಿಗಳಲ್ಲಿ ತಮ್ಮ ಎಡಗೈ ಸ್ವಿಂಗ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅದೇ ಆಧಾರದಲ್ಲಿ ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗಿರುವ ಅಭಿಲಾಷ್ ಶೆಟ್ಟಿಗೆ ಕಳೆದ ಮೂರು ರಣಜಿ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಇದೀಗ ಅಭಿಲಾಷ್ ಶೆಟ್ಟಿ ರಣಜಿ ಪಾದಾರ್ಪಣೆಯ ಕ್ಷಣ ಹತ್ತಿರ ಬಂದಿರುವಂತೆ ಕಾಣುತ್ತಿದೆ.
ಬಂಗಾಳ ವಿರುದ್ಧ ನವೆಂಬರ್ 6ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಪಂದ್ಯದ ಮೂಲಕ ಅಭಿಲಾಷ್ ಶೆಟ್ಟಿ ರಣಜಿ ಕ್ರಿಕೆಟ್’ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
ಬಂಗಾಳ ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ ಹೀಗಿದೆ:
1. ಮಯಾಂಕ್ ಅಗರ್ವಾಲ್ (ನಾಯಕ)
2. ಮನೀಶ್ ಪಾಂಡೆ (ಉಪನಾಯಕ)
3. ನಿಕಿನ್ ಜೋಸ್
4. ಸ್ಮರಣ್ ಆರ್.
5. ಕಿಶನ್ ಬೆದರೆ
6. ಅಭಿನವ್ ಮನೋಹರ್
7. ಸುಜಯ್ ಸತೇರಿ (ವಿಕೆಟ್ ಕೀಪರ್)
8. ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್)
9. ಶ್ರೇಯಸ್ ಗೋಪಾಲ್
10. ಹಾರ್ದಿಕ್ ರಾಜ್
11. ವಿದ್ಯಾಧರ್ ಪಾಟೀಲ್
12. ವಿ.ಕೌಶಿಕ್
13. ಅನೀಶ್ ಕೆ.ವಿ
14. ಮೊಹ್ಸಿನ್ ಖಾನ್
15. ಅಭಿಲಾಷ್ ಶೆಟ್ಟಿ
16. ಯಶೋವರ್ಧನ್ ಪ್ರತಾಪ್
