SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ : ಟಾರ್ಪಡೋಸ್ ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟದ ಪ್ರಶಸ್ತಿ ವಿಜೇತರ ಪಟ್ಟಿ

ಕುಂದಾಪುರ : ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಶ್ರೇಷ್ಠ ತಂಡ ಟಾರ್ಪಡೋಸ್ ಕುಂದಾಪುರದ ನಾಯಕ ಗೌತಮ್ ಶೆಟ್ಟಿ ಸಾರಥ್ಯದಲ್ಲಿ, ಕ್ರಿಕೆಟ್ ಜೊತೆಗೆ ವಿವಿಧ ಕ್ರೀಡಾಸಾಧಕರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ ಮಂಗಳೂರಿನ ಹಳೆಯಂಗಡಿಯಲ್ಲಿ ಸ್ಥಾಪಿಸಿರುವ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಜರುಗಿದ ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟದ ಪ್ರಶಸ್ತಿ ವಿಜೇತರ ಪಟ್ಟಿ.

13 ರ ವಯೋಮಿತಿ ಬಾಲಕಿಯರ ವಿಭಾಗ : ಪ್ರಥಮ- ಮಾಧವ ಕೃಪಾ ಸ್ಕೂಲ್ ಮಣಿಪಾಲ,ದ್ವಿತೀಯ-ಸೈಂಟ್ ಅ್ಯಾಗ್ನೆಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಂಗಳೂರು,ತೃತೀಯ-ಎಸ್.ಎಂ.ಎಸ್ ಇಂಗ್ಲೀಷ್ ಮೀಡಿಯಂ‌ ಸ್ಕೂಲ್

13 ರ ವಯೋಮಿತಿ ಬಾಲಕರ ವಿಭಾಗ : ಪ್ರಥಮ-ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಂಗಳೂರು, ದ್ವಿತೀಯ-ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ, ತೃತೀಯ-ಡೆಲ್ಲಿ ಪಬ್ಲಿಕ್ ಸ್ಕೂಲ್ ಮಂಗಳೂರು ಹಾಗೂ ಮಾಧವ ಕೃಪಾ ಸ್ಕೂಲ್ ಮಣಿಪಾಲ

16 ರ ವಯೋಮಿತಿ ಬಾಲಕರ ವಿಭಾಗ : ಪ್ರಥಮ-ಡೆಲ್ಲಿ ಪಬ್ಲಿಕ್ ಸ್ಕೂಲ್ ಮಂಗಳೂರು, ದ್ವಿತೀಯ-ಶ್ರೀ ಚೈತನ್ಯಾ ಟೆಕ್ನೋ ಸ್ಕೂಲ್ ಮಂಗಳೂರು, ತೃತೀಯ-ಮಾಧವ ಕೃಪಾ ಸ್ಕೂಲ್ ಮಂಗಳೂರು ಹಾಗೂ ನಾರಾಯಣ ಗುರು ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಲ್ಪೆ

16 ರ ವಯೋಮಿತಿ ಬಾಲಕಿಯರು : ಪ್ರಥಮ-ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಂಗಳೂರು, ದ್ವಿತೀಯ-ಡೆಲ್ಲಿ ಪಬ್ಲಿಕ್ ಸ್ಕೂಲ್ ಮಂಗಳೂರು, ತೃತೀಯ-ಶಾರದಾ ವಿದ್ಯಾನಿಕೇತನ ತಲಪಾಡಿ ಹಾಗೂ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮಂಗಳೂರು.

ಈ ಎಲ್ಲಾ ಪ್ರಶಸ್ತಿ ವಿಜೇತರನ್ನು ಪಂದ್ಯಾಕೂಟದ ಮುಖ್ಯ ರೂವಾರಿ ಟಾರ್ಪಡೋಸ್ ಟೇಬಲ್ ಟೆನ್ನಿಸ್ ಕೋಚ್ ಅಶ್ವಿನ್ ಪಡುಕೋಣೆ(ITTF Level 3) ಅಭಿನಂದಿಸಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ಸುರತ್ಕಲ್ ಪರಿಸರದ ಟೆನ್ನಿಸ್ ಕ್ರಿಕೆಟ್ ನ ಪ್ರಸಿದ್ಧ ತಂಡ ಮಾರುತಿ ಮುಕ್ಕ ತಂಡದ ಶ್ರೇಷ್ಠ ಗೂಟರಕ್ಷಕ ಹಾಗೂ ಆಲ್ ರೌಂಡರ್ ಶ್ರೀಯುತ ಶೈಲೇಶ್ ಸುವರ್ಣ ಹಾಗೂ ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದ 100 ಮೀ ಓಟ ಹಾಗೂ ಹೈಜಂಪ್ ನಲ್ಲಿ ಚಿನ್ನದ ಪದಕ ಗಳಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಂಸ್ಥೆಯ ಸೀನಿಯರ್ ಮೆನೇಜರ್ ಬಬಿತಾ ಶೆಟ್ಟಿ ಮಂಗಳೂರು ಇವರು ವಿಜೇತರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ಆರ್.ಕೆ.ಆಚಾರ್ಯ ಕೋಟ

Exit mobile version