SportsKannada | ಸ್ಪೋರ್ಟ್ಸ್ ಕನ್ನಡ

ಸುಧಿತಿ ಫ್ರೆಂಡ್ಸ್ ತಂಡಕ್ಕೆ ಬೀಜಾಡಿ ಟ್ರೋಫಿ-2019

ಗೆಳೆಯರ ಬಳಗ ಬೀಜಾಡಿ ತಂಡ ಕಳೆದ ಶನಿವಾರ ಹಾಗೂ ರವಿವಾರದಂದು ಬೀಜಾಡಿ ಪಡುಶಾಲೆಯಲ್ಲಿ ಏರ್ಪಡಿಸಿದ್ದ 40 ಗಜಗಳ ಹೊನಲು ಬೆಳಕಿನ ಪಂದ್ಯಾಕೂಟವನ್ನು ಸುಧಿತಿ ಫ್ರೆಂಡ್ಸ್ ಕುಂಭಾಶಿ ಜಯಿಸಿದೆ.

   

ಶನಿವಾರದಂದು ಸ್ಥಳೀಯ ಆಟಗಾರರನ್ನೊಳಗೊಂಡ 6 ಫ್ರಾಂಚೈಸಿಗಳು, ರವಿವಾರದಂದು ಆಯಾಯ ಊರಿನ ತಂಡಗಳು ಸೆಣಸಾಡಿದ್ದವು. ಲೀಗ್ ಹಂತದ ಹೋರಾಟದ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಪ್ಯಾಂಥರ್ಸ್ ಬೀಜಾಡಿ, ಬೀಜಾಡಿ ಬುಲ್ಸ್ ತಂಡವನ್ನು ಸೋಲಿಸಿದರೆ,ಸುಧಿತಿ ಫ್ರೆಂಡ್ಸ್ ,ಗುತ್ತು ಫ್ರೆಂಡ್ಸ್ ಬಲ್ಲಕುಂಜೆ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು. ಅಂತಿಮವಾಗಿ ಕುಂಭಾಶಿಯ ತಂಡ ಬಲ್ಲಕುಂಜೆ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ ಪಡೆಯಿತು. ವಿಶೇಷವಾಗಿ ನೀಡಲಾದ ಶಿಸ್ತಿನ ತಂಡ ಪ್ರಶಸ್ತಿಯನ್ನು ಗುರುಶ್ರೀ ಗುಂಡಿ ಬೈಲ್ ಹಾಗೂ ಕುಟೀರ ಫ್ರೆಂಡ್ಸ್ ಗಿಳಿಯಾರು ತಂಡ ಪಡೆದುಕೊಂಡಿತು.

ವೈಯಕ್ತಿಕ ಪ್ರಶಸ್ತಿಗಳನ್ನು  ಕ್ರಮವಾಗಿ, ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಸುಧಿತಿ ಫ್ರೆಂಡ್ಸ್ ನ ಪವನ್, ಎಮರ್ಜಿಂಗ್ ಪ್ಲೇಯರ್ ಬ್ಲಾಕ್ ಟೈಗರ್ ನ ಶ್ರೇಯಸ್,ಬೆಸ್ಟ್ ಫೀಲ್ಡರ್ ಚವನ್ ಕುಂಜಿಗುಡಿ,ಬೆಸ್ಟ್ ಕೀಪರ್ ಶ್ರೀಧರ್ ಬೀಜಾಡಿ ಪ್ಯಾಂಥರ್ಸ್, ಬೆಸ್ಟ್ ಬೌಲರ್ ಸುಧಾಕರ್ ಸುಧಿತಿ ಫ್ರೆಂಡ್ಸ್, ಬೆಸ್ಟ್ ಬ್ಯಾಟ್ಸ್‌ಮನ್ ಸಂದೇಶ್ ಬೀಜಾಡಿ ಬುಲ್ಸ್,ಸರಣಿ ಶ್ರೇಷ್ಠ ಅಶ್ವಿನ್ ಸುಧಿತಿ ಫ್ರೆಂಡ್ಸ್ ಪಡೆದುಕೊಂಡರು.

ವಿಜೇತ ತಂಡ‌ 25,555 ನಗದು,ದ್ವಿತೀಯ ಸ್ಥಾನಿ ತಂಡ 15,555 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಿತು.

ಶಿಸ್ತು ಹಾಗೂ ಸಮಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ ಈ ಪಂದ್ಯಾಕೂಟ ಸಮಾಜದ ಅಶಕ್ತರಿಗೆ ಸಹಾಯ ಹಾಗೂ ಗ್ರಾಮೀಣ ಮಟ್ಟದ ಆಟಗಾರರ ಪ್ರತಿಭೆಗಳ ಅನಾವರಣದ ಸದುದ್ದೇಶದಿಂದ ಏರ್ಪಡಿಸಲಾಗಿತ್ತು.

ಸಮಾರೋಪ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗಣೇಶ್ ಮಾಸ್ಟರ್,ಸಿರಾಜ್ ರಿಧಾ ಅಮೀನ್,ರಾಜೇಶ್ ಪೂಜಾರಿ,ಸುಭಾಷ್ ಕಾಂಚನ್,ಗೆಳೆಯರ ಬಳಗದ ಅಧ್ಯಕ್ಷ ಅಶೋಕ್ ಪೂಜಾರಿ, ಉಪಾಧ್ಯಕ್ಷ ಗಣೇಶ್ ಅಕ್ಷಾಂತರಿಯ, ಮೀನುಗಾರಿಕಾ ಸೊಸೈಟಿ ಉಪಾಧ್ಯಕ್ಷ ನಾಗೇಶ್ ಆಟೋ, ಪಂದ್ಯಾಕೂಟದ ಮುಖ್ಯ ರೂವಾರಿ ಚಾಲೆಂಜ್ ಗಣೇಶ್ ಹಾಗೂ ಸಚಿನ್.ಎಸ್.ಕುಂದರ್
ಉಪಸ್ಥಿತರಿದ್ದರು.

ಆರ್.ಕೆ.ಆಚಾರ್ಯ ಕೋಟ

Exit mobile version