SportsKannada | ಸ್ಪೋರ್ಟ್ಸ್ ಕನ್ನಡ

ನೇತಾಜಿ ಕ್ರಿಕೆಟರ್ಸ್ ತಂಡಕ್ಕೆ ಧೋನಿ ಪ್ರೀಮಿಯರ್ ಲೀಗ್-2019 ರ ಕಿರೀಟ.

ಶಾಮೀರ್ ಮಾಲೀಕತ್ವದ S.A.S ಹಾಗೂ SPL ರೂವಾರಿ MKS ಗ್ರೂಪ್ ನ ಮಾಲೀಕ ನದೀಮ್ ಅಖ್ತರ್ ರವರ ಪ್ರಾಯೋಜಕತ್ವದಲ್ಲಿ ಸೋಮಯಾಜಲಹಳ್ಳಿಯ ಈಡನ್ ಗಾರ್ಡನ್ ಅಂಗಣದಲ್ಲಿ ಡಿಸೆಂಬರ್ ಮಾಸಾಂತ್ಯದಲ್ಲಿ ನಡೆದಿದ್ದ
3 ದಿನಗಳ ಕ್ರಿಕೆಟ್ ಪಂದ್ಯಾವಳಿ
“ಧೋನಿ ಪ್ರೀಮಿಯರ್ ಲೀಗ್-2019” ನೇತಾಜಿ ಕ್ರಿಕೆಟರ್ಸ್ ಜಯಿಸಿದೆ.

8 ಫ್ರಾಂಚೈಸಿಗಳು ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದು,
ಲೀಗ್ ಹಂತದ ಹೋರಾಟದ ಬಳಿಕ,ಸೆಮಿಫೈನಲ್ ನಲ್ಲಿ ನೇತಾಜಿ ಕ್ರಿಕೆಟರ್ಸ್ ನಂದಮೂರಿ ಲಯನ್ಸ್ ತಂಡವನ್ನು ಹಾಗೂ ಬ್ರ್ಯಾಂಡ್ ಯುವ ರೈಸಿಂಗ್ ಸ್ಟಾರ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು.ಕುತೂಹಲಕಾರಿ ಫೈನಲ್ ನಲ್ಲಿ ನೇತಾಜಿ,ಬ್ರ್ಯಾಂಡ್ ಯುವ ತಂಡವನ್ನು ಸೋಲಿಸು ಪ್ರಥಮ‌ ಪ್ರಶಸ್ತಿ ಪಡೆಯಿತು.

ವಿಜೇತ ತಂಡ ತಂಡ ನೇತಾಜಿ 1 ಲಕ್ಷ ನಗದು,ರನ್ನರ್ಸ್ ಬ್ರ್ಯಾಂಡ್ ಯುವ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿತು.
ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ನೇತಾಜಿ ತಂಡದ ಗಿರಿ,ಬೆಸ್ಟ್ ಬೌಲರ್ ನಂದಮೂರಿ ಲಯನ್ಸ್ ನ ಉಮರ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬ್ರ್ಯಾಂಡ್ ಯುವ ದ ವಿನೋದ್ ಪಡೆದುಕೊಂಡರು.

ಅಂತಿಮ ದಿನದ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಸಂದರ್ಭ ಪರಸ್ಪರ ಢಿಕ್ಕಿಯಾಗಿ ಗಾಯಗೊಂಡಿದ್ದ ಭಾನು ಹಾಗೂ ಶ್ರೀಕಾಂತ್ ಅದೇ ದಿನ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು,ಎಂದಿನಂತೆ ಕ್ರಿಕೆಟ್ ತರಬೇತಿಯಲ್ಲಿ ತೊಡಗಿದ್ದಾರೆ.

ಪಂದ್ಯಾವಳಿಯ ನೇರ ಪ್ರಸಾರ M.Sports ಬಿತ್ತರಿಸಿದ್ದು,ರಾಜ್ಯದ ಹಿರಿಯ ಪ್ರಸಿದ್ಧ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ಹಾಗೂ ರಾಘವೇಂದ್ರ ಮಟಪಾಡಿ ಕಾಮೆಂಟ್ರಿ ವಿಭಾಗ ಹಾಗೂ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಆರ್‌.ಕೆ.ಆಚಾರ್ಯ ಕೋಟ…

Exit mobile version