SportsKannada | ಸ್ಪೋರ್ಟ್ಸ್ ಕನ್ನಡ

100ನೇ ಟೆಸ್ಟ್ ಆಡುತ್ತಿರುವ ವಿರಾಟ್ ಕೊಹ್ಲಿಗೆ ಬಿಸಿಸಿಐ ಪರವಾಗಿ ವಿಶೇಷ ಕ್ಯಾಪ್ ನೀಡಿ ಗೌರವಿಸಿದ ದ್ರಾವಿಡ್

ಭಾರತ ಹಾಗೂ ಶ್ರೀಲಂಕಾ ನಡುವಿನ  ಟೆಸ್ಟ್ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ಆರಂಭವಾಗಿದೆ
ಈ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಯ ಕ್ರಿಕೆಟ್ ಬದುಕಿನ 100ನೇ ಟೆಸ್ಟ್ ಪಂದ್ಯ ಎಂಬುದು ವಿಶೇಷ ನೂರು ಟೆಸ್ಟ್ ಅಡಿರುವ ಭಾರತೀಯರ ಆಟಗಾರರಲ್ಲಿ ಕೊಯ್ಲಿ ಹನ್ನೆರಡನೆಯ ಆಟಗಾರ ರಾಗಿದ್ದಾರೆ ಈ ಸಾಧನೆ ಮಾಡುವುದು ಸುಲಭದ ಮಾತಲ್ಲ ಹೀಗಾಗಿ ಈ ಪಂದ್ಯದ ಆರಂಭಕ್ಕೂ ಮುನ್ನ ಬಿಸಿಸಿಐ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶೇಷವಾಗಿ ಗೌರವಿಸಿದೆ. ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಹಾಲಿ ಕೋಚ್ ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿಗೆ ಈ ಸಂದರ್ಭದಲ್ಲಿ ವಿಶೇಷ ಕ್ಯಾಪ್ ನೀಡಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಮೈದಾನದಲ್ಲಿ ಉಪಸ್ಥಿತರಿದ್ದರು.
ಇನ್ನು ವಿರಾಟ್ ಕೊಹ್ಲಿ ಕೋಚ್ ರಾಹುಲ್‌ ದ್ರಾವಿಡ್ ಅವರಿಂದ ವಿಶೇಷ ಕ್ಯಾಪ್ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರಿಂದ ಈ ಕ್ಯಾಪ್ ಸ್ವೀಕರಿಸಿದ್ದು ತುಂಬಾ ಸಂತೋಷವಾಗಿದೆ ಎಂದ ಕೊಹ್ಲಿ ಈ ಕ್ಷಣವನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲ ರಾಹುಲ್ ದ್ರಾವಿಡ್ ಅವರು ನನ್ನ ಬಾಲ್ಯದ ಹೀರೋ. ಈ ಉಡುಗೊರೆ ಸ್ವೀಕರಿಸಲು ಅವರಿಗಿಂತ ವಿಶೇಷ ವ್ಯಕ್ತಿ ಮತ್ತೊಬ್ಬರಿಲ್ಲ ಎಂದಿದ್ದಾರೆ.
ಇನ್ನು ಕೋಚ್ ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿಗೆ ವಿಶೇಷ ಟೋಪಿಯನ್ನು ನೀಡುವ ಸಂದರ್ಭದಲ್ಲಿ ಕೊಹ್ಲಿ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಇದು ಅತ್ಯಂತ ಅರ್ಹ ಗೌರವ. ಇದನ್ನು ಅರ್ಹತೆಯಿಂದಲೇ ಸಂಪಾದಿಸಿದ್ದೀರಿ. ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಹೇಳಿದ್ದಂತೆಯೇ ಈ ಸಂಭ್ರವನ್ನು ದ್ವಿಗುಣಗೊಳಿಸೋಣ” ಎಂದು ದ್ರಾವಿಡ್ ಹೇಳಿದರು.
ನಂತರ ವಿರಾಟ್ ಕೊಹ್ಲಿ “ಧನ್ಯವಾದಗಳು ರಾಹುಲ್ ಭಾಯ್, ಇದು ನನಗೆ ಅತ್ಯಂತ ವಿಶೇಷವಾದ ಕ್ಷಣಗಳು. ಈ ಸಂದರ್ಭದಲ್ಲಿ ನನ್ನ ಪತ್ನಿ ಇಲ್ಲಿ ನನ್ನೊಂದಿಗಿದ್ದಾರೆ. ನನ್ನ ಸೋದರ ಸ್ಟ್ಯಾಂಡ್‌ನಲ್ಲಿದ್ದಾರೆ. ಇದೊಂದು ತಂಡದ ಆಟವಾಗಿದ್ದು ನೀವೆಲ್ಲಾ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಬಿಸಿಸಿಐಗೆ ಕೂಡ ಧನ್ಯವಾದಗಳು. ನಾನು ಈ ಗೌರವವನ್ನು ರಾಹುಲ್ ದ್ರಾವಿಡ್ ಅವರಿಗಿಂತ ವಿಶೇಷವಾದ ವ್ಯಕ್ತಿಗಿಂತ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಬಾಲ್ಯದ ಹೀರೋ ಅವರು. ಅಂಡರ್-15 ದಿನಗಳಲ್ಲಿ ಅವರೊಂದಿಗೆ ತೆಗೆದುಕೊಂಡಿದ್ದ ಫೋಟೋ ಈಗಲೂ ನನ್ನ ಬಳಿ ಇದೆ” ಎಂದು ಕೊಹ್ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ
Exit mobile version