SportsKannada | ಸ್ಪೋರ್ಟ್ಸ್ ಕನ್ನಡ

ಕಾರ್ಕಳ-ಸಹಾರ ಪ್ರೀಮಿಯರ್ ಲೀಗ್ 2021ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ.

ಟೀಮ್ ಸಹಾರ  ಕಾರ್ಕಳ ಇವರ ಆಶ್ರಯದಲ್ಲಿ  ಕಾರ್ಕಳ ದ ಕ್ರಿಕೆಟ್  ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ,ಫೆಬ್ರವರಿ  22 ರಿಂದ 27 ರ ತನಕ ಕಾರ್ಕಳದ ಗಾಂಧಿ ಮೈದಾನ ದಲ್ಲಿ  ಟೆನ್ನಿಸ್ ಬಾಲ್, ಅಂಡರ್ ಆರ್ಮ್  ಕ್ರಿಕೆಟ್ ಟೂರ್ನಮೆಂಟ್  ಸಹಾರ ಪ್ರೀಮಿಯರ್  ಲೀಗ್ 2021  ಸೀಸನ್ 1 ಆಯೋಜಿಸಲಾಗಿದೆ.

ಒಟ್ಟು 16 ಆಹ್ವಾನಿತ  ತಂಡಗಳು ಭಾಗವಹಿಸಲಿದ್ದು,ಲೀಗ್ ಮಾದರಿಯಲ್ಲಿ ಪಂದ್ಯಾಕೂಟ ಸಾಗಲಿದೆ.ಪ್ರಥಮ ಪ್ರಶಸ್ತಿ ವಿಜೇತ ತಂಡ 50, 021 ನಗದು,ದ್ವಿತೀಯ ಸ್ಥಾನಿ 30, 021 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ತನ್ನದಾಗಿಸಿಕೊಳ್ಳಲಿದ್ದಾರೆ.
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. M9ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಪಂದ್ಯಾಕೂಟ ನಿಯಮಗಳು ಈ ಕೆಳಗಿನಂತಿದೆ.
1)ಪ್ರತಿ ತಂಡದಲ್ಲಿ  ಕಾರ್ಕಳ ವಲಯದ 8 ಆಟಗಾರರು ಕಡ್ಡಾಯ 3 ಹೊರವಲಯದ ಆಟಗಾರರಿಗೆ    ಅವಕಾಶ.
2) ಭಾಗವಿಹಿಸುವ ತಂಡಗಳು ದಿನಾಂಕ 01 ಫೆಬ್ರವರಿ   ರ ಒಳಗೆ  ಮುಂಚಿತವಾಗಿ  ಹೆಸರು ನೊಂದಾಯಿಸಬೇಕು.
3) ಫೆಬ್ರವರಿ  05 ಕ್ಕೆ ಲಾರ್ಡ್ಸ್ ಹಾಕಲಾಗುದು ಲಾರ್ಡ್ಸ್ ಹಾಕುವ ಸ್ಥಳದಲ್ಲಿ ಪ್ರತಿ ತಂಡದ ಓರ್ವ ಸದಸ್ಯ ಕಡ್ಡಾಯವಾಗಿ ಹಾಜರಿರಬೇಕು.
4) 15 ಆಟಗಾರರ ಭಾವಚಿತ್ರದೊಂದಿಗೆ ಪ್ಲೇಯರ್  ಫಾರಂ ಅನ್ನು ಫೆಬ್ರವರಿ  5  ಲಾರ್ಡ್ಸ್ ಹಾಕುವಾಗ ವ್ಯವಸ್ಥಾಪಕರಿಗೆ ನೀಡಬೇಕು ನಂತರ  ಆಟಗಾರರನ್ನು ಬದಲಾಯಿಸುವಂತಿಲ್ಲ.
4)ಪ್ಲೇಯರ್ ಫಾರಂ ಅನ್ನು ವ್ಯವಸ್ಥಾಪಕರು ಎಲ್ಲಾ ತಂಡ ಗಳಿಗೆ ನೀಡುತ್ತಾರೆ.
5) ಯಾವುದೇ ಚರ್ಚೆ ಬಂದಲ್ಲಿ ತಂಡದ ನಾಯಕನಿಗೆ ಮಾತ್ರ ಮಾತನಾಡಲು ಅವಕಾಶ.ಅಶಿಸ್ತು ತೋರಿದ ತಂಡವನ್ನು ಕೈ ಬಿಡಲಾಗುತ್ತದೆ.
6)ಪಂದ್ಯಾವಳಿ ಯ ನೀತಿ  ನಿಯಮ ವನ್ನು ಲಾರ್ಡ್ಸ್ ಹಾಕುವ ಸಂದರ್ಭ ಎಲ್ಲಾ ತಂಡದ ಕ್ಯಾಪ್ಟನ್ ಗೆ ವಿವರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ದಾಖಲಿಸಿದ ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ.
+919108141443 (ಸುಹೈಲ್ ಬಿಲ್ಲಿ ),
+919071668113 (ಅಶ್ರಫ್ ಬೈಲೂರ್),
+919740058807 (ಅಝೀಜ್ )..
Exit mobile version