ಕುಂದಾಪುರ-ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ-ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ ಮೂರನೇ ದಿನ ಕಾಲೇಜು ಮಟ್ಟದ ಟೂರ್ನಮೆಂಟ್ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕರ್ಸ್ ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಶುಭಕರ್ ಆಚಾರ್ಯ ಮಾತನಾಡಿ “ಆಟದಲ್ಲಿ ಸೋಲು ಗೆಲುವು ಸಾಮಾನ್ಯ-ಭಾಗವಹಿಸುವಿಕೆ ಮುಖ್ಯ,ಯುವಕರು ಕ್ರೀಡಾ ಸ್ಪೂರ್ತಿ ಮೈಗೂಡಿಸಿಕೊಳ್ಳಬೇಕು ಎಂದರು.
ಭಂಡಾರ್ಕರ್ಸ್ ಪಿ.ಯು ಕಾಲೇಜಿನ ಪ್ರಿನ್ಸಿಪಾಲ್ ಡಾ.ಜಿ.ಎಂ.ಗೊಂಡಾ “ಕ್ಷೇತ್ರೀಯ ಪ್ರತಿಭೆಗಳಿಗೆ ಟಿ.ಸಿ.ಎ ಉಡುಪಿ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ” ಎಂದರು.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಹಸ್ತಲಾಘವ ನೀಡಿ ಶುಭಹಾರೈಸಿದರು.
ಈ ಸಂದರ್ಭ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ,ಹರ್ಷವರ್ಧನ್ ಶೆಟ್ಟಿ, ನವೀನ್ ಹೆಗ್ಡೆ,ರಮೇಶ್ ಶೆಟ್ಟಿ ಹಾಲಾಡಿ,ನಿತ್ಯಾನಂದ ಮುನ್ನಾ,ಯಾದವ್ ನಾಯಕ್ ಕೆಮ್ಮಣ್ಣು,ಸದಾನಂದ ಶಿರ್ವ,ಸತೀಶ್ ಕೋಟ್ಯಾನ್,ಮನೋಜ್ ನಾಯರ್,ಕೆ.ಪಿ ಸತೀಶ್,ನಾರಾಯಣ ಶೆಟ್ಟಿ, ಅಬು ಮೊಹಮ್ಮದ್, ಕೋಟ ರಾಮಕೃಷ್ಣ ಆಚಾರ್,ಶಿವನಾರಾಯಣ ಐತಾಳ್ ಕೋಟ,ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು,ಟಿ.ಸಿ.ಎ ಪದಾಧಿಕಾರಿಗಳು ಉಪಸ್ಥಿತರಿದ್ದರು.