SportsKannada | ಸ್ಪೋರ್ಟ್ಸ್ ಕನ್ನಡ

ಕಾಂಗರೂಗಳನ್ನು ಬಗ್ಗು ಬಡಿದ ಭಾರತ- ವರ್ಷದ ಮೊದಲ ಸರಣಿ ಕೈ ವಶ..

ಕಾಂಗರೂಗಳನ್ನು ಬಗ್ಗು ಬಡಿದ ಭಾರತ-
ವರ್ಷದ ಮೊದಲ ಸರಣಿ ಕೈ ವಶ..

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸೀಸ್ ವಿರುದ್ಧದ ಅಂತಿಮ ಏಕದಿನ ಸರಣಿ ನಿರ್ಣಾಯಕ ಪಂದ್ಯವನ್ನು 7 ವಿಕೆಟ್ ಗಳಿಂದ ಜಯಿಸಿ 2-1 ರಿಂದ ವರ್ಷದ ಮೊದಲ ಸರಣಿ(Paytm)ವಶಪಡಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್,
ಸ್ಟೀವ್ ಸ್ಮಿತ್ ಶತಕದ ನೆರವಿನಿಂದ 50 ಓವರ್ ಗಳಲ್ಲಿ
9 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತ್ತು.
ಗುರಿ ಬೆಂಬತ್ತಿದ ಭಾರತ ಆರಂಭಿಕ ಆಟಗಾರ
ರೋಹಿತ್ ಶರ್ಮಾ ರ 6 ಭರ್ಜರಿ ಸಿಕ್ಸ್ ಹಾಗೂ 8 ಬೌಂಡರಿಗಳ ಸಹಿತ 119 ರನ್ ಗಳಿಸಿದರು.ಇದರೊಂದಿಗೆ ರೋಹಿತ್ ಶರ್ಮಾ ಏಕದಿನ ಪಂದ್ಯದ 29 ನೇ ಶತಕದೊಂದಿಗೆ 9,000 ರನ್ ಗಳ ಮೈಲಿಗಲ್ಲನ್ನು ತಲುಪಿದರು.

ಒಂದನೇ ಕ್ರಮಾಂಕದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ 89 ರನ್ ಸಹಿತ 136 ರನ್ ಜೊತೆಯಾಟ ಗೆಲುವಿನ ಸನಿಹ ಕೊಂಡೊಯ್ದರೆ, ರೋಹಿತ್,ಕೊಹ್ಲಿ ನಿರ್ಗಮನದ ಬಳಿಕ ಅಂತಿಮ ಹಂತದಲ್ಲಿ ಸಿಡಿದ ಶ್ರೇಯಸ್ ಅಯ್ಯರ್ ಬಿರುಸಿನ 44 ರನ್ ನೆರವಿನಿಂದ 47.3 ಓವರ್ ಗಳಲ್ಲಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು.

ಶತಕದೊಂದಿಗೆ ರೋಹಿತ್ ಶರ್ಮಾ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ,ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ತೋರಿದ
ಕಪ್ತಾನ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ
ಗೌರವಕ್ಕೆ ಭಾಜನರಾದರು.
ಆರ್.ಕೆ‌.ಆಚಾರ್ಯ ಕೋಟ.

Exit mobile version