Site icon SportsKannada ಸ್ಪೋರ್ಟ್ಸ್ ಕನ್ನಡ

ಈ ಸಾರಿ, ಮತ್ತೆ RCBಗೆ ಸೇರಲಿದ್ದಾರೆಯೇ ಕೆ ಎಲ್. ರಾಹುಲ್ ?

ಈ ಸಾರಿ, ಮತ್ತೆ RCB ಗೆ ಸೇರಲಿದ್ದಾರೆಯೇ ಕೆ ಎಲ್. ರಾಹುಲ್ ?

ಇಂಡಿಯನ್ ಪ್ರೀಮಿಯರ್ ಲೀಗ್‌ನ 2025 ರ ಸೀಸನ್‌ಗೆ ಮುಂಚಿತವಾಗಿ ತಂಡಗಳು ತಮ್ಮ ರೆಟೆನ್ಶನ್ ಲಿಸ್ಟ್ ಘೋಷಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಸೀಸನ್‌ನಿಂದ ಆಡಿದ್ದರೂ, ಇನ್ನೂ ಕಪ್ ಗೆಲ್ಲದ್ದಿದ್ದರೂ ಅಪಾರ ಅಭಿಮಾನಿಗಳ ಬೆಂಬಲ ಹೊಂದಿರುವ ತಂಡವಾಗಿದೆ. ಆರ್‌ಸಿಬಿ ಈ ಬಾರಿ ವಿರಾಟ್ ಕೊಹ್ಲಿ, ರಜತ್ ಪಾಟಿಧಾರ್ ಮತ್ತು ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.

ರಾಹುಲ್-ಕೊಹ್ಲಿ ಓಪನಿಂಗ್

ಆರ್‌ಸಿಬಿ ಕಪ್ ಗೆಲ್ಲಲು ಎಲ್ಲರೂ ಈ ಸಲ ಎದುರು ನೋಡುತ್ತಿದ್ದಾರೆ. ಈ ಬಾರಿ ವಿರಾಟ್ ಕೊಹ್ಲಿ ಜೊತೆಗೆ ಕೆಎಲ್ ರಾಹುಲ್ ಆರ್‌ಸಿಬಿಗೆ ಓಪನರ್ ಆಗಲಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ಲಕ್ನೋ ಸೂಪರ್‌ಜೈಂಟ್ಸ್ ನಾಯಕತ್ವದಿಂದ ಕೆಳಗಿಳಿದಿದ್ದು, ತಂಡದಿಂದ ವಜಾಗೊಳಿಸಲಾಗಿದೆ. ರಾಹುಲ್ ಆರ್‌ಸಿಬಿಗೆ ಬರುವ ಸಾಧ್ಯತೆ ಹೆಚ್ಚಿದೆ.

ರಾಹುಲ್ ಈ ಹಿಂದೆ ಆರ್‌ಸಿಬಿ ಪರ ಆಡಿದ ಆಟಗಾರ. ಈ ಬಾರಿ ಆರ್‌ಸಿಬಿ ನಾಯಕತ್ವಕ್ಕೆ ರಾಹುಲ್ ಹೆಸರು ಕೇಳಿಬರುತ್ತಿದೆ. ರಾಹುಲ್ ಅವರ ಶೈಲಿ RCB ಗೆ ಸರಿಹೊಂದುತ್ತದೆ. ಹೀಗಾಗಿ ಆರ್‌ಸಿಬಿ ಕೆ ಎಲ್ ರಾಹುಲ್ ನತ್ತ ಮುಖ ಮಾಡುವ ಸಾಧ್ಯತೆ ಇದೆ. ಆದರೆ ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡಲು ಆರ್‌ಸಿಬಿ ಮುಂದಾಗಿದೆ ಎಂಬ ಸೂಚನೆಗಳು ಇವೆ. ಅವರು ಮತ್ತೆ ನಾಯಕತ್ವಕ್ಕೆ ಮರಳಲು ಬಯಸಿದ್ದಾರೆ ಎಂಬ ಸೂಚನೆಗಳು ಲಭ್ಯವಾಗಿವೆ.

Exit mobile version