SportsKannada | ಸ್ಪೋರ್ಟ್ಸ್ ಕನ್ನಡ

ಕ್ರೀಡೆ ದೈನಂದಿನ ಜೀವನದ ಭಾಗವಾಗಲಿ-ಗೌತಮ್ ಶೆಟ್ಟಿ

ಕುಂದಾಪುರ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ “ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ​​(SKPA)” ಇವರ ಆಶ್ರಯದಲ್ಲಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಮತ್ತು  ಕುಂದಾಪುರ- ಬೈಂದೂರು ವಲಯದ “ದಿ.ರಾಬರ್ಟ್ ಡಿಸೋಜಾ ಟ್ರೋಫಿ-2023” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೆನಿಸ್ ಬಾಲ್ ಬಾಕ್ಸ್ ಕ್ರಿಕೆಟ್ ಪಂದ್ಯಾಟ 28.10.2023 ರಂದು ರಂದು ಸಹನಾ ಸ್ಪೋರ್ಟ್ಸ್ ಕ್ಲಬ್ ಕುಂದಾಪುರದಲ್ಲಿ ನಡೆಯಿತು.
 ಪಂದ್ಯಾವಳಿಯನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಉಪಾಧ್ಯಕ್ಷ  ಗೌತಮ್ ಶೆಟ್ಟಿ ಮಾತನಾಡಿ “ಕ್ರೀಡೆ ದೈನಂದಿನ ಜೀವನದ ಭಾಗವಾಗಿರಬೇಕು.ಕ್ರೀಡೆ ನಮಗೆ ಜೀವನ ಕೌಶಲ್ಯವನ್ನು ಕಲಿಸುತ್ತದೆ.ಪೋಷಕರು ತಮ್ಮ ಮಕ್ಕಳಿಗೆ ಕ್ರೀಡೆಯ ಮೇಲಿರುವ ಆಸಕ್ತಿಯನ್ನು ಪ್ರೋತ್ಸಾಹಿಸಬೇಕು ಎಂದರು.
“ಛಾಯಾಚಿತ್ರ ಗ್ರಾಹಕರು ಮೆದುಳು ಮತ್ತು ತಂತ್ರ ವನ್ನು ಬಳಸಿ ನಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತಾರೆ ಎಂಬುದರ ಕುರಿತು ಮಾತನಾಡಿದರು. ಉಡುಪಿ ಜಿಲ್ಲೆಯ ವಿಭಜನೆಯ ನಂತರವೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನಂತೆ  ಒಗ್ಗಟ್ಟಾಗಿದ್ದಾರೆ,ಬಿಡುವಿಲ್ಲದ ವೇಳೆಯಲ್ಲೂ ಸುಳ್ಯದಿಂದ ಬೈಂದೂರಿನವರೆಗೂ ಛಾಯಾಚಿತ್ರಗ್ರಾಹಕರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ ಎಂದರು.”
ಈ ಸಂದರ್ಭ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ,ಸಹನಾ ಗ್ರೂಪ್ಸ್ ನ ಸುರೇಂದ್ರ ಶೆಟ್ಟಿ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೊಶಿಯೇಶನ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Exit mobile version