SportsKannada | ಸ್ಪೋರ್ಟ್ಸ್ ಕನ್ನಡ

ಶಿಂಷಾ ಟ್ರೋಫಿ ಜಯಿಸಿದ ತುಮಕೂರಿನ ಶಿಕ್ಷಣ ಇಲಾಖೆ ತಂಡ

ಚಕ್ರವರ್ತಿ ಗೆಳೆಯರ ಬಳಗ ತುಮಕೂರು 20 ನೇ ವರ್ಷದ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಸರ್ಕಾರಿ ನೌಕರರು ಹಾಗೂ ಸೇವಾ ರಂಗ ದ ತಂಡಗಳಿಗೆ ರವಿವಾರ ಏರ್ಪಡಿಸಿದ್ದ ಪಂದ್ಯಾಕೂಟವನ್ನು M.L.A ಜ್ಯೋತಿ ಗಣೇಶ್, ಧನಿಯ ಕುಮಾರ್ ಹಾಗೂ ಭಗತ್ ಸೇನೆಯ ಚೇತನ್ ಉದ್ಘಾಟಿಸಿದರು.

 

ತುಮಕೂರಿನ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ವಿಶಿಷ್ಟವಾಗಿ ನಡೆದ ಈ ಪಂದ್ಯಾಕೂಟದಲ್ಲಿ ಸರ್ಕಾರಿ ಸೇವಾರಂಗದ ಒಟ್ಟು 10 ಸಂಸ್ಥೆಗಳು ಭಾಗವಹಿಸಿದ್ದರು.

ಅಂತಿಮವಾಗಿ ಫೈನಲ್ ನಲ್ಲಿ ಶಿಕ್ಷಣ ಇಲಾಖೆ ತಂಡ ಪ್ರಥಮ ಸ್ಥಾನಿಯಾಗಿ ಆಕರ್ಷಕ ಶಿಂಷಾ ಟ್ರೋಫಿಯನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನಿ ಬೆಸ್ಕಾಂ ತಂಡ “ಸ್ಮಾರ್ಟ್ ಸಿಟಿ ಕಪ್ ಪಡೆದು, ವಿಶೇಷ ನಿರ್ವಹಣೆ ತೋರಿದ ಆಟಗಾರರು ವೈಯಕ್ತಿಕ ಪ್ರಶಸ್ತಿಗಳಿಂದ ಪುರಸ್ಕೃತರಾದರು.

ಪಂದ್ಯಾಕೂಟದುದ್ದಕ್ಕೂ ಚಕ್ರವರ್ತಿ ಗೆಳೆಯರ ತಂಡದೊಂದಿಗೆ, ಕೆ.ಪಿ.ಸಿ.ಸಿ ಸದಸ್ಯ ಕೃಷ್ಣಮೂರ್ತಿ ಪಿ.ಎನ್ ರವರು, ಬಿಸಿಲಿನಲ್ಲಿ ಮೂರು ಪಂದ್ಯಗಳ ಅಂಪಾಯರ್ ಆಗಿಯೂ ಕಾರ್ಯನಿರ್ವಹಿಸಿ, ಉದ್ಘಾಟನಾ ಸಮಾರಂಭದಿಂದ ಸಮಾರೋಪದ ವರೆಗೂ ತಂಡದೊಂದಿಗಿದ್ದು ಸಹಕರಿಸಿದರು. ಈ ಸಂದರ್ಭ ಹಿರಿಯ ಕ್ರಿಕೆಟಿಗರೆಲ್ಲರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಕೃಷ್ಣಮೂರ್ತಿ ಪಿ.ಎನ್, ಕೆ.ಶ್ರೀಧರ್, ಇನ್ಸ್ಪೆಕ್ಟರ್ ರಾಘವೇಂದ್ರ, ರಾಮಕೃಷ್ಣ , ಭಗತ್ ಸೇನೆಯ ಚೇತನ್, ಧನಿಯ ಕುಮಾರ್, ಗೆಳೆಯರ ಬಳಗದ ಕೆಂಗಲ್ ಅಬೀದ್, ಚಕ್ರವರ್ತಿ ಗೆಳೆಯರ ಬಳಗದ ಸಂಸ್ಥಾಪಕಾಧ್ಯಕ್ಷ ಪ್ರಕಾಶ್ ಟಿ.ಸಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

ಗಿರೀಶ್ ರಾವ್ ಮಾಲೀಕತ್ವದ ಕ್ರಿಕ್ ಸೇ ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಬಿತ್ತರಿಸಿತ್ತು.

ಆರ್.ಕೆ.ಆಚಾರ್ಯ ಕೋಟ

Exit mobile version