Site icon SportsKannada ಸ್ಪೋರ್ಟ್ಸ್ ಕನ್ನಡ

ಯುವಕರು ಕ್ರೀಡಾಸ್ಪೂರ್ತಿ ಮೈಗೂಡಿಸಿಕೊಳ್ಳಬೇಕು-ಡಾ.ಶುಭಕರ್ ಆಚಾರ್ಯ

ಕುಂದಾಪುರ-ಟಿ‌.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ-ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ ಮೂರನೇ ದಿನ ಕಾಲೇಜು ಮಟ್ಟದ ಟೂರ್ನಮೆಂಟ್ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕರ್ಸ್ ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಶುಭಕರ್ ಆಚಾರ್ಯ ಮಾತನಾಡಿ “ಆಟದಲ್ಲಿ ಸೋಲು ಗೆಲುವು ಸಾಮಾನ್ಯ-ಭಾಗವಹಿಸುವಿಕೆ ಮುಖ್ಯ,ಯುವಕರು ಕ್ರೀಡಾ ಸ್ಪೂರ್ತಿ ಮೈಗೂಡಿಸಿಕೊಳ್ಳಬೇಕು ಎಂದರು.
ಭಂಡಾರ್ಕರ್ಸ್ ಪಿ.ಯು ಕಾಲೇಜಿನ ಪ್ರಿನ್ಸಿಪಾಲ್ ಡಾ.ಜಿ.ಎಂ.ಗೊಂಡಾ “ಕ್ಷೇತ್ರೀಯ ಪ್ರತಿಭೆಗಳಿಗೆ ಟಿ.ಸಿ‌.ಎ ಉಡುಪಿ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ” ಎಂದರು.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಹಸ್ತಲಾಘವ ನೀಡಿ ಶುಭಹಾರೈಸಿದರು.
ಈ ಸಂದರ್ಭ ಟಿ‌.ಸಿ‌.ಎ ಅಧ್ಯಕ್ಷ ಗೌತಮ್ ಶೆಟ್ಟಿ,ಹರ್ಷವರ್ಧನ್ ಶೆಟ್ಟಿ, ನವೀನ್ ಹೆಗ್ಡೆ,ರಮೇಶ್ ಶೆಟ್ಟಿ ಹಾಲಾಡಿ,ನಿತ್ಯಾನಂದ ಮುನ್ನಾ,ಯಾದವ್ ನಾಯಕ್ ಕೆಮ್ಮಣ್ಣು,ಸದಾನಂದ ಶಿರ್ವ,ಸತೀಶ್ ಕೋಟ್ಯಾನ್,ಮನೋಜ್ ನಾಯರ್‌,ಕೆ.ಪಿ ಸತೀಶ್,ನಾರಾಯಣ ಶೆಟ್ಟಿ, ಅಬು ಮೊಹಮ್ಮದ್, ಕೋಟ ರಾಮಕೃಷ್ಣ ಆಚಾರ್,ಶಿವನಾರಾಯಣ ಐತಾಳ್ ಕೋಟ,ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು,ಟಿ.ಸಿ‌.ಎ ಪದಾಧಿಕಾರಿಗಳು ಉಪಸ್ಥಿತರಿದ್ದರು.
Exit mobile version