SportsKannada | ಸ್ಪೋರ್ಟ್ಸ್ ಕನ್ನಡ

ಅದು ಬರೀ ವೇಗ ಅಲ್ಲ, ಶರವೇಗ.. ಉರಿವೇಗ. ಕ್ವಿಂಟನ್ ಡಿ’ಕಾಕ್ ಹೇಳಿದಂತೆ ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನುಗ್ಗಿ ಬರುತ್ತಿದ್ದದ್ದು ಕ್ರಿಕೆಟ್ ಚೆಂಡಿನ ಅವತಾರ ಎತ್ತಿದ್ದ ರಾಕೆಟ್’ಗಳು.

ಎರಡು ಮ್ಯಾಚ್, 48 ಎಸೆತ. ಈ ಪೈಕಿ ಕನಿಷ್ಠ 40 ಎಸೆತಗಳ ವೇಗ ಗಂಟೆಗೆ 150 ಕಿ.ಮೀ.ಗೂ ಹೆಚ್ಚು. ಒಬ್ಬ genuine fast bowler ಟಿ20 ಕ್ರಿಕೆಟ್’ನಲ್ಲಿ back to back ಪ್ಲೇಯರ್ ಆಫ್ ದಿ ಮ್ಯಾಚ್ ಆಗುವುದು ತುಂಬಾ ಖುಷಿ ಕೊಡುತ್ತದೆ.
ಹೆಸರು ಮಯಾಂಕ್ ಯಾದವ್. ವಯಸ್ಸು 21. ನಿನ್ನೆ
RCB ದಾಂಡಿಗರು ಆರಡಿ ಒಂದಿಂಚು ಎತ್ತರದ ಈ ಹುಡುಗನ ಬೆಂಕಿ ಚೆಂಡುಗಳ ಮುಂದೆ ತರಗೆಲೆಗಳಂತೆ ಉದುರಿ ಹೋಗಿದ್ದಾರೆ. ಸತತವಾಗಿ 150+ ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿರುವ ಮಯಾಂಕ್ ಯಾದವ್ ಭಾರತದ ಹೊಸ ಸ್ಪೀಡ್ ಗನ್. ಈತ ತನ್ನ ಯಶಸ್ಸಿನ ಶ್ರೇಯಸ್ಸನ್ನು ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್’ಗೆ ನೀಡುತ್ತಿದ್ದಾನೆ. ಕಾರಣವೂ ಇದೆ.
ಮಯಾಂಕ್ ಯಾದವ್’ಗೆ ಚೆನ್ನೈ ಅಥವಾ ಡೆಲ್ಲಿ ತಂಡ ಸೇರುವ ಆಸೆ ಇತ್ತು. ಆದರೆ ಅವರು pick ಮಾಡಲಿಲ್ಲ. ನಂತರ ಲಕ್ನೋ ತಂಡ ಸೇರಿಕೊಂಡ. ಮೊದಲ ವರ್ಷ ಆಡುವ ಅವಕಾಶ ಸಿಗಲಿಲ್ಲ.  ಎರಡನೇ ವರ್ಷ ಗಾಯದ ಕಾರಣ ಆಡಲು ಸಾಧ್ಯವಾಗಲಿಲ್ಲ. ಕಳೆದ ವರ್ಷವೇ ಆತನನ್ನು ತಂಡದಿಂದ ಕೈ ಬಿಡಲು ಲಕ್ನೋ ಫ್ರಾಂಚೈಸಿ ನಿರ್ಧರಿಸಿತ್ತು. ಆದರೆ ಕ್ಯಾಪ್ಟನ್ ರಾಹುಲ್ ಆ ಹುಡುಗನ ಹಿಂದೆ ಗಟ್ಟಿಯಾಗಿ ನಿಂತು ಬಿಟ್ಟಿದ್ದ. ಅದರ ಪ್ರತಿಫಲ ಆಗ ಕಾಣುತ್ತಿದೆ.
ದೆಹಲಿಯ ಸೋನೆಟ್ ಕ್ರಿಕೆಟ್ ಕ್ಲಬ್ ನೆಟ್ಸ್’ನಲ್ಲಿ ಬೌಲಿಂಗ್ ಮಾಡುತ್ತಿದ್ದ ಮಯಾಂಕ್ ಯಾದವ್. ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಅವರನ್ನು ಆರಂಭದಲ್ಲಿ reject ಮಾಡಿದಂತೆ ಈ ಹುಡುಗನನ್ನೂ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಸೆಲೆಕ್ಟರ್ಸ್ reject ಮಾಡಿದ್ದರು. ಆದರೆ ಈತನ raw pace ಜ್ವಾಲಾಮುಖಿಯಂತೆ ಸ್ಫೋಟಿಸಲು ಹೆಚ್ಚು ದಿನ ಹಿಡಿಯಲಿಲ್ಲ. ಡೆಲ್ಲಿ ರಣಜಿ ತಂಡಕ್ಕೆ ಆಯ್ಕೆಯಾದ ಸ್ಪೀಡ್ ಗನ್, ಈಗ ತನ್ನ ಶರವೇಗದ ಬೌಲಿಂಗ್’ನಿಂದ  ಐಪಿಎಲ್ ಟೂರ್ನಿಯನ್ನೇ ನಡುಗಿಸುತ್ತಿದ್ದಾನೆ..!
ಭಾರತ ತಂಡದ ಪರ ಆಡುವುದು ನನ್ನ ಕನಸು ಎಂದು ಮಯಾಂಕ್ ಯಾದವ್ ಹೇಳಿದ್ದಾನೆ. ಈ ಹುಡುಗನ ವಿಚಾರದಲ್ಲಿ ಬಿಸಿಸಿಐ ಒಂದಷ್ಟು ಕಾಳಜಿ ವಹಿಸಿ ಸರಿಯಾಗಿ nurture ಮಾಡಿದಲ್ಲಿ ಭಾರತ ತಂಡಕ್ಕೆ ದೊಡ್ಡ ಆಸ್ತಿಯಾಗಬಲ್ಲ.
#mayankyadavvv #mayankyadav #klrahul #LucknowSuperGiants #ipl #ipl24 #rcb
Exit mobile version