Site icon SportsKannada ಸ್ಪೋರ್ಟ್ಸ್ ಕನ್ನಡ

ಕೆ.ಎಲ್ ರಾಹುಲ್, ಕನ್ನಡಿಗ ರಣಜಿ ಸಾಧನೆ ಹೇಗಿದೆ ಗೊತ್ತಾ?

ಕೆ.ಎಲ್ ರಾಹುಲ್, ಕನ್ನಡಿಗ ರಣಜಿ ಸಾಧನೆ ಹೇಗಿದೆ ಗೊತ್ತಾ?

ಕನ್ನಡಿಗ ಕೆ.ಎಲ್ ರಾಹುಲ್ ಐದು ವರ್ಷಗಳ ನಂತರ ರಣಜಿ ರಣರಂಗಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ರಾಹುಲ್ ಆಡಲಿದ್ದಾರೆ. ಈ ಮೂಲಕ ಐದು ವರ್ಷಗಳ ನಂತರ ರಾಹುಲ್ ಕರ್ನಾಟಕ ಪರ ವೈಟ್ & ವೈಟ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಹುಲ್ ಕೊನೆಯ ಬಾರಿ ರಣಜಿ ಪಂದ್ಯವಾಡಿದ್ದು 2019-20ರಲ್ಲಿ. ಈ ವರ್ಷ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಆಡಿದ ನಂತರ ರಾಹುಲ್ ಮತ್ತೆ ರಣಜಿ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸುದೀರ್ಘ ಐದು ವರ್ಷಗಳ ನಂತ್ರ ರಣಜಿ ಕ್ರಿಕೆಟ್’ಗೆ ರಾಹುಲ್ ಕಂಬ್ಯಾಕ್ ಮಾಡಿದ್ದಾರೆ.

ಕರ್ನಾಟಕ ಪರ ರಾಹುಲ್ ಇದುವರೆಗೆ 27 ರಣಜಿ ಪಂದ್ಯಗಳನ್ನಾಡಿದ್ದು, 49 ಇನ್ನಿಂಗ್’ಗಳಿಂದ 61.60 ಸರಾಸರಿಯಲ್ಲಿ 8 ಶತಕ ಹಾಗೂ 13 ಅರ್ಧಶತಕಗಳ ನೆರವಿವಿಂದ 2834 ರನ್ ಗಳಿಸಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 2014-15ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತರ ಪ್ರದೇಶ ವಿರುದ್ಧ ಗಳಿಸಿದ್ದ 337 ರನ್ ಇನ್ನಿಂಗ್ಸ್ ಒಂದರಲ್ಲಿ ರಾಹುಲ್ ಅವರ ಗರಿಷ್ಠ ಮೊತ್ತ.

2013-14ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ 10 ಪಂದ್ಯಗಳಿಂದ 1033 ರನ್ ಗಳಿಸಿದ್ದ ರಾಹುಲ್ ಕರ್ನಾಟಕ ತಂಡ 14 ವರ್ಷಗಳ ನಂತರ ರಣಜಿ ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 

ರಾಹುಲ್ ರಣಜಿ ಸಾಧನೆ

ಪಂದ್ಯ: 27

ಇನ್ನಿಂಗ್ಸ್: 49

ರನ್: 2834

ಸರಾಸರಿ: 61.60

ಬೆಸ್ಟ್: 337

ಶತಕ: 08

ಅರ್ಧಶತಕ: 13

Exit mobile version